ಸೀಬೆಕಾಯಿ ಮಾರುವ ಮಹಿಳೆಯ ಪ್ರಾಮಾಣಿಕತೆಗೆ ಮಾರು ಹೋದ ಪ್ರಿಯಾಂಕಾ
Priyanka Chopra: ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ನಲ್ಲಿ ಸೆಟಲ್ ಆಗಿ ಬಹಳ ಸಮಯವಾಯ್ತು. ಇದೀಗ ಅವರು ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಶೂಟಿಂಗ್ಗಾಗಿ ವಿಶಾಖಪಟ್ಟಣಂಗೆ ಬಂದಾಗ ನಡೆದ ಒಂದು ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟಿ.

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಟಿ. ಬಾಲಿವುಡ್ನಲ್ಲಿ ಸಖತ್ ಆಗಿ ಮಿಂಚಿ ಟಾಪ್ ನಟಿ ಎನಿಸಿಕೊಂಡ ಬಳಿಕ ಹಾಲಿವುಡ್ಗೆ ಪದಾರ್ಪಣೆ ಮಾಡಿದರು ಈ ನಟಿ. ಹಾಲಿವುಡ್ನಲ್ಲಿ ಇದ್ದರೂ ಸಹ ಭಾರತವನ್ನು ಭಾರತೀಯ ಮೈಂಡ್ ಸೆಟ್ ಅನ್ನು ಪ್ರಿಯಾಂಕಾ ಚೋಪ್ರಾ ಬಿಟ್ಟುಕೊಟ್ಟಿಲ್ಲ. ಇದೀಗ ಹಲವು ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಭಾರತೀಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಇದರ ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದು ಹೋಗಿ ಮಾಡುತ್ತಿದ್ದಾರೆ.
ಮೊದಲಿಗೆ ಹೈದರಾಬಾದ್ನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಬಳಿಕ ಒಡಿಸ್ಸಾನಲ್ಲಿ ಸಹ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇದೀಗ ವಿಶಾಖಪಟ್ಟಣಂ ಸಮೀಪ ನಡೆದ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದರು. ಚಿತ್ರೀಕರಣ ಮುಗಿದ ಬಳಿಕ ಪ್ರಿಯಾಂಕಾ ಚೋಪ್ರಾ ವಿಮಾನ ನಿಲ್ದಾಣಕ್ಕೆ ತೆರಳುವ ಸಮಯದಲ್ಲಿ ನಡೆದ ಅಪರೂಪದ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ, ಇತ್ತೀಚೆಗಷ್ಟೆ ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರಂತೆ. ಅಲ್ಲಿಂದ ಮುಂಬೈಗೆ ಹೋಗಿ, ಮುಂಬೈನಿಂದ ನ್ಯೂಯಾರ್ಕ್ಗೆ ಹೋಗುವುದು ಅವರ ಉದ್ದೇಶವಾಗಿತ್ತಂತೆ. ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುವಾದ ರಸ್ತೆಯ ಬದಿಯಲ್ಲಿ ಕೆಲ ಮಹಿಳೆಯರು ಸೀಬೆಹಣ್ಣು ಮಾರಾಟ ಮಾಡುತ್ತಿದ್ದರಂತೆ. ಅವರಲ್ಲಿ ಒಬ್ಬರ ಬಳಿ ಸೀಬೆಹಣ್ಣು ಖರೀದಿ ಮಾಡಿದರಂತೆ ನಟಿ ಪ್ರಿಯಾಂಕಾ ಚೋಪ್ರಾ.
ಸೀಬೆಹಣ್ಣಿಗೆ 150 ರೂಪಾಯಿಗಳಾದುವೆಂದು ಪ್ರಿಯಾಂಕಾ ಚೋಪ್ರಾಗೆ ಹೇಳಿದ್ದಾರೆ. ಆದರೆ ಪ್ರಿಯಾಂಕಾ ಚೋಪ್ರಾ, 200 ರೂಪಾಯಿ ನೋಟು ಆ ಮಹಿಳೆಯ ಕೈಗೆ ಕೊಟ್ಟು ಚಿಲ್ಲರೆಯನ್ನು ನೀವೇ ಇರಿಸಿಕೊಳ್ಳಿ ಎಂದಿದ್ದಾರೆ. ಆದರೆ ಉಚಿತವಾಗಿ ಬಂದ ಹಣವನ್ನು ತೆಗೆದುಕೊಳ್ಳಲು ಒಪ್ಪದ ಆ ಮಹಿಳೆ, ಪ್ರಿಯಾಂಕಾ ಚೋಪ್ರಾ ಕೈಗೆ ಇನ್ನೆರಡು ಸೀಬೆಹಣ್ಣು ನೀಡಿದರಂತೆ. ಈ ವಿಷಯವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ದಳಪತಿ ವಿಜಯ್ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿಯ ಸಿಹಿ ಮಾತು
ಪ್ರಿಯಾಂಕಾ ಚೋಪ್ರಾ ಇದೀಗ ಮಹೇಶ್ ಬಾಬು, ರಾಜಮೌಳಿಯ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಭಾರತೀಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಇನ್ನು ಹಾಲಿವುಡ್ನಲ್ಲಿ ‘ಹೆಡ್ಸ್ ಆಫ್ ದಿ ಸ್ಟೇಟ್ಸ್’ ಮತ್ತು ‘ದಿ ಬ್ಲಫ್’ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ