Aamir Khan: ಎಲ್ಲರ ಎದುರು ಆಮಿರ್​ ಖಾನ್​ ಕಾಲಿಗೆ ನಮಸ್ಕರಿಸಿದ ಕಪಿಲ್​ ಶರ್ಮಾ; ಇಬ್ಬರ ನಡುವಿನ ಒಡನಾಟ ಹೇಗಿದೆ?

|

Updated on: May 31, 2023 | 12:42 PM

Kapil Sharma: ಪಂಜಾಬಿ ಸಿನಿಮಾದ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಆಮಿರ್​ ಖಾನ್​ ಹಾಜರಿ ಹಾಕಿದ್ದರು. ಅದೇ ಕಾರ್ಯಕ್ರಮಕ್ಕೆ ಹಾಸ್ಯ ನಟ, ನಿರೂಪಕ ಕಪಿಲ್​ ಶರ್ಮಾ ಕೂಡ ಬಂದಿದ್ದರು.

Aamir Khan: ಎಲ್ಲರ ಎದುರು ಆಮಿರ್​ ಖಾನ್​ ಕಾಲಿಗೆ ನಮಸ್ಕರಿಸಿದ ಕಪಿಲ್​ ಶರ್ಮಾ; ಇಬ್ಬರ ನಡುವಿನ ಒಡನಾಟ ಹೇಗಿದೆ?
ಆಮಿರ್​ ಖಾನ್​, ಕಪಿಲ್​ ಶರ್ಮಾ
Follow us on

ನಟ ಆಮಿರ್ ಖಾನ್​ (Aamir Khan) ಅವರು ಈಗ ಸಿನಿಮಾ ಕೆಲಸಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಸೋತ ನಂತರ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಹೊಸ ಸಿನಿಮಾ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹಾಗಂತ ಅವರು ಚಿತ್ರರಂಗದಿಂದ ದೂರ ಹೋಗಿಲ್ಲ. ಹೊಸಬರಿಗೆ ಸಪೂರ್ಟ್​ ಮಾಡುವ ಕೆಲಸವನ್ನು ಆಮಿರ್​ ಖಾನ್​ ಮುಂದುವರಿಸಿದ್ದಾರೆ. ಇತ್ತೀಚೆಗೆ ‘ಕ್ಯಾರಿ ಆನ್​ ಜಟ್ಟಾ 3’ (Carry On Jatta 3) ಪಂಜಾಬಿ ಸಿನಿಮಾದ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಅವರು ಹಾಜರಿ ಹಾಕಿದ್ದರು. ಅದೇ ಕಾರ್ಯಕ್ರಮಕ್ಕೆ ಹಾಸ್ಯ ನಟ, ನಿರೂಪಕ ಕಪಿಲ್​ ಶರ್ಮಾ (Kapil Sharma) ಕೂಡ ಬಂದಿದ್ದರು. ಆಮಿರ್​ ಖಾನ್​ ಕಾಲಿಗೆ ಕಪಿಲ್​ ಶರ್ಮಾ ನಮಸ್ಕರಿಸಿದರು. ವೇದಿಕೆ ಮೇಲೆ ಇಬ್ಬರೂ ಪರಸ್ಪರರ ಬಗ್ಗೆ ಮಾತನಾಡಿದರು.

ಕಪಿಲ್​ ಶರ್ಮಾಗೆ ಆಮಿರ್​ ಖಾನ್​ ಫ್ಯಾನ್​ ಆಗಿದ್ದಾರೆ. ಆ ಬಗ್ಗೆ ಅವರು ವೇದಿಕೆಯಲ್ಲಿ ಹೇಳಿದ್ದಾರೆ. ‘ನಾನು ಇತ್ತೀಚೆಗೆ ಹೆಚ್ಚು ಕೆಲಸ ಮಾಡುತ್ತಿಲ್ಲ. ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದೇನೆ. ಪ್ರತಿ ರಾತ್ರಿ ಮಲಗುವುದಕ್ಕೂ ಮುನ್ನ ಕಾಮಿಡಿ ವಿಡಿಯೋ ನೋಡುತ್ತೇನೆ. ಕಳೆದ ಕೆಲವು ತಿಂಗಳಿನಿಂದ ಕಪಿಲ್​ ಶರ್ಮಾ ಅವರ ಶೋ ನೋಡುತ್ತಿದ್ದೇನೆ. ನಾನು ಅವರಿಗೆ ಅಭಿಮಾನಿ ಆಗಿದ್ದೇನೆ. ನೀವು ಗಮನಿಸಿರಬಹುದು ಅವರು ವೇದಿಕೆಗೆ ಬಂದಾಗ ನನ್ನ ನಗು ಹಿರಿದಾಯಿತು. ನನ್ನ ಅನೇಕ ಸಂಜೆಗಳನ್ನು ಅವರು ಕಲರ್​ಫುಲ್​ ಆಗಿಸಿದ್ದಾರೆ’ ಎಂದು ಆಮಿರ್​ ಖಾನ್​ ಹೇಳಿದ್ದಾರೆ.

‘ದಿ ಕಪಿಲ್​ ಶರ್ಮಾ ಶೋ’ಗೆ ತಮ್ಮನ್ನು ಕರೆದಿಲ್ಲ ಎಂದು ಆಮಿರ್​ ಖಾನ್​ ಕ್ಯಾತೆ ತೆಗೆದರು. ಆಗ ವೇದಿಕೆ ಮೇಲಿದ್ದ ಎಲ್ಲರೂ ಜೋರಾಗಿ ನಕ್ಕರು. ‘ನಾನು ಅನೇಕ ಬಾರಿ ಅವರನ್ನು ಆಹ್ವಾನಿಸಿದ್ದೆ. ಆದರೆ ಅವರೇ ಬರಲಿಲ್ಲ’ ಎಂದು ಕಪಿಲ್​ ಶರ್ಮಾ ಹೇಳಿದರು. ಅಲ್ಲದೇ, ‘ನೀವು ನಮ್ಮ ಶೋಗೆ ಬಂದರೆ ಅದು ನಮ್ಮ ಸೌಭಾಗ್ಯ’ ಎಂದು ಹೇಳಿದರು. ಶೀಘ್ರದಲ್ಲೇ ಕಪಿಲ್​ ಶರ್ಮಾ ಶೋಗೆ ಆಮಿರ್​ ಖಾನ್ ಬರಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ಇದನ್ನೂ ಓದಿ: Aamir Khan: ‘ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್​ ಖಾನ್​ ಮದುವೆ ಆಗ್ತಾರೆ’; ಬ್ರೇಕಿಂಗ್​ ನ್ಯೂಸ್​ ನೀಡಿದ ಕೆಆರ್​ಕೆ

ವೈಯಕ್ತಿಕ ಕಾರಣದಿಂದಲೂ ಅಮಿರ್​ ಖಾನ್​ ಆಗಾಗ ಸುದ್ದಿ ಆಗುತ್ತಾರೆ. ಅವರು ಕಿರಣ್​ ರಾವ್​ ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದರು. ವಿಚ್ಛೇದನ ನೀಡಿದ ಬಳಿಕ ಅವರ ಬಗ್ಗೆ ಅನೇಕ ಬಗೆಯ ಗಾಸಿಪ್​ಗಳು ಹಬ್ಬಿದ್ದುಂಟು. ಅವರು ನಟಿ ಫಾತಿಮಾ ಸಹಾ ಶೇಖ್​​ ಜೊತೆ ಹೆಚ್ಚು ಆಪ್ತವಾಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರಿಬ್ಬರ ನಡುವೆ ಇರುವಂತಹ ಸಂಬಂಧ ಎಂಥದ್ದು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆಮಿರ್​ ಖಾನ್ ಮತ್ತು ಫಾತಿಮಾ ಸನಾ ಶೇಖ್​​ ಅವರು ಮದುವೆ ಆಗಬಹುದು ಎಂಬ ಗುಮಾನಿ ಕೂಡ ಅನೇಕರಿಗೆ ಇದೆ. ಆ ಗುಮಾನಿ ಹೆಚ್ಚಾಗುವ ರೀತಿಯಲ್ಲಿ ಇತ್ತೀಚೆಗೆ ಒಂದು ವಿಡಿಯೋ ವೈರಲ್​ ಆಗಿತ್ತು. ಆಮಿರ್​ ಖಾನ್​ ಮತ್ತು ಫಾತಿಮಾ ಸನಾ ಶೇಖ್​​ ಒಟ್ಟಾಗಿ ಆಟ ಆಡಿದ್ದರು. ಆ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.