
ಚಿತ್ರರಂಗದಲ್ಲಿ ಎಲ್ಲರ ಬದುಕು ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಸ್ಟ್ರಗಲ್ ಸಾಕಷ್ಟು ಇರುತ್ತದೆ. ಕೆಲವರು ಎಷ್ಟೇ ಕಷ್ಟಪಟ್ಟರೂ ಗೆಲುವು ಸಿಗೋದಿಲ್ಲ. ಇನ್ನೂ ಕೆಲವರಿಗೆ ಕಷ್ಟ ಪಟ್ಟ ಬಳಿಕ ಒಂದು ದೊಡ್ಡ ಯಶಸ್ಸು ಸಿಗುತ್ತದೆ. ಗೆಲವು ಸಿಕ್ಕರೂ ಆಫರ್ ಬರೋದಿಲ್ಲ. ಈಗ ನಾವು ಹೇಳುತ್ತಿರುವ ಕಲಾವಿದನ ಸ್ಥಿತಿಯೂ ಅದೇ ರೀತಿ ಇತ್ತು. ಇವರು ಕನ್ನಡದಲ್ಲೂ ನಟಿಸಿದ್ದಾರೆ. ಅವರು ಬೆಂಗಾಳಿ ಕಲಾವಿದ. ಅವರು ಬೇರಾರೂ ಅಲ್ಲ ಜಿಶು ಸೇನ್ಗುಪ್ತಾ.
ಜಿಶು ಅವರು ರಂಗಭೂಮಿ ಕಲಾವಿದ ಉಜ್ವಲ್ ಸೇನ್ಗುಪ್ತಾ ಮಗ. ಅವರು ಹುಟ್ಟಿದ್ದು ಕೋಲ್ಕತ್ತಾದಲ್ಲಿ. ಅವರು ತಮ್ಮ ಕಷ್ಟದ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ‘ಒಮ್ಮೆ ನಮ್ಮ ಬಳಿ ಊಟಕ್ಕೆ ಹಣವಿಲ್ಲದ ಸಂದರ್ಭಗಳಿದ್ದವು. ನನ್ನ ತಂದೆ ಬಿಲ್ ಪಾವತಿಸಲು ಸಾಧ್ಯವಾಗದ ಕಾರಣ ಮನೆಯಲ್ಲಿ ಆರು ತಿಂಗಳ ಕಾಲ ವಿದ್ಯುತ್ ಇರಲಿಲ್ಲ. ಕ್ಯಾಂಡಲ್‌ಲೈಟ್ ಡಿನ್ನರ್ ಎಂದರೇನು ಎಂದು ನನ್ನ ತಾಯಿ ನಮಗೆ ನಿಜವಾಗಿಯೂ ಕಲಿಸಿದರು. ಆದರೆ ನಾವು ತುಂಬಾ ಸಂತೋಷದಿಂದಿದ್ದೆವು. ನಮ್ಮ ಬಳಿ ಹಣವಿರಲಿಲ್ಲ, ಆದರೆ ಜೀವನ ಸುಂದರವಾಗಿತ್ತು’ ಎಂದಿದ್ದಾರೆ ಅವರು.
ಜಿಶು ಅವರು ನಟನಾಗುವ ಆಕಾಂಕ್ಷೆ ಎಂದಿಗೂ ಹೊಂದಿರಲಿಲ್ಲ. ಅವರು ಪಾಕೆಟ್ ಮನಿ ಗಳಿಸಲು ಸಂಜೆ ಡ್ರಮ್ಸ್ ನುಡಿಸುತ್ತಿದ್ದರು. ಕ್ರಿಕೆಟ್ ಎಂದರೆ ಇಷ್ಟ. 1998ರಲ್ಲಿ 18 ನೇ ವಯಸ್ಸಿನಲ್ಲಿ ಅವರು ತಮ್ಮ ಮೊದಲ ದೂರದರ್ಶನ ಕಾರ್ಯಕ್ರಮ ‘ಮಹಾಪ್ರಭು’ದಲ್ಲಿ ನಟಿಸಿದರು ಅಲ್ಲಿಂದ ಪರಿಸ್ಥಿತಿ ಬದಲಾಯಿತು. ಅವರ ಆಡಿಷನ್ ಕೆಟ್ಟದಾಗಿ ನಡೆದರೂ, ಅವರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ:ಬಾಲಿವುಡ್ ಹೀರೋ ಜೊತೆ ನಟಿ ರಶ್ಮಿಕಾ ಮಂದಣ್ಣ ವಿಡಿಯೋ ಲೀಕ್
ಧಾರಾವಾಹಿಗಳಲ್ಲಿ ನಟಿಸುವಾಗ ಅವರಿಗೆ ಪ್ರತಿ ದಿನಕ್ಕೆ 250 ರೂಪಾಯಿ ಸಿಗುತ್ತಿತ್ತು. ಅವರು ಆ ಬಳಿಕ ಸ್ಟಾರ್ ಕಿರುತೆರೆ ಕಲಾವಿದನಾಗಿ ಬೆಳೆದರು. 2001ರಲ್ಲಿ ಧಾರಾವಾಹಿ ತೊರೆದು ನಟನೆಗೆ ಬರಲು ನಿರ್ಧರಿಸಿದರು.
‘ಧಾರಾವಾಹಿ ಹಿಟ್ ಆದರೂ ದುರದೃಷ್ಟ ತರುವ ನಟ ಎಂದು ಹಣೆಪಟ್ಟಿ ಕಟ್ಟಲಾಯಿತು. ಯಾರೂ ನನಗೆ ಕೆಲಸ ಕೊಡಲಿಲ್ಲ. ಅದು ನನ್ನನ್ನು ಚಲನಚಿತ್ರಗಳನ್ನು ಮಾಡಲು ಪ್ರೇರೇಪಿಸಿತು. ನಾನು ಧಾರಾವಾಹಿ ಬೇಡ ಎಂದು ಹೇಳಿದ ನಂತರ, ನಾನು ಆರು ತಿಂಗಳು ಮನೆಯಲ್ಲಿ ಕುಳಿತಿದ್ದೆ. ನನಗೆ ಯಾವುದೇ ಕೆಲಸವಿರಲಿಲ್ಲ. ಹಣ ಕಡಿಮೆಯಾಗುತ್ತಿದ್ದ ಕಾರಣ ನಾನು ಸಿನಿಮಾ ಮಾಡಿದೆ’ ಎಂದಿದ್ದಾರೆ ಅವರು. ನಂತರ ಅವರ ಅದೃಷ್ಟ ಬದಲಾಯಿತು. ಅವರ ಬಳಿ ಈಗ ಕೋಲ್ಕತ್ತಾದಲ್ಲಿ ಮೂರು ಬಂಗಲೆ ಇದೆ. ಬೆಂಜ್, ರೇಂಜ್ ರೋವರ್ ಅಂತಹ ಕಾರಿದೆ. ಅವರು ಕನ್ನಡದಲ್ಲಿ ‘ಕೆಡಿ’, ‘ಡೆವಿಲ್’ ಹಾಗೂ ‘45’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ