Salman Khan: ಸದ್ದು ಮಾಡುತ್ತಲೇ ಇಲ್ಲ ಸಲ್ಲು ಚಿತ್ರ; ‘ಅಂತಿಮ್’ ಇದುವರೆಗೆ ಗಳಿಸಿದ್ದೆಷ್ಟು?

Antim Box Office Collection: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರವು ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ನಾಲ್ಕು ದಿನಗಳ ಬಾಕ್ಸಾಫೀಸ್ ಲೆಕ್ಕಾಚಾರ ಇಲ್ಲಿದೆ.

Salman Khan: ಸದ್ದು ಮಾಡುತ್ತಲೇ ಇಲ್ಲ ಸಲ್ಲು ಚಿತ್ರ; ‘ಅಂತಿಮ್’ ಇದುವರೆಗೆ ಗಳಿಸಿದ್ದೆಷ್ಟು?
ಸಲ್ಮಾನ್ ಖಾನ್, ಆಯುಶ್ ಶರ್ಮಾ
Follow us
TV9 Web
| Updated By: shivaprasad.hs

Updated on: Nov 30, 2021 | 4:09 PM

ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡಿದ್ದ ಸಲ್ಮಾನ್ ಖಾನ್ ನಟನೆಯ ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರ ಬಿಡುಗಡೆಯ ನಂತರ ಮೌನವಾಗಿದೆ. ಅರ್ಥಾತ್ ಬಾಕ್ಸಾಫೀಸ್ ವಿಚಾರದಲ್ಲಿ ಚಿತ್ರದ ಗಳಿಕೆ ಕುಸಿದಿದೆ. ಇದಕ್ಕೆ ಕಾರಣಗಳೇನು ಎಂಬ ಚರ್ಚೆ ಬಾಲಿವುಡ್ ಅಂಗಳದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಈ ನಡುವೆ ಚಿತ್ರದ ನಾಲ್ಕನೇ ದಿನದ ಗಳಿಕೆಯ ವರದಿ ಹೊರಬಂದಿದ್ದು, ವೀಕೆಂಡ್​ನಲ್ಲೂ ಚಿತ್ರದ ಗಳಿಕೆ ಸಾಧಾರಣ ಮಟ್ಟದಲ್ಲಿಯೇ ಇದೆ. ಅಲ್ಲದೇ ಸೋಮವಾರ ಚಿತ್ರದ ಕಲೆಕ್ಷನ್ ಮತ್ತಷ್ಟು ಕುಸಿದಿದೆ. ಖ್ಯಾತ ನಿರ್ದೇಶಕ ಮಹೇಶ್ ಮಾಂಜ್ರೇಕರ್ ಆಕ್ಷನ್- ಕಟ್ ಹೇಳಿರುವ ‘ಅಂತಿಮ್’ ಚಿತ್ರದ ಬಾಕ್ಸಾಫೀಸ್ ವರದಿ ಇಲ್ಲಿದೆ. ಚಿತ್ರವು ಸೋಮವಾರ (ನವೆಂಬರ್ 29) ₹ 2.75 – ₹ 3 ಕೋಟಿ ಗಳಿಕೆ ಮಾಡಿದೆ. ಇದರಿಂದಾಗಿ ಒಟ್ಟಾರೆ ಚಿತ್ರದ ಕಲೆಕ್ಷನ್ ₹ 21 ಕೋಟಿಗೆ ಏರಿಕೆಯಾಗಿದೆ.

ಬಾಕ್ಸಾಫೀಸ್ ಇಂಡಿಯಾ ಈ ಕುರಿತು ವರದಿ ಬಿಡುಗಡೆ ಮಾಡಿದ್ದು, ‘‘ಅಂತಿಮ್ ಚಿತ್ರದ ಗಳಿಕೆ ಸೋಮವಾರವ 35 ರಿಂದ 40 ಪ್ರತಿಶತ ಕುಸಿತವಾಗಿದೆ. ಇದು ಪ್ರತಿ ಸೋಮವಾರ ಆಗುವ ಮಾಮೂಲಿ ಕುಸಿತ. ಅದಾಗ್ಯೂ ಈ ಚಿತ್ರದವನ್ನು ಗಮನಿಸಿ ಹೇಳುವುದಾದರೆ ಸೋಮವಾರ ಗಳಿಸಿರುವ ₹ 2.75- 3 ಕೋಟಿ ಒಳ್ಳೆಯ ಮೊತ್ತ’’ ಎಂದು ಹೇಳಿದೆ.

ಅಲ್ಲದೇ ಈ ವಾರಾಂತ್ಯಕ್ಕೆ ಚಿತ್ರ ಎಷ್ಟು ಗಳಿಸಬಹುದು ಎಂಬ ಅಂದಾಜನ್ನೂ ವರದಿಯಲ್ಲಿ ಹೇಳಲಾಗಿದೆ. ಮೊದಲ ವಾರಾಂತ್ಯಕ್ಕೆ ‘ಅಂತಿಮ್’ ಚಿತ್ರ ₹ 28 ಕೋಟಿ ಗಳಿಸುವ ನಿರೀಕ್ಷೆ ಇದೆ ಎಂದು ಬಾಕ್ಸಾಫೀಸ್ ಇಂಡಿಯಾ ಹೇಳಿದೆ. ಅಂತಿಮ್ ಚಿತ್ರ ಬಿಡುಗಡೆಯ ದಿನ ₹ 5.03 ಕೋಟಿ, ಎರಡನೇ ದಿನ ₹ 6.03 ಕೋಟಿ ಹಾಗೂ ಭಾನುವಾರ ₹ 7.55 ಕೋಟಿ ಗಳಿಸಿತ್ತು. ಒಟ್ಟಾರೆ ಮೊದಲ ಮೂರು ದಿನದಲ್ಲಿ ₹ 18.61 ಕೋಟಿ ಗಳಿಸಿತ್ತು.

ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಕೇವಲ ಅರ್ಧ ಪ್ರತಿಶತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದು ಚಿತ್ರದ ಗಳಿಕೆಗೆ ಬಹುದೊಡ್ಡ ಹಿನ್ನೆಡೆಯಾಗಿದೆ. ಆದರೆ ಈ ವಾತಾವರಣದಲ್ಲೂ ಅಕ್ಷಯ್ ಕುಮಾರ್- ಕತ್ರಿನಾ ಕೈಫ್ ನಟನೆಯ ಸೂರ್ಯವಂಶಿ ಅತ್ಯುತ್ತಮ ಗಳಿಕೆ ಮಾಡಿತ್ತು. ಅಲ್ಲದೇ ಚಿತ್ರವು ಬಾಕ್ಸಾಫೀಸ್​ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಆದರೆ ಸಲ್ಲು ನಟನೆಯ ಚಿತ್ರ ಗಳಿಕೆಯಲ್ಲಿ ಹಿಂದುಳಿದಿದೆ. ‘ಅಂತಿಮ್​: ದಿ ಫೈನಲ್​ ಟ್ರುತ್​’ ಚಿತ್ರದಲ್ಲಿ ಸಲ್ಮಾನ್​ ಖಾನ್​ ಸಿಖ್​ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಅವರ ಭಾಮೈದ ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಬಣ್ಣ ಹಚ್ಚಿದ್ದಾರೆ. ಆಯುಷ್ ಶರ್ಮಾ ಪಾತ್ರ ಪೋಷಣೆಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ:

ಡಿಸೆಂಬರ್​ ಪೂರ್ತಿ ಮನರಂಜನೆಯ​ ಸುಗ್ಗಿ; ಪ್ರತಿ ವಾರವೂ ಬಿಗ್​ ರಿಲೀಸ್​: ಇಲ್ಲಿದೆ ಪೂರ್ತಿ ಲಿಸ್ಟ್​

ಜೀ ಕನ್ನಡದಲ್ಲಿ ‘ಗೋಲ್ಡನ್​ ಗ್ಯಾಂಗ್​’ ರಿಯಾಲಿಟಿ ಶೋ ಸಾರಥ್ಯ ವಹಿಸಿದ ನಟ ಗಣೇಶ್​

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್