5ಜಿ ತರಂಗಾಂತರ: ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಜೂಹಿ ಚಾವ್ಲಾ

| Updated By: ರಾಜೇಶ್ ದುಗ್ಗುಮನೆ

Updated on: Jul 29, 2021 | 7:42 PM

ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ ಎನ್ನುವ ಬದಲು ತಿರಸ್ಕರಿಸಿದೆ ಎಂದು ಘೋಷಿಸಿ ಅಂತ ಜೂಹಿ ಮನವಿ ಮಾಡಿದ್ದರು. ನ್ಯಾಯಾಲಯ ಈ ಬಗ್ಗೆ ಅಸಮಾಧಾನ ಹೊರ ಹಾಕಿತ್ತು. 

5ಜಿ ತರಂಗಾಂತರ: ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಜೂಹಿ ಚಾವ್ಲಾ
ನಟಿ ಜೂಹಿ ಚಾವ್ಲಾ
Follow us on

5G ಮೊಬೈಲ್ ತಂತ್ರಜ್ಞಾನವನ್ನು ಜಾರಿಗೆ ತಂದರೆ ಪ್ರಾಣಿ ಹಾಗೂ ಪಕ್ಷಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ, 5ಜಿ ಅನುಷ್ಠಾನಗೊಳ್ಳಬಾರದು ಎಂದು ಬಾಲಿವುಡ್​ ನಟಿ ಜೂಹಿ ಚಾವ್ಲಾ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಸಂಬಂಧ ಕೋರ್ಟ್​ ಅವರಿಗೆ 20 ಲಕ್ಷ ದಂಡ ಕೂಡ ವಿಧಿಸಿತ್ತು. ಅಲ್ಲದೆ, ಅವರ ಅರ್ಜಿಯನ್ನು ವಜಾ ಮಾಡಿತ್ತು. ಇದಕ್ಕೆ ಸಂಬಂಧಿಸಿ ಜೂಹಿ ಮೇಲ್ಮನವಿ ಸಲ್ಲಿಸಿದ್ದರು. ಈಗ ಈ ಮೇಲ್ಮನವಿಯವನ್ನು ಅವರು ಹಿಂಪಡೆದಿದ್ದಾರೆ.        

5ಜಿ ತರಂಗಾಂತರಗಳು ಮಾನವರು ಮತ್ತು ಇತರ ಜೀವಿಗಳ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಸರಿಯಾದ ಅಧ್ಯಯನ ನಡೆದಿಲ್ಲ. ಸಂಭಾವ್ಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿ ಜೂಹಿ ಚಾವ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.  ಚಾವ್ಲಾ ಸಲ್ಲಿಸಿದ್ದ ಮೊಕದ್ದಮೆಯನ್ನು ಜೂನ್ 4 ರಂದು ನ್ಯಾಯಾಲಯ ವಜಾಗೊಳಿಸಿತ್ತು. ಚಾವ್ಲಾ ಮತ್ತು ಇತರ ಇಬ್ಬರಿಗೆ ದಂಡವನ್ನು ವಿಧಿಸಿತ್ತು.

ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ ಎನ್ನುವ ಬದಲು ತಿರಸ್ಕರಿಸಿದೆ ಎಂದು ಘೋಷಿಸಿ ಅಂತ ಜೂಹಿ ಮನವಿ ಮಾಡಿದ್ದರು. ನ್ಯಾಯಾಲಯ ಈ ಬಗ್ಗೆ ಅಸಮಾಧಾನ ಹೊರ ಹಾಕಿತ್ತು.  ಅಲ್ಲದೆ, ನ್ಯಾಯಮೂರ್ತಿ ಜಯಂತ್‌ ನಾಥ್‌ ಅವರು ಜೂಹಿ ಪರ ವಕೀಲರಿಗೆ ಅರ್ಜಿಯನ್ನು ವಾಪಸ್‌ ಪಡೆಯಲು ಅವಕಾಶ ಕಲ್ಪಿಸಿದ್ದರು. ಅಂತೆಯೇ ಈಗ ಜೂಹಿ ಅರ್ಜಿ ಹಿಂಪಡೆದಿದ್ದಾರೆ.

ಏನಿದು ಪ್ರಕರಣ?

ಭಾರತದಲ್ಲಿ 5G ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ನಟಿ ಜೂಹಿ ಚಾವ್ಲಾ ಕಾನೂನು ವ್ಯಾಜ್ಯ ಹೂಡಿದ್ದರು. 5G ತಂತ್ರಜ್ಞಾನವು ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್​ಗೆ ಜನರು ಮತ್ತು ಪ್ರಾಣಿಗಗಳನ್ನು 10ರಿಂದ 100 ಪಟ್ಟಿನ ತನಕ ಒಡ್ಡುತ್ತದೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಈ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ನ ಮತ್ತೊಂದು ಪೀಠಕ್ಕೆ ವರ್ಗಾಯಿಸಿತ್ತು.

ಇದನ್ನೂ ಓದಿ: 5G ಪ್ರಕರಣದಲ್ಲಿ ₹20 ಲಕ್ಷ ದಂಡ ಪ್ರಶ್ನಿಸಿ ನಟಿ ಜೂಹಿ ಚಾವ್ಲಾ ಅರ್ಜಿ; ಈ ನಡೆ ಆಘಾತ ತಂದಿದೆ ಎಂದ ದೆಹಲಿ ಕೋರ್ಟ್