
ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸ್ಟಾರ್ ಜೋಡಿಯ ವಿವಾಹಕ್ಕೆ ಸಕಲ ಸಿದ್ಧತೆ ನಡೆದಿದೆ. ಬಾಲಿವುಡ್ನ ಕೆಲವೇ ಕೆಲವು ಮಂದಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ವಿವಾಹಪೂರ್ವ ಕಾರ್ಯಗಳು ಆರಂಭ ಆಗಿದ್ದು, ಮದುವೆ ನಡೆಯುವ ಸ್ಥಳಕ್ಕೆ ಅತಿಥಿಗಳು ಆಗಮಿಸುತ್ತಿದ್ದಾರೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ರೆಸಾರ್ಟ್ನಲ್ಲಿ ಈ ಮದುವೆ ನಡೆಯುತ್ತಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ (Katrina Kaif Vicky Kaushal Wedding) ಸಮಾರಂಭಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸಲು ಒಂದು ವೆಲ್ಕಮ್ ನೋಟ್ ನೀಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅದರ ಫೋಟೋ ವೈರಲ್ ಆಗುತ್ತಿದೆ.
‘ಕಡೆಗೂ ನೀವು ಇಲ್ಲಿಗೆ ಬಂದು ತಲುಪಿದ್ದೀರಿ.. ಜೈಪುರದಿಂದ ರಣತಂಬೂರ್ ತನಕ ನಿಮ್ಮ ಪ್ರಯಾಣ ಚೆನ್ನಾಗಿತ್ತೆಂದು ಭಾವಿಸುತ್ತೇವೆ. ನೀವು ಬರುವಷ್ಟರಲ್ಲಿ ನಾವು ನಿಮಗಾಗಿ ಸಿದ್ಧಪಡಿಸಿದ ಆಹಾರಗಳನ್ನು ಸ್ವೀಕರಿಸಿ’ ಎಂದು ಈ ವೆಲ್ಕಮ್ ನೋಟ್ನಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ, ಇದರ ಜೊತೆಗೆ ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಏನದು? ಫೋಟೋ, ವಿಡಿಯೋ ಸೆರೆಹಿಡಿಯಬಾರದು ಎಂಬ ಎಚ್ಚರಿಕೆ ಸಂದೇಶ!
ಹೌದು, ಈ ಮದುವೆಯನ್ನು ಬಹಳ ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಮದುವೆಯ ಯಾವುದೇ ವಿವರಗಳೂ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗುತ್ತಿದೆ. ಹಾಗಾಗಿ ಮದುವೆ ಬಂದ ಅತಿಥಿಗಳಿಗೆ ಈ ಬಗ್ಗೆ ಮೊದಲೇ ತಿಳಿಸಲಾಗಿದೆ. ‘ನೀವೆಲ್ಲರೂ ನಿಮ್ಮ ಮೊಬೈಲ್ ಫೋನ್ಗಳನ್ನು ರೂಮ್ನಲ್ಲಿಯೇ ಇಟ್ಟುಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಯಾವುದೇ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ. ನಿಮ್ಮೆಲ್ಲರನ್ನೂ ಭೇಟಿಯಾಗಲು ನಾವು ಕಾದಿದ್ದೇವೆ’ ಎಂದು ಈ ವೆಲ್ಕಮ್ ನೋಟ್ನಲ್ಲಿ ಬರೆಯಲಾಗಿದೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಮಂಟಪದ ಬಗ್ಗೆ ಅಚ್ಚರಿಯ ಮಾಹಿತಿ ಹರಡಿದೆ. ಜಗಮಗಿಸುವ ಗಾಜಿನ ಮಂಟಪದಲ್ಲಿ ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ವಿಶೇಷ ಏನೆಂದರೆ, ಮದುಮಗ ವಿಕ್ಕಿ ಕೌಶಲ್ ಅವರು 7 ಬಿಳಿ ಕುದುರೆಗಳ ಜತೆಯಲ್ಲಿ ಈ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ ಎಂದು ವರದಿ ಆಗಿದೆ. ಈ ಸುದ್ದಿ ಕೇಳಿದ ಬಳಿಕ ಸ್ಟಾರ್ ಜೋಡಿಯ ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.
ಮದುವೆ ನಡೆಯುವ ಹೋಟೆಲ್ ಸುತ್ತಮುತ್ತ ಯಾವುದೇ ಡ್ರೋನ್ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಡ್ರೋನ್ ಕಂಡುಬಂದರೆ ಅದನ್ನು ಶೂಟ್ ಮಾಡಿ ಹೊಡೆದುರುಳಿಸಲು ತೀರ್ಮಾನಿಸಲಾಗಿದೆ ಎಂದು ವರದಿ ಆಗಿದೆ.
ಇದನ್ನೂ ಓದಿ:
ಕತ್ರಿನಾ-ವಿಕ್ಕಿ ಲವ್ಸ್ಟೋರಿ ಶುರು ಆಗಲು ಕಾರಣ ಆದ ವ್ಯಕ್ತಿ ಯಾರು ಗೊತ್ತಾ? ಇಲ್ಲಿದೆ ಫುಲ್ ವಿವರ
ಮದುವೆಯಲ್ಲಿ ಕತ್ರಿನಾ ಧರಿಸುವ ಬಟ್ಟೆ ಬಗ್ಗೆಯೂ ಗುಟ್ಟು; ಇಷ್ಟೆಲ್ಲ ರಹಸ್ಯ ಕಾಪಾಡುತ್ತಿರೋದು ಯಾಕೆ?