Kangana Ranaut: ‘ನಿಮ್ಮನ್ನು ಬಂಧಿಸಿಕೊಳ್ಳಬೇಡಿ, ಸ್ವತಂತ್ರರಾಗುವತ್ತ ಯೋಚಿಸಿ’; ಹಿಜಾಬ್ ಪ್ರಕರಣದ ಕುರಿತು ಕಂಗನಾ ಪ್ರತಿಕ್ರಿಯೆ

| Updated By: shivaprasad.hs

Updated on: Feb 11, 2022 | 8:12 AM

Hijab Row: ಕರ್ನಾಟಕದಲ್ಲಿ ಹಿಜಾಬ್- ಕೇಸರಿ ಶಾಲ ವಿವಾದ ಜೋರಾಗಿದೆ. ಇದಕ್ಕೆ ಚಿತ್ರರಂಗದ ಹಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Kangana Ranaut: ‘ನಿಮ್ಮನ್ನು ಬಂಧಿಸಿಕೊಳ್ಳಬೇಡಿ, ಸ್ವತಂತ್ರರಾಗುವತ್ತ ಯೋಚಿಸಿ’; ಹಿಜಾಬ್ ಪ್ರಕರಣದ ಕುರಿತು ಕಂಗನಾ ಪ್ರತಿಕ್ರಿಯೆ
ಕಂಗನಾ ರಣಾವತ್
Follow us on

ಕರ್ನಾಟಕದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಒಳಗೆ ಹಿಜಾಬ್​ಗೆ ಅನುಮತಿ ಬೇಕು- ಬೇಡ ಪ್ರಕರಣಕ್ಕೆ (Hijab Row) ಸಂಬಂಧಪಟ್ಟಂತೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರದಂದು ಹೈಕೋರ್ಟ್ (Karnataka High Court) ಈ ಕುರಿತು ಪ್ರಕರಣದ ವಿಚಾರಣೆ ಮುಗಿಯುವವರೆಗೆ ಯಾವುದೇ ಧಾರ್ಮಿಕ ಉಡುಪುಗಳು ವಿದ್ಯಾ ಸಂಸ್ಥೆಯ ಆವರಣದೊಳಗೆ ಧರಿಸುವುದನ್ನು ನಿರ್ಬಂಧಿಸಿ ಮೌಖಿಕವಾಗಿ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಗನಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯ ಮೂಲಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘‘ನಿಮಗೆ ಧೈರ್ಯ ತೋರ್ಪಡಿಸಬೇಕು ಎಂದಿದ್ದರೆ ಅಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೇ ಧೈರ್ಯವನ್ನು ತೋರಿಸಿ’’ ಎಂದು ಸವಾಲು ಹಾಕಿರುವ ಕಂಗನಾ, ‘ಸ್ವತಂತ್ರರಾಗುವತ್ತ ಯೋಚಿಸಿ, ನಿಮ್ಮನ್ನು ನೀವೆ ಬಂಧಿಸಿಕೊಳ್ಳುವತ್ತಲ್ಲ’ ಎಂದು ಸಲಹೆ ನೀಡಿದ್ದಾರೆ.

ಬರಹಗಾರ ಆನಂದ್ ರಂಗನಾಥನ್ ಹಂಚಿಕೊಂಡಿರುವ ಪೋಸ್ಟ್ ಒಂದರ ಸ್ಕ್ರೀನ್​ಶಾಟ್ ಹಂಚಿಕೊಂಡಿರುವ ಕಂಗನಾ, ಅದರಲ್ಲಿ ಇರಾನ್ ಮಹಿಳೆಯರು ಈ ಹಿಂದೆ ಹಾಗೂ ಪ್ರಸ್ತುತ ಇರುವ ಸ್ಥಿತಿಗತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇತಿಹಾಸದಿಂದ ಪಾಠ ಕಲಿಯದವರು ಅದನ್ನು ಮತ್ತೆ ಪುನರಾವರ್ತಿಸುತ್ತಾರೆ ಎಂದು ಕಂಗನಾ ಹೇಳಿದ್ದಾರೆ. ಬರಹಗಾರ ಆನಂದ್ ರಂಗನಾಥನ್ ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದರ ವಿರುದ್ಧವಾಗಿದ್ದಾರೆ. ಇದೀಗ ಕಂಗನಾ ಕೂಡ ಇದೇ ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕಂಗನಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಕಂಗನಾ ಹಂಚಿಕೊಂಡಿರುವ ಸ್ಟೋರಿ

ಖ್ಯಾತ ನಟರಾದ ಕಮಲ್ ಹಾಸನ್, ರೀಚಾ ಛಡ್ಡಾ, ಸ್ವರಾ ಭಾಸ್ಕರ್, ರಮ್ಯಾ ಸೇರಿದಂತೆ ಹಲವು ತಾರೆಯರು ಹಿಜಾಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬರಹಗಾರ, ಸಾಹಿತಿ ಜಾವೇದ್ ಅಖ್ತರ್ ಪ್ರಕರಣದ ಕುರಿತು ಟ್ವೀಟ್ ಮಾಡಿ, ತಾವು ಕೂಡ ವಿದ್ಯಾ ಸಂಸ್ಥೆಯಲ್ಲಿ ಬುರ್ಖಾ, ಹಿಜಾಬ್​ಅನ್ನು ಬೆಂಬಲಿಸುವುದಿಲ್ಲ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಗೂಂಡಾಗಿರಿ ನಡೆಸುವುದನ್ನು ವಿರೋಧಿಸುತ್ತೇನೆ ಎಂದ ಹೇಳಿದ್ದರು.

ಪ್ರಸ್ತುತ ನ್ಯಾಯಾಲಯ ನೀಡಿರುವ ಮೌಖಿಕ ಆದೇಶವೇನು?

ಕರ್ನಾಟಕದ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಸಂಘರ್ಷ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್​ ಸರ್ಕಾರಿ ವಕೀಲರು ಹಾಗೂ ಅರ್ಜಿದಾರರ ವಕೀಲರ ವಾದಗಳನ್ನು ಆಲಿಸಿತು. ಪ್ರಕರಣದಲ್ಲಿ ಹಲವು ಸೂಕ್ಷ್ಮಗಳು ಇರುವ ಹಿನ್ನೆಲೆಯಲ್ಲಿ ವಿಸ್ತೃತ ವಿಚಾರಣೆಯ ಅಗತ್ಯವಿದೆ ಅಭಿಪ್ರಾಯಪಟ್ಟು, ಪ್ರಕರಣವನ್ನು ಸೋಮವಾರಕ್ಕೆ (ಫೆ.14) ಮುಂದೂಡಿತು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳು ಶೀಘ್ರ ಆರಂಭವಾಗಬೇಕು. ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ. ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುವಂತಿಲ್ಲ ಎಂದು ನ್ಯಾಯಾಲಯವು ಮೌಖಿಕ ಆದೇಶದಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು. ಸೋಮವಾರದಿಂದ ಪ್ರತಿದಿನ ವಿಚಾರಣೆ ನಡೆಸುತ್ತೇವೆ. ಸದ್ಯಕ್ಕೆ ಮಧ್ಯಂತರ ಆದೇಶ ಕೊಡಲು ಇಚ್ಛಿಸುತ್ತೇವೆ. ವಿಚಾರಣೆ ಮುಂದಿಯುವವರೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸಬಾರದು. ರಾಜ್ಯದಲ್ಲಿ ಆದಷ್ಟು ಬೇಗ ಶಾಲಾ ಕಾಲೇಜುಗಳು ಮತ್ತೆ ಆರಂಭವಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹೇಳಿದ್ದಾರೆ.

ಇದನ್ನೂ ಓದಿ:

ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣ ಆಗಿದೆ: ಹಿಜಾಬ್​ ವಿವಾದಕ್ಕೆ ಕಮಲ್​ ಹಾಸನ್​, ರಮ್ಯಾ ಪ್ರತಿಕ್ರಿಯೆ​

Karnataka High Court: ಶಾಲೆಗಳಿಗೆ ಶಾಲು, ಹಿಜಾಬ್ ಬೇಡ: ಮೌಖಿಕ ಸೂಚನೆ ಕೊಟ್ಟು ಫೆ 14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​