AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karan Johar: ನೆಪೋಟಿಸಂ ಬಗ್ಗೆಯೇ ಒಟಿಟಿಯಲ್ಲಿ ಕಾರ್ಯಕ್ರಮ ಮಾಡಲಿರುವ ಕರಣ್​ ಜೋಹರ್​

Disney Plus Hotstar: ನೆಪೋಟಿಸಂ ಕುರಿತಾದ ಈ ಕಾರ್ಯಕ್ರಮಕ್ಕೆ ಬಾಲಿವುಡ್​ನ ಕೆಲವರಿಂದ ವಿರೋಧ ವ್ಯಕ್ತವಾದರೂ ಆಗಬಹುದು. ಮುಖ್ಯವಾಗಿ ಕಂಗನಾ ರಣಾವತ್​ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.

Karan Johar: ನೆಪೋಟಿಸಂ ಬಗ್ಗೆಯೇ ಒಟಿಟಿಯಲ್ಲಿ ಕಾರ್ಯಕ್ರಮ ಮಾಡಲಿರುವ ಕರಣ್​ ಜೋಹರ್​
ಕರಣ್​ ಜೋಹರ್​
ಮದನ್​ ಕುಮಾರ್​
|

Updated on: Jun 13, 2023 | 8:47 AM

Share

ಒಂದಷ್ಟು ವರ್ಷಗಳ ಹಿಂದೆ ನೆಪೋಟಿಸಂ (Nepotism) ಎಂಬ ಪದ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ನಟಿ ಕಂಗನಾ ರಣಾವತ್​ (Kangana Ranaut) ಅವರು ಆ ಪದವನ್ನು ಪರಿಚಯಿಸಿ, ಸಖತ್​ ಪ್ರಚಾರ ಮಾಡಿದರು. ಯಾವುದೇ ಕ್ಷೇತ್ರದಲ್ಲಿ ಹೊರಗಿನವರಿಗೆ ಅವಕಾಶ ನೀಡಿದೇ ಕೇವಲ ತಮ್ಮವರನ್ನೇ ಬೆಳೆಸುತ್ತಾ ಪಕ್ಷಪಾತ ಮಾಡೋದಕ್ಕೆ ನೆಪೋಟಿಸಂ ಎನ್ನಬಹುದು. ಬಾಲಿವುಡ್​ನಲ್ಲಿ ಕೇವಲ ಸ್ಟಾರ್​ ನಟ-ನಟಿಯರ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಾರೆ ಎಂಬ ಕಾರಣಕ್ಕೆ ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ (Karan Johar) ಅವರನ್ನು ನೆಪೋಟಿಸಂನ ಉಸ್ತುವಾರಿ ಎನ್ನಲಾಗುತ್ತದೆ. ಈ ಬಗ್ಗೆ ಎಷ್ಟೇ ಟೀಕೆ ಕೇಳಿಬಂದರೂ ಅವರು ತಲೆ ಕೆಡಿಸಿಕೊಂಡಿಲ್ಲ. ಅಚ್ಚರಿ ಏನೆಂದರೆ ಈಗ ಅವರು ನೆಪೋಟಿಸಂ ಕುರಿತಾಗಿಯೇ ಒಂದು ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ ಎಂಬುದು ತಿಳಿದುಬಂದಿದೆ. ಒಟಿಟಿ ಮೂಲಕ ಈ ಶೋ ಪ್ರಸಾರ ಆಗಲಿದೆ.

ಒಟಿಟಿ ಸಂಸ್ಥೆಗಳ ನಡುವೆ ಸಖತ್​ ಪೈಪೋಟಿ ಇದೆ. ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಸಂಸ್ಥೆ ಕೂಡ ಭಾರತದ ಪ್ರೇಕ್ಷಕರಿಗೆ ಬಗೆಬಗೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಕರಣ್​ ಜೋಹರ್​ ಅವರು ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿಯಲ್ಲಿ ‘ಶೋ ಟೈಮ್​’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲು ತೀರ್ಮಾನಿಸಿದ್ದಾರೆ. ಆ ಶೋ ಸಂಪೂರ್ಣ ನೆಪೋಟಿಸಂ ಕುರಿತಾಗಿ ಇರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಬಾಲಿವುಡ್​ನ ಕೆಲವರಿಂದ ವಿರೋಧ ವ್ಯಕ್ತವಾದರೂ ಆಗಬಹುದು. ಮುಖ್ಯವಾಗಿ ಕಂಗನಾ ರಣಾವತ್​ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಕರಣ್​ ಜೋಹರ್​ ಜೊತೆ ಅಯಾನ್​ ಮುಖರ್ಜಿ ಮುನಿಸು; ‘ಬ್ರಹ್ಮಾಸ್ತ್ರ’ ತಂಡದ ಕಿರಿಕ್​ ಬಹಿರಂಗ

ಹಿಂದಿ ಚಿತ್ರರಂಗದಲ್ಲಿ ಕರಣ್​ ಜೋಹರ್​ ಅವರು ಪ್ರಭಾವಿ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ನಿರೂಪಕನಾಗಿ ಅವರು ಫೇಮಸ್​ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿರುವ ಅವರು ಅನೇಕರಿಗೆ ಅವಕಾಶ ನೀಡಿದ್ದಾರೆ. ಅವರ ಮೇಲೆ ಇರುವ ಆರೋಪಗಳು ಕೂಡ ಹಲವು. ನೆಪೋಟಿಸಂ ಕಾರಣಕ್ಕೆ ಅವರು ಆಗಾಗ ಟೀಕೆಗೆ ಒಳಗಾಗುತ್ತಾರೆ. ಕರಣ್​ ಜೋಹರ್​ ಅವರು ಬಾಲಿವುಡ್​ನಲ್ಲಿ ನಿರ್ದೇಶಕನಾಗಿ 25 ವರ್ಷಗಳನ್ನು ಪೂರೈಸಿದ್ದಾರೆ.

ಇದನ್ನೂ ಓದಿ: ತಬ್ಬಿಕೊಂಡು ರಾಜಿಯಾದ ಪ್ರಿಯಾಂಕಾ-ಕರಣ್​ ಜೋಹರ್​; ಮಧ್ಯ ಮಾತಾಡಿ ನಿಷ್ಠುರವಾಗಿದ್ದು ಕಂಗನಾ

ಕರಣ್​ ಜೋಹರ್​ ಅವರಿಗೆ ಬಾಲಿವುಡ್​ನಲ್ಲಿ ಅನೇಕರ ಜೊತೆ ಆಪ್ತತೆ ಇದೆ. ಶಾರುಖ್​ ಖಾನ್​, ಕಾಜೋಲ್​, ದೀಪಿಕಾ ಪಡುಕೋಣೆ, ಸಲ್ಮಾನ್​ ಖಾನ್​, ರಾಣಿ ಮುಖರ್ಜಿ ಮುಂತಾದವರ ಕುಟುಂಬಗಳಿಗೆ ಕರಣ್​ ಜೋಹರ್​ ಆಪ್ತರಾಗಿದ್ದಾರೆ. ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ವಿವಾದಗಳ ಕಾರಣಕ್ಕೂ ಈ ಕಾರ್ಯಕ್ರಮ ಸುದ್ದಿ ಆಗುತ್ತದೆ. ಕರಣ್​ ಜೋಹರ್​ ಜೊತೆಗಿನ ಸ್ನೇಹಕ್ಕಾಗಿಯೇ ಅನೇಕ ಸೆಲೆಬ್ರಿಟಿಗಳು ಈ ಶೋನಲ್ಲಿ ಭಾಗಿ ಆಗಿದ್ದುಂಟು. ಈಗ ‘ಶೋ ಟೈಮ್​’ ಕಾರ್ಯಕ್ರಮದ ಸ್ವರೂಪ ಹೇಗಿರಬಹುದು ಎಂಬುದನ್ನು ತಿಳಿದುಕೊಳ್ಳುವ ಕೌತುಕ ಮೂಡಿದೆ.

ಇದನ್ನೂ ಓದಿ: ನೆಪೋಟಿಸಂ ಅಂದ್ರೆ ನೆನಪಾಗೋದೇ ಕರಣ್​ ಜೋಹರ್​

ಮೇ 25ರಂದು ಕರಣ್​ ಜೋಹರ್​ ಅವರು ಬರ್ತ್​ಡೇ ಆಚರಿಸಿಕೊಂಡಿದ್ದರು. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ಫಸ್ಟ್​ ಲುಕ್​ ಕೂಡ ಅಂದು ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಇದರಲ್ಲಿ ಅಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸಿದ್ದಾರೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್