‘ಹಾಸಿಗೆಯಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನಿಮ್ಮ ಐಡೆಂಟಿಟಿ ಅಲ್ಲ’: ಕಂಗನಾ ರಣಾವತ್

|

Updated on: Apr 28, 2023 | 2:35 PM

ಕಂಗನಾ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಆ ಬಗ್ಗೆ ಯಾರೂ ಕರುಣೆ ತೋರಿಸಿಲ್ಲ ಎಂದು ಕಂಗನಾ ಹೇಳಿದ್ದಾರೆ.

‘ಹಾಸಿಗೆಯಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನಿಮ್ಮ ಐಡೆಂಟಿಟಿ ಅಲ್ಲ’: ಕಂಗನಾ ರಣಾವತ್
ಕಂಗನಾ
Follow us on

ಕಂಗನಾ ರಣಾವತ್ (Kangana Ranaut) ಹಲವು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಾರೆ. ಟ್ವಿಟರ್ ಖಾತೆ ರದ್ದಾದ ಬಳಿಕ ಅವರಿಗೆ ಕೈ ಕಟ್ಟಿ ಹಾಕಿದಂತೆ ಆಗಿತ್ತು. ಈಗ ಅವರಿಗೆ ಟ್ವಿಟರ್ ಖಾತೆ ಮರಳಿ ಸಿಕ್ಕಿದೆ. ಹೀಗಾಗಿ, ಹಲವು ವಿಚಾರಗಳ ಬಗ್ಗೆ ಅವರು ಮಾತನಾಡುತ್ತಾ ಇದ್ದಾರೆ. ಈಗ ಅವರು ಜೆಂಡರ್ ನ್ಯೂಟ್ರಾಲಿಟಿ ಬಗ್ಗೆ ಮಾತನಾಡಿದ್ದಾರೆ. ಗಂಡು ಅಥವಾ ಹೆಣ್ಣು ಎಂಬುದರ ಆಧಾರದ ಮೇಲೆ ವ್ಯಕ್ಯಿಯನ್ನು ಅಳೆಯಬಾರದು ಎಂದಿದ್ದಾರೆ. ಟ್ವಿಟರ್​ನಲ್ಲಿ ಈ ಬಗ್ಗೆ ಅವರು ದೀರ್ಘವಾಗಿ ಬರೆದುಕೊಂಡಿದ್ದಾರೆ.

‘ಆಧುನಿಕ ಜಗತ್ತಿನಲ್ಲಿ ಜನರು ನಟಿಯರು ಮತ್ತು ಮಹಿಳಾ ನಿರ್ದೇಶಕಿ ಎಂಬ ಪದಗಳನ್ನು ಬಳಸುವುದಿಲ್ಲ. ಅದರ ಬದಲು ಕಲಾವಿದರು ಮತ್ತು ನಿರ್ದೇಶಕರು ಎಂದು ಬಳಸುತ್ತಾರೆ. ನೀವು ಈ ಜಗತ್ತಿನಲ್ಲಿ ಏನು ಮಾಡುತ್ತಿದ್ದೀರಿ ಎನ್ನುವುದರ ಆಧಾರದ ಮೇಲೆ ನಿಮ್ಮನ್ನು ಗುರುತಿಸಲಾಗುತ್ತದೆಯೇ ಹೊರತು, ನೀವು ಬೆಡ್​ನಲ್ಲಿ ಏನು ಮಾಡುತ್ತೀರಿ ಎನ್ನುವುದರ ಆಧಾರದ ಮೇಲಲ್ಲ. ನಿಮ್ಮ ಲೈಂಗಿಕ ಆದ್ಯತೆಗಳು ಏನೇ ಇದ್ದರೂ ಅದು ಹಾಸಿಗೆಗೆ ಸೀಮಿತ ಆಗಬೇಕು. ಅವುಗಳನ್ನು ನಿಮ್ಮ ಗುರುತಾಗಿ ಮಾಡಿಕೊಳ್ಳಬೇಡಿ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಕಂಗನಾ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಆ ಬಗ್ಗೆ ಯಾರೂ ಕರುಣೆ ತೋರಿಸಿಲ್ಲ ಎಂದು ಕಂಗನಾ ಹೇಳಿದ್ದಾರೆ. ‘ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದವಳು. ಹಾಗಂತ ನನಗೆ ಯಾವುದೇ ರಿಯಾಯಿತಿ ನೀಡಲಿಲ್ಲ. ಸಿನಿಮಾ ಜಗತ್ತಿನಲ್ಲಿ ನನ್ನದೇ ಆದ ಸ್ಥಾನವನ್ನು ನಾನು ಸೃಷ್ಟಿಮಾಡಿಕೊಳ್ಳಬೇಕಿತ್ತು’ ಎಂದು ಕಂಗನಾ ಹೇಳಿದ್ದಾರೆ.

‘ಈ ಜಗತ್ತಿನಲ್ಲಿ ವೈಯಕ್ತಿಕವಾಗಿ ಎಷ್ಟು ಶಕ್ತಿಶಾಲಿ ಆಗಿದ್ದೇವೆ ಎಂಬುದಷ್ಟೇ ಮುಖ್ಯ. ಪುರುಷ, ಮಹಿಳೆ, ದೈಹಿಕವಾಗಿ ಬಲಶಾಲಿ ಅಥವಾ ದುರ್ಬಲ ಎಂಬುದೆಲ್ಲ ಇಲ್ಲ. ನನ್ನ ಸುತ್ತಲಿರುವ ವ್ಯಕ್ತಿಗಳನ್ನು ಮತ್ತು ನನ್ನನ್ನು ನಾನು ಜಡ್ಜ್ ಮಾಡುತ್ತಾ ಬಂದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ: Kangana Ranaut: ಕಂಗನಾಗೆ ನೆನಪಾಗುತ್ತಿದೆ ಆಮಿರ್​ ಖಾನ್​ ಜತೆ ಕಳೆದ ಆ ದಿನಗಳು; ಸಂಬಂಧ ಕೆಟ್ಟಿದ್ದಕ್ಕೆ ಕಾರಣ ತಿಳಿಸಿದ ನಟಿ

ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ನಟಿಸುವುದರ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಅವರು ಮಾಡುತ್ತಿದ್ದಾರೆ. 1975ರಲ್ಲಿ ಇಂದಿರಾ ಗಾಂಧಿ ಅವರ ಹೇರಿದ್ದ ತುತ್ತು ಪರಿಸ್ಥಿತಿ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ