Kangana Ranaut: ‘ಧಾಕಡ್​’ ಹೀನಾಯವಾಗಿ ಸೋತರೂ ಕಂಗನಾಗೆ ಕಡಿಮೆ ಆಗಿಲ್ಲ ಆ್ಯಕ್ಷನ್​ ಸಿನಿಮಾದ ಉತ್ಸಾಹ

|

Updated on: Jun 14, 2023 | 7:00 AM

Kangana Ranaut Next Movie: ಭಾರಿ ನಿರೀಕ್ಷೆ ಇಟ್ಟುಕೊಂಡು ಕಂಗನಾ ರಣಾವತ್​ ನಟಿಸಿದ್ದ ‘ಧಾಕಡ್​’ ಸಿನಿಮಾ 2022ರ ಮೇ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಆ ಸಿನಿಮಾ ಹೀನಾಯವಾಗಿ ಸೋತಿತ್ತು.

Kangana Ranaut: ‘ಧಾಕಡ್​’ ಹೀನಾಯವಾಗಿ ಸೋತರೂ ಕಂಗನಾಗೆ ಕಡಿಮೆ ಆಗಿಲ್ಲ ಆ್ಯಕ್ಷನ್​ ಸಿನಿಮಾದ ಉತ್ಸಾಹ
ಕಂಗನಾ ರಣಾವತ್​
Follow us on

ನಟಿ ಕಂಗನಾ ರಣಾವತ್​ (Kangana Ranaut) ಅವರು ಹಲವು ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲ ರೀತಿಯ ಪಾತ್ರಗಳಿಗೂ ಬಣ್ಣ ಹಚ್ಚಿ ಅವರು ಸೈ ಎನಿಸಿಕೊಂಡಿದ್ದಾರೆ. ಆದರೆ ಪ್ರತಿ ಬಾರಿಯೂ ಅವರಿಗೆ ಯಶಸ್ಸು ಸಿಕ್ಕಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಅವರ ಲೆಕ್ಕಾಚಾರ ಕೈಕೊಟ್ಟಿದ್ದುಂಟು. ಭಾರಿ ನಿರೀಕ್ಷೆ ಇಟ್ಟುಕೊಂಡು ಅವರ ನಟಿಸಿದ್ದ ‘ಧಾಕಡ್​’ ಸಿನಿಮಾ (Dhaakad Movie) 2022ರ ಮೇ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಆ ಸಿನಿಮಾ ಹೀನಾಯವಾಗಿ ಸೋತಿತ್ತು. ಸಾಹಸಪ್ರಧಾನ ಸಿನಿಮಾ ಆಗಿದ್ದರೂ ಕೂಡ ಜನರು ಅದಕ್ಕೆ ಮೆಚ್ಚುಗೆ ಸೂಚಿಸಲಿಲ್ಲ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ‘ಧಾಕಡ್​’ ಸಿನಿಮಾ ಗಳಿಸಿದ್ದು ಕೇವಲ ಮೂರೂವರೆ ಕೋಟಿ ರೂಪಾಯಿ ಮಾತ್ರ! ಹಾಗಂತ ಕಂಗನಾ ಅವರಿಗೆ ಆ್ಯಕ್ಷನ್​ ಸಿನಿಮಾಗಳ (Action Movies) ಮೇಲಿನ ಕ್ರೇಜ್​ ಕಡಿಮೆ ಆಗಿಲ್ಲ. ಈಗ ಅವರು ಮತ್ತೆ ಅಂಥದ್ದೇ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಇಷ್ಟು ದಿನಗಳ ಕಾಲ ಕಂಗನಾ ರಣಾವತ್​ ಅವರು ‘ಎಮರ್ಜೆನ್ಸಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅದರಲ್ಲಿ ಅವರು ಇಂದಿರಾ ಗಾಂಧಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗ ಹೊಸ ಆ್ಯಕ್ಷನ್​ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಅದನ್ನು ಅಭಿಮಾನಿಗಳಿಗೆ ತಿಳಿಸುವ ಸಲುವಾಗಿ ಸೋಶಿಯಲ್​ ಮೀಡಿಯಾದಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ್ಯಕ್ಷನ್​ ಸಿನಿಮಾ ಆದ್ದರಿಂದ ದೈಹಿಕವಾಗಿ ಸಾಕಷ್ಟು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಸಸ್ಪೆಂಡ್​ ಆಗಿದ್ದ ಟ್ವಿಟರ್​ ಖಾತೆಯನ್ನು ಮರಳಿ ಪಡೆದ ನಂತರ ಕಂಗನಾ ರಣಾವತ್​ ಅವರು ಸಖತ್​ ಆ್ಯಕ್ಟೀವ್​ ಆಗಿದ್ದರು. ಪರೋಕ್ಷವಾಗಿ ಮತ್ತು ಕೆಲವೊಮ್ಮೆ ನೇರವಾಗಿ ಕೂಡ ‘ಪಠಾಣ್​’ ಚಿತ್ರವನ್ನು ಅವರು ಕುಟುಕಿದ್ದರು. ಇದರಿಂದ ಶಾರುಖ್​ ಖಾನ್​ ಅಭಿಮಾನಿಗಳಿಗೆ ಸಿಟ್ಟು ಬಂದಿತ್ತು. ಹಾಗಾಗಿ ಕಂಗನಾ ನಟನೆಯ ‘ಧಾಕಡ್​’ ಚಿತ್ರದ ಸೋಲನ್ನು ನೆಟ್ಟಿಗರು ನೆನಪಿಸಿದ್ದರು. ಆಗ ತಮ್ಮ ಸಿನಿಮಾದ ಸೋಲನ್ನು ಕಂಗನಾ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: Kangana Ranaut: ‘ಡ್ರಗ್ಸ್​ ತೆಗೆದುಕೊಳ್ಳುವ, ಸ್ತ್ರೀಲೋಲ ನಟನಿಗೆ ರಾಮನ ಪಾತ್ರವೇ? ಇದೆಂಥ ಕಲಿಯುಗ’: ಕಂಗನಾ ಕಿಡಿಕಾರಿದ್ದು ಯಾರ ಬಗ್ಗೆ?

‘ಹೌದು, ಧಾಕಡ್​ ಸಿನಿಮಾದ್ದು ಐತಿಹಾಸಿಕ ಸೋಲು. ಅದನ್ನು ನಾನು ಯಾವತ್ತು ತಳ್ಳಿ ಹಾಕಿದ್ದೇನೆ? ಈಗ ಶಾರುಖ್​ ಖಾನ್​ಗೆ ಸಿಕ್ಕಿರುವುದು ಕಳೆದ ಹತ್ತು ವರ್ಷಗಳಲ್ಲಿ ಮೊದಲ ಗೆಲುವು. ಅವರಿಗೆ ಸಿಕ್ಕಂತೆಯೇ ನಮಗೂ ಭಾರತ ಒಂದು ಅವಕಾಶ ನೀಡುತ್ತೆ ಎಂಬ ಭರವಸೆ ಇದೆ’ ಎಂದು ಕಂಗನಾ ರಣಾವತ್​ ಟ್ವೀಟ್​ ಮಾಡಿದ್ದರು. ಆ ಸಿನಿಮಾ ಅಷ್ಟು ಹೀನಾಯವಾಗಿ ಸೋತರೂ ಕೂಡ ಅವರು ಮತ್ತೆ ಆ್ಯಕ್ಷನ್​ ಸಿನಿಮಾ ಮಾಡಲು ಹೊರಟಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Kangana Ranaut: ‘ನೀವು ಒಮ್ಮೆ ನನಗೆ ಹೊಡೆದರೆ, ನಾನು ನಿಮಗೆ ಸಾಯೋತನಕ ಹೊಡೆಯುತ್ತೇನೆ’: ಕಂಗನಾ ವಾರ್ನಿಂಗ್

ಕಂಗನಾ ರಣಾವತ್​ ಅಭಿಮಾನಿಗಳು ‘ಎಮರ್ಜೆನ್ಸಿ’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾವನ್ನು ಸ್ವತಃ ಕಂಗನಾ ನಿರ್ದೇಶಿಸುತ್ತಿದ್ದಾರೆ. ಅಲ್ಲದೇ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಹಾಗಾಗಿ ತಮ್ಮ ಆಸ್ತಿಯನ್ನೆಲ್ಲ ಅಡವಿಟ್ಟು ಈ ಚಿತ್ರಕ್ಕೆ ಅವರು ಹಣ ಹಾಕಿದ್ದಾರೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ‘ಎಮರ್ಜೆನ್ಸಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಬಾಕ್ಸ್​ ಆಫೀಸ್​ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿ​ದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.