ರಸ್ತೆ ಮೇಲೆಯೇ ಮೊಬೈಲ್​ ಬೀಳಿಸಿಕೊಂಡ ಕತ್ರಿನಾ ತಾಯಿ; ನಿಮ್ಮ ವಾಟ್ಸಾಪ್​ ಚೆಕ್​ ಮಾಡುತ್ತೇವೆ ಎಂದ ಫ್ಯಾನ್ಸ್​

| Updated By: ರಾಜೇಶ್ ದುಗ್ಗುಮನೆ

Updated on: Nov 29, 2021 | 7:44 PM

ಕತ್ರಿನಾ ತಾಯಿ ಸೋಮವಾರ (ನವೆಂಬರ್​ 29) ಶಾಪಿಂಗ್​ಗಾಗಿ ಮುಂಬೈನ ಕೆಲ ಪ್ರಮುಖ ಅಂಗಡಿಗಳಿಗೆ ಭೇಟಿ ನೀಡಿದ್ದರು. ಅವರನ್ನು ಪಾಪರಾಜಿಗಳು ಹಿಂಬಾಲಿಸಿದ್ದರು.

ರಸ್ತೆ ಮೇಲೆಯೇ ಮೊಬೈಲ್​ ಬೀಳಿಸಿಕೊಂಡ ಕತ್ರಿನಾ ತಾಯಿ; ನಿಮ್ಮ ವಾಟ್ಸಾಪ್​ ಚೆಕ್​ ಮಾಡುತ್ತೇವೆ ಎಂದ ಫ್ಯಾನ್ಸ್​
ಕತ್ರಿನಾ ಕೈಫ್​ ತಾಯಿ
Follow us on

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ವಿವಾಹದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಒಂದೆರಡಲ್ಲ. ಈ ಜೋಡಿ ಮದುವೆ ಆಗುತ್ತಿಲ್ಲ ಎಂದು ಕತ್ರಿನಾ ಆಪ್ತ ಬಳಗದವರು ಹೇಳಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಪಾಪರಾಜಿಗಳು ಕತ್ರಿನಾ ಸಂಬಂಧಿಕರ ಬಳಿ, ಅವರ ಆಪ್ತರ ಬಳಿ ಮೈಕ್​ ಹಿಡಿಯುತ್ತಿದ್ದಾರೆ. ಕತ್ರಿನಾ ಮದುವೆ ಬಗ್ಗೆ ಮಾಹಿತಿ ನೀಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಈ ಮಧ್ಯೆ ಕತ್ರಿನಾ ಅವರ ತಾಯಿ ಸುಝಾನ್ನೆ ಶಾಪಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ಳೋಕೆ ಮುಂಬೈ ನಗರದ ಅಂಗಡಿಗಳಿಗೆ ತೆರಳಿ ಶಾಪಿಂಗ್​ ಮಾಡುತ್ತಿದ್ದಾರೆ. ಈ ವೇಳೆ ಅವರ ಮೊಬೈಲ್​ ದಾರಿ ಮಧ್ಯವೇ ಬಿದ್ದಿದೆ. ಇದನ್ನು ನೋಡಿದ ಅಭಿಮಾನಿಗಳು ನಾನಾ ಪ್ರಶ್ನೆ ಕೇಳುತ್ತಿದ್ದಾರೆ.

ಸುಝಾನ್ನೆ ಅವರು ಸೋಮವಾರ (ನವೆಂಬರ್​ 29) ಶಾಪಿಂಗ್​ಗಾಗಿ ಮುಂಬೈನ ಕೆಲ ಪ್ರಮುಖ ಅಂಗಡಿಗಳಿಗೆ ಭೇಟಿ ನೀಡಿದ್ದರು. ಅವರನ್ನು ಪಾಪರಾಜಿಗಳು ಹಿಂಬಾಲಿಸಿದ್ದರು. ಅಷ್ಟೇ ಅಲ್ಲ, ಅವರು ಹೋದಲ್ಲೆಲ್ಲ ಕ್ಯಾಮೆರಾ ಜತೆ ಸಾಗಿದ್ದರು. ಅವರು ಶಾಪಿಂಗ್​​ ಮುಗಿಸಿ ಮರಳಿ ತಮ್ಮ ವಾಹನವನ್ನು ಏರುತ್ತಿದ್ದರು. ಈ ವೇಳೆ ಕಾರಿನಿಂದ ಮೊಬೈಲ್​ ಬಿದ್ದಿದೆ. ಈ ವಿಡಿಯೋವನ್ನು ಶೂಟ್​ ಮಾಡಿ ಪಾಪರಾಜಿಗಳು ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋ ಸಾವಿರಾರು ಬಾರಿ ವೀಕ್ಷಣೆ ಕಂಡಿದೆ. ಈ ಪೋಸ್ಟ್​ಗೆ ಕೆಲ ಅಚ್ಚರಿಯ ಕಮೆಂಟ್​ಗಳು ಕೂಡ ಬಂದಿವೆ.

ಕೆಲವರು ಪಾಪರಾಜಿಗಳ ಬಳಿ ಮೊಬೈಲ್​ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ನಾವು ಆ ಮೊಬೈಲ್​ ತೆಗೆದುಕೊಂಡು ವಾಟ್ಸಾಪ್​ ಪರಿಶೀಲಿಸಬಹುದೇ ಎಂದು ಕೇಳಿದ್ದಾರೆ. ಸದ್ಯ, ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಆದರೆ, ಎಲ್ಲಿಯೂ ಇವರ ಮದುವೆ ಬಗ್ಗೆ ಅಧಿಕೃತ ಮಾಹಿತಿ ಸಿಗುತ್ತಿಲ್ಲ.


ಕೊವಿಡ್ ರೂಪಾಂತರಿ ಒಮಿಕ್ರಾನ್ ವೈರಸ್ ಆತಂಕ ಹೆಚ್ಚಾಗಿದೆ. ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇಂಥ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆ ಏರ್ಪಡಿಸೋದು ಅಪಾಯಕಾರಿ. ಒಬ್ಬರಿಗೆ ಕೊವಿಡ್​ ಅಂಟಿದ್ದರೂ ಹಲವರಿಗೆ ಹಬ್ಬುವ ಸಾಧ್ಯತೆ ಇರುತ್ತದೆ. ಇದು ಸೆಲೆಬ್ರಿಟಿ ಮದುವೆ. ಈ ಕಾರಣಕ್ಕೆ ವಿವಾಹಕ್ಕೆ ಬರುವ ಬಹುತೇಕರು ಸೆಲೆಬ್ರಿಟಗಳೇ ಆಗಿರತ್ತಾರೆ. ಇಂಥ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಹೀಗಾಗಿ, ಕತ್ರಿನಾ-ವಿಕ್ಕಿ ಜೋಡಿ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ.

ಈಗಾಗಲೇ ಮದುವೆ ಆಗುವ ಪ್ರದೇಶದ ಸುತ್ತಮುತ್ತಲು 45 ಹೋಟೆಲ್​ಗಳು ಬುಕ್​ ಆಗಿವೆ. 200 ಅತಿಥಿಗಳು ಮದುವೆಗೆ ಬರುತ್ತಿದ್ದಾರೆ. ಈಗ ಕೊವಿಡ್​ ಭಯದಿಂದ ಅತಿಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಮುಂಬೈನಲ್ಲಿ ಅದ್ದೂರಿಯಾಗಿ ರಿಸೆಪ್ಷನ್​ ಆಯೋಜಿಸಿ, ಆಗ ಹೆಚ್ಚಿನ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳಿಗೆ ಆಮಂತ್ರಣ ನೀಡಲು ಚಿಂತಿಸಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಕತ್ರಿನಾ ಕೈಫ್​-ವಿಕ್ಕಿ ವಿವಾಹಕ್ಕೆ ಕೊರೊನಾ ಅಡ್ಡಗಾಲು; ಮದುವೆ ಬಗ್ಗೆ ಹೊಸ ಅಪ್​ಡೇಟ್​

Published On - 7:20 pm, Mon, 29 November 21