83 Trailer: 1983ರ ವಿಶ್ವಕಪ್ ಗೆಲುವಿನ ಹಿಂದೆ ಭಾರತ ತಂಡ ಪಟ್ಟ ಕಷ್ಟಗಳೇನು ಗೊತ್ತಾ? ‘83’ ಟ್ರೇಲರ್ನಲ್ಲಿದೆ ಝಲಕ್
Kapil Dev's 83: 1983ರಲ್ಲಿ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ ತಯಾರಾಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ.
ರಣವೀರ್ ಸಿಂಗ್ (Ranveer Singh) ವೃತ್ತಿಜೀವನದಲ್ಲಿ ಒಂದಕ್ಕಿಂತ ಒಂದು ಡಿಫರೆಂಟ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಗೆಲ್ಲುತ್ತಿದ್ದಾರೆ. ಅವರ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಗೆ ‘83’ ಚಿತ್ರ (83 Movie) ಕೂಡ ಸೇರ್ಪಡೆ ಆಗುವ ನಿರೀಕ್ಷೆ ದಟ್ಟವಾಗಿದೆ. ಕಬೀರ್ ಖಾನ್ (Kabir Khan) ನಿರ್ದೇಶನದ ಈ ಸಿನಿಮಾ ಡಿ.24ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ದೀಪಿಕಾ ಪಡುಕೋಣೆ (Deepika Padukone) ಕೂಡ ಈ ಚಿತ್ರದಲ್ಲೊಂದು ಪಾತ್ರ ಮಾಡಿದ್ದಾರೆ. 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈಗ ಟ್ರೇಲರ್ (83 Movie Trailer) ಬಿಡುಗಡೆ ಆಗಿದ್ದು, ಭಾರಿ ಹೈಪ್ ಸೃಷ್ಟಿ ಮಾಡಿದೆ. ಕನ್ನಡಕ್ಕೂ ಈ ಸಿನಿಮಾ ಡಬ್ ಆಗಿ ತೆರೆಕಾಣುತ್ತಿದೆ ಎಂಬುದು ವಿಶೇಷ. ಸದ್ಯ ಟ್ರೇಲರ್ ಮೂಲಕ ‘83’ ಚಿತ್ರ ಧೂಳೆಬ್ಬಿಸುತ್ತಿದೆ.
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ‘83’ ಸಿನಿಮಾದ ಟ್ರೇಲರ್ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ. ಟೀಮ್ ಇಂಡಿಯಾ 1983ರಲ್ಲಿ ವಿಶ್ವಕಪ್ ಗೆದ್ದಾಗ ಪರಿಸ್ಥಿತಿ ಹೇಗಿತ್ತು? ಪ್ರತಿಯೊಬ್ಬ ಆಟಗಾರರು ಎದುರಿಸಿದ ಕಷ್ಟಗಳೇನು ಎಂಬುದನ್ನೆಲ್ಲ ಈ ಟ್ರೇಲರ್ ವಿವರಿಸುತ್ತಿದೆ. ಕೇವಲ ಟ್ರೇಲರ್ ನೋಡಿದ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಇನ್ನು ಪೂರ್ತಿ ಸಿನಿಮಾ ಎಷ್ಟು ಎಮೋಷನ್ ಆಗಿ ಮೂಡಿಬಂದಿರಬಹುದು ಎಂಬ ನಿರೀಕ್ಷೆ ಮನೆ ಮಾಡಿದೆ.
ಮೂಲತಃ ಹಿಂದಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತೆಲುಗಿನಲ್ಲಿ ‘83’ ರಿಲೀಸ್ ಆಗಲಿದೆ. ಕನ್ನಡ ಅವತರಣಿಕೆಯನ್ನು ಸುದೀಪ್ ಬಿಡುಗಡೆ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.
ಸುದೀಪ್ ಅವರು ಬಹಳ ಖುಷಿಯಿಂದ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ‘ಕನ್ನಡದಲ್ಲಿ ತೆರೆ ಕಾಣುತ್ತಿರುವ ‘83’ ಸಿನಿಮಾವನ್ನು ಅರ್ಪಿಸಲು ನನಗೆ ಸಂತೋಷ ಆಗುತ್ತದೆ. ಕ್ರಿಕೆಟ್ ಎಂಬುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು. ಇದು ನಿಜಕ್ಕೂ ಬಹು ನಿರೀಕ್ಷೆಯ ಸಿನಿಮಾ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೇನ್ಮೆಂಟ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.
ಇದನ್ನೂ ಓದಿ:
ಓಟಿಟಿಯಲ್ಲಿ ಡಿಸೆಂಬರ್ ಧಮಾಕಾ; ಮನರಂಜನೆ ನೀಡಲು ಬರುತ್ತಿವೆ ಬಹುನಿರೀಕ್ಷಿತ ಸಿನಿಮಾ, ವೆಬ್ ಸಿರೀಸ್
‘ನಾಗಿಣಿ’ ಸೀರಿಯಲ್ ನಟಿಯರಿಗೆ ರಣವೀರ್ ಸಿಂಗ್ ಪೈಪೋಟಿ; ಸ್ನೇಕ್ ಡ್ಯಾನ್ಸ್ ಕಂಡು ನಿರ್ಮಾಪಕಿ ಫಿದಾ