ವಿಡಿಯೋ ಸಮೇತ ಕರಣ್​ ಜೋಹರ್​ ಬಣ್ಣ ಬಯಲು ಮಾಡಿದ ನಟಿ ಕಂಗನಾ ರಣಾವತ್​

Kangana Ranaut: ಕರಣ್​ ಜೋಹರ್​ ನಿರ್ದೇಶನದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲೇ ಕಂಗನಾ ಅವರು ಕರಣ್​ ಜೋಹರ್​ ವಿರುದ್ಧ ಗುಡುಗುತ್ತಿದ್ದಾರೆ.

ವಿಡಿಯೋ ಸಮೇತ ಕರಣ್​ ಜೋಹರ್​ ಬಣ್ಣ ಬಯಲು ಮಾಡಿದ ನಟಿ ಕಂಗನಾ ರಣಾವತ್​
ಕಂಗನಾ ರಣಾವತ್​, ಕರಣ್​ ಜೋಹರ್​

Updated on: Jul 31, 2023 | 10:50 PM

ನಟಿ ಕಂಗನಾ ರಣಾವತ್​ ಅವರು ಬಾಲಿವುಡ್​ನ (Bollywood) ಅನೇಕರ ಜೊತೆ ವಿರೋಧ ಕಟ್ಟಿಕೊಂಡಿದ್ದಾರೆ. ಅದರಲ್ಲೂ ಕರಣ್​ ಜೋಹರ್ ಅವರನ್ನು ಕಂಡರೆ ಕಂಗನಾ ಉರಿದು ಬೀಳುತ್ತಾರೆ. ಈಗಾಗಲೇ ಅನೇಕ ಸಂದರ್ಭಗಳಲ್ಲಿ ಅವರು ಕರಣ್​ ಜೋಹರ್​ (Karan Johar) ವಿರುದ್ಧ ಕಿಡಿಕಾರಿದ್ದಾಗಿದೆ. ಬಾಲಿವುಡ್​ನಲ್ಲಿ ನೆಪೋಟಿಸಂ ಇರುವುದಕ್ಕೆ ಕರಣ್​ ಜೋಹರ್​ ಅವರೇ ಪ್ರಮುಖ ಕಾರಣ ಎಂಬುದು ಕಂಗನಾ ರಣಾವತ್​ ಅವರ ವಾದ. ಈಗ ಅದಕ್ಕಿಂತಲೂ ಗಂಭೀರವಾದ ಆರೋಪವೊಂದನ್ನು ಕಂಗನಾ ರಣಾವತ್​ (Kangana Ranaut) ಮಾಡಿದ್ದಾರೆ. ಕರಣ್​ ಜೋಹರ್​ ಅವರು ಹಣ ಕೊಟ್ಟು ತಮಗೆ ಬೇಕಾದ ರೀತಿಯಲ್ಲಿ ಅಭಿಪ್ರಾಯವನ್ನು ಜನರ ಮೇಲೆ ಹೇರುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಅದಕ್ಕೆ ಸಾಕ್ಷಿ ನೀಡುವಂತಹ ಒಂದೆರಡು ವಿಡಿಯೋಗಳನ್ನೂ ಅವರು ಸೋಶಿಯಲ್​ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಒಂದು ಸಿನಿಮಾ ಚೆನ್ನಾಗಿ ಓಡಿಲ್ಲದ್ದಿದ್ದರೂ ಅದನ್ನು ಪಿಆರ್​ ಮೂಲಕ ನಾನು ಸೂಪರ್​ ಹಿಟ್​ ಅಂತ ಹೇಳಿಕೊಳ್ಳಬಲ್ಲೆ’ ಎಂದು ಕರಣ್​ ಜೋಹರ್​ ಅವರು ಹೇಳಿದ್ದ ವಿಡಿಯೋವನ್ನು ಕಂಗನಾ ರಣಾವತ್​ ಈಗ ಶೇರ್​ ಮಾಡಿಕೊಂಡಿದ್ದಾರೆ. ‘ದುಡ್ಡು ಕೊಟ್ಟು ನಾನು ಏನು ಬೇಕಾದರೂ ಬರೆಸಿಕೊಳ್ಳಬಲ್ಲೆ. ನಾನು ಹೇಳಿದ ಸುದ್ದಿಯೇ ಪ್ರಕಟ ಆಗುತ್ತದೆ’ ಎಂಬರ್ಥದಲ್ಲಿ ಕರಣ್​ ಜೋಹರ್​ ಮಾತನಾಡಿರುವ ಇನ್ನೊಂದು ವಿಡಿಯೋವನ್ನೂ ಕಂಗನಾ ಹಂಚಿಕೊಂಡಿದ್ದಾರೆ. ಇವುಗಳಿಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಕರಣ್​ ಜೋಹರ್​ ಅವರು ಹಣ ಕೊಟ್ಟು ಕೇವಲ ತಮ್ಮ ಸಿನಿಮಾವನ್ನು ಹಿಟ್​ ಅಂತ ಕರೆಸಿಕೊಳ್ಳುತ್ತಾರಾ ಅಥವಾ ಬೇರೆಯವರ ಹಿಟ್​ ಸಿನಿಮಾವನ್ನು ಕೂಡ ಫ್ಲಾಪ್​ ಅಂತ ಹೇಳಿಸುತ್ತಾರಾ’ ಎಂದು ಕಂಗನಾ ರಣಾವತ್​ ಪ್ರಶ್ನೆ ಮಾಡಿದ್ದಾರೆ. ಕರಣ್​ ಜೋಹರ್​ ನಿರ್ದೇಶನ ಮಾಡಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಚಿತ್ರ ಸಾಧಾರಣ ಗಳಿಕೆ ಮಾಡಿದೆ. ಈ ಸಂದರ್ಭದಲ್ಲೇ ಕಂಗನಾ ಅವರು ಕರಣ್​ ಜೋಹರ್​ ವಿರುದ್ಧ ಗುಡುಗುತ್ತಿದ್ದಾರೆ.

ಇದನ್ನೂ ಓದಿ: Karan Johar: ನೆಪೋಟಿಸಂ ಬಗ್ಗೆಯೇ ಒಟಿಟಿಯಲ್ಲಿ ಕಾರ್ಯಕ್ರಮ ಮಾಡಲಿರುವ ಕರಣ್​ ಜೋಹರ್​

ಕಂಗನಾ ರಣಾವತ್​ ಅವರ ಈ ಪೋಸ್ಟ್​ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ನೀವು ಯಾವಾಗಲೂ ಬೇರೆಯವರ ಬಗ್ಗೆ ಯಾಕೆ ಮಾತನಾಡುತ್ತೀರಿ. ನಿಮ್ಮ ಕೆಲಸದ ಮೇಲೆ ಮಾತ್ರ ಫೋಕಸ್​ ಮಾಡಿ. ನಿಮ್ಮ ಸಿನಿಮಾಗಳು ಕೂಡ ಫ್ಲಾಪ್​ ಆಗಿವೆ ತಾನೇ? ಈ ರೀತಿ ಪೋಸ್ಟ್​ ಮಾಡುವುದರಿಂದ ನೀವು ಕರಣ್​ ಜೋಹರ್​ ಅವರ ಸಿನಿಮಾವನ್ನು ಪರೋಕ್ಷವಾಗಿ ಪ್ರಚಾರ ಮಾಡುತ್ತಿದ್ದೀರಿ’ ಎಂದು ಜನರು ಕಮೆಂಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us