ಜೀ ಕನ್ನಡದಲ್ಲಿ ‘ಗೋಲ್ಡನ್​ ಗ್ಯಾಂಗ್​’ ರಿಯಾಲಿಟಿ ಶೋ ಸಾರಥ್ಯ ವಹಿಸಿದ ನಟ ಗಣೇಶ್​

Golden Star Ganesh: ‘ಗೋಲ್ಡನ್ ಗ್ಯಾಂಗ್’ ಒಂದು ಅಪರೂಪದ ಕಾರ್ಯಕ್ರಮ. ಇದು ತುಂಬ ಥ್ರಿಲ್ಲಿಂಗ್​ ಆಗಿರಲಿದ್ದು ಕನ್ನಡ ಸಿನಿಮಾ ಮತ್ತು ಕಿರುತೆರೆ ಲೋಕದ ಹಲವು ಕಲಾವಿದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜೀ ಕನ್ನಡದಲ್ಲಿ ‘ಗೋಲ್ಡನ್​ ಗ್ಯಾಂಗ್​’ ರಿಯಾಲಿಟಿ ಶೋ ಸಾರಥ್ಯ ವಹಿಸಿದ ನಟ ಗಣೇಶ್​
‘ಗೋಲ್ಡನ್ ಸ್ಟಾರ್’ ಗಣೇಶ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 30, 2021 | 2:10 PM

ಕನ್ನಡದ ಮನರಂಜನಾ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಇದೆ. ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ (Reality Show) ಮೂಲಕವೂ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಜೀ ಕನ್ನಡ (Zee Kannada) ವಾಹಿನಿ ಈಗ ಹೊಸದೊಂದು ರಿಯಾಲಿಟಿ ಶೋ ಪರಿಚಯಿಸುತ್ತಿದೆ. ಇದಕ್ಕೆ ‘ಗೋಲ್ಡನ್​ ಗ್ಯಾಂಗ್​’ (Golden Gang) ಎಂದು ಹೆಸರು ಇಡಲಾಗಿದೆ. ಇದರ ಕಾನ್ಸೆಪ್ಟ್​ ಕೂಡ ಭಿನ್ನವಾಗಿದೆ. ರಿಯಾಲಿಟಿ ಶೋ ನಿರೂಪಣೆಗೆ ಸ್ಟಾರ್​ ಕಲಾವಿದರು ಒಪ್ಪಿಕೊಂಡರೆ ಅದರ ಮಜವೇ ಬೇರೆ. ‘ಗೋಲ್ಡನ್​ ಗ್ಯಾಂಗ್​’ ಶೋ ನಡೆಸಿಕೊಡಲು ನಟ ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಒಪ್ಪಿಕೊಂಡಿದ್ದಾರೆ. ಈಗಾಗಲೇ ಅವರು ಪ್ರೋಮೋ ಶೂಟಿಂಗ್​ನಲ್ಲಿ ಭಾಗಿ ಆಗಿದ್ದು, ನಿರೀಕ್ಷೆ ಮೂಡಿಸಿದ್ದಾರೆ.

ಬಗೆಬಗೆಯ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿರುವ ಜೀ ಕನ್ನಡ ವಾಹಿನಿ ಟಿಆರ್​ಪಿ ವಿಚಾರದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದೆ. ‘ಗೋಲ್ಡನ್​ ಗ್ಯಾಂಗ್​’ ಶೋ ಮೂಲಕ ವಾಹಿನಿಯ ಮೆರುಗು ಹೆಚ್ಚುವ ನಿರೀಕ್ಷೆ ಇದೆ. ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಗಣೇಶ್​ ಅವರು ವೃತ್ತಿ ಜೀವನ ಆರಂಭಿಸಿದ್ದೇ ಕಿರುತೆರೆ ಮೂಲಕ. ಮನರಂಜನಾ ವಾಹಿನಿಯಲ್ಲಿ ನಿರೂಪಕರಾಗಿದ್ದ ಅವರು ಆ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದರು. ಈಗಲೂ ಅವರು ನಿರೂಪಣೆಯಲ್ಲಿ ಆಸಕ್ತಿ ಹೊಂದಿದ್ದಾರೆ. ‘ಗೋಲ್ಡನ್​ ಗ್ಯಾಂಗ್​’ ಶೋ ಮೂಲಕ ಮತ್ತೆ ನಿರೂಪಕನ ಸ್ಥಾನಕ್ಕೆ ಅವರು ಬಂದಿದ್ದಾರೆ.

‘ಗೋಲ್ಡನ್ ಗ್ಯಾಂಗ್’ ಒಂದು ಅಪರೂಪದ ಕಾರ್ಯಕ್ರಮ. ಇದು ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗಲಿದೆ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ. ಈ ಶೋ ತುಂಬ ಥ್ರಿಲ್ಲಿಂಗ್​ ಆಗಿರಲಿದ್ದು ಕನ್ನಡ ಸಿನಿಮಾ ಮತ್ತು ಕಿರುತೆರೆ ಲೋಕದ ಹಲವು ಕಲಾವಿದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈಗಾಗಲೇ ಎರಡು ಪ್ರೋಮೋಗಳನ್ನು ರಿಲೀಸ್​ ಮಾಡಲಾಗಿದೆ. ಆ ಮೂಲಕ ಕಾರ್ಯಕ್ರಮದ ಶೈಲಿ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಸಲಾಗಿದೆ. ತುಂಬ ಅಪರೂಪದ ಗ್ಯಾಂಗ್​ಗಳು ಈ ಶೋಗೆ ಆಗಮಿಸಲಿವೆ. ಗ್ಯಾಂಗ್​ಗಳೊಂದಿಗೆ ಬಾಲ್ಯ, ಯೌವ್ವನದ ತುಂಟತನ, ಕುಚೇಷ್ಟೆಗಳ ಸವಿನೆನಪುಗಳನ್ನು ಮೆಲುಕು ಹಾಕುತ್ತ ನೆನಪಿನಲ್ಲಿ ಉಳಿಯುವಂಥ ಆಟಗಳನ್ನು ಆಡಿಸಲಾಗುತ್ತದೆ. ಕಲಾವಿದರ ಆ ದಿನಗಳನ್ನು ಗೋಲ್ಡನ್ ಸ್ಟಾರ್ ಗಣೇಶ್​ ಅವರು ಪ್ರೇಕ್ಷಕರಿಗೆ ತಮ್ಮದೇ ರೀತಿಯಲ್ಲಿ ಪರಿಚಯಿಸಲಿದ್ದಾರೆ. ಶೀಘ್ರದಲ್ಲೇ ‘ಗೋಲ್ಡನ್​ ಗ್ಯಾಂಗ್​’ ಪ್ರಸಾರ ಆರಂಭ ಆಗಲಿದೆ.

ಇದನ್ನೂ ಓದಿ:

‘ಸಖತ್’​ ವೇದಿಕೆಯಲ್ಲಿ ಗಣೇಶ್​ ಕೋರಿಕೆ ಮೇರೆಗೆ ‘ಎಕ್ಸ್​ಕ್ಯೂಸ್​ಮೀ’ ಹಾಡು ಹೇಳಿದ ಪ್ರೇಮ್

‘ಚಿತ್ರರಂಗ ಇರುವವರೆಗೂ ಪವರ್​ ಸ್ಟಾರ್​ ಅವರೇ ನಂ.1’; ಅಪ್ಪು ಬಗ್ಗೆ ಗಣೇಶ್​ ಅಭಿಮಾನದ ಮಾತು

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ