ಕರಣ್ ಜೋಹರ್ ಅವರು ‘ಕಾಫಿ ವಿತ್ ಕರಣ್’ ಶೋನ 8ನೇ ಸೀಸನ್ ಆರಂಭಿಸಿದ್ದಾರೆ. ಇತ್ತೀಚೆಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್ ಸಿಂಗ್ ಮೊದಲ ಅತಿಥಿ ಆಗಿದ್ದರು. ಏನೋ ಹೇಳುವ ಭರದಲ್ಲಿ ದೀಪಿಕಾ ಅವರು ಹಳೆಯ ಘಟನೆ ಬಗ್ಗೆ ಮಾತನಾಡಿದ್ದರು. ರಣವೀರ್ ಸಿಂಗ್ ಜೊತೆ ಡೇಟ್ ಮಾಡುವಾಗಲೇ ಕೆಲವರ ಜೊತೆ ಸುತ್ತಾಡಿದ್ದಾಗಿ ಅವರು ಹೇಳಿಕೊಂಡಿದ್ದರು. ಈ ಮೂಲಕ ಅವರು ಟ್ರೋಲ್ ಆಗಿದ್ದರು. ಇದಕ್ಕೆ ಕರಣ್ ಜೋಹರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ದೀಪಿಕಾ ಮಾತನಾಡಿದ್ದರು. ‘ನಾನು ರಣವೀರ್ ಸಿಂಗ್ ಜೊತೆ ಡೇಟ್ ಮಾಡುವಾಗ ಕೆಲವರ ಜೊತೆ ಸುತ್ತಾಡಿದೆ. ಆದರೆ, ಯಾರೂ ರಣವೀರ್ ಅಷ್ಟು ಎಗ್ಸೈಟಿಂಗ್ ಅನಿಸಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ದೀಪಿಕಾ ಮಾತಿಗೆ ರಣವೀರ್ ಕೋಪಗೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಕರಣ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಟ್ರೋಲ್ಗಳನ್ನು ಯಾರೂ ನೋಡಲ್ಲ ಎಂದಿದ್ದಾರೆ ಅವರು.
‘ನಿಮಗೆ ಏನು ಮಾಡಬೇಕು ಅನಿಸಿತೋ ಅದನ್ನು ಮಾಡಿ. ಯಾರೂ ಇದನ್ನು ಗಮನಿಸುತ್ತಿಲ್ಲ. ಟ್ರೋಲ್ ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ’ ಎಂದಿದ್ದಾರೆ ಕರಣ್ ಜೋಹರ್. ಈ ಮೂಲಕ ಈ ಟ್ರೋಲ್ಗಳು ಉಪಯೋಗಕ್ಕೆ ಬರುವುದಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದು ಎರಡು ಲಕ್ಷ ರೂಪಾಯಿ ಕಳೆದುಕೊಂಡ ತುಕಾಲಿ ಸಂತೋಷ್
‘ಕಾಫಿ ವಿತ್ ಕರಣ್’ ಶೋನಲ್ಲಿ ವಿವಾದಗಳು ಸೃಷ್ಟಿ ಆಗಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಸಾಕಷ್ಟು ಕಾಂಟ್ರವರ್ಸಿಗಳು ಆಗಿದ್ದವು. ಕೆಲವರ ವೃತ್ತಿ ಜೀವನದ ಮೇಲೆ ಈ ಶೋ ಪ್ರಭಾವ ಬೀರಿದೆ. ಅನೇಕರು ರಣವೀರ್ ಸಿಂಗ್ ಹಾಗೂ ದೀಪಿಕಾ ಶೀಘ್ರವೇ ವಿಚ್ಛೇದನ ಪಡೆಯುತ್ತಾರೆ ಎಂದು ಕೂಡ ಮಾತನಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ