ಅದ್ದೂರಿಯಾಗಿ ನೆರವೇರಿತು ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ವಿವಾಹ; ಫೋಟೋ, ವಿಡಿಯೋಗಳು ಲೀಕ್

| Updated By: ಸುಷ್ಮಾ ಚಕ್ರೆ

Updated on: Dec 09, 2021 | 7:03 PM

ರಾಜಸ್ಥಾನದ ಸಿಕ್ಸ್​ ಸೆನ್ಸ್​ ಫೋರ್ಟ್​ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ಜೋಡಿ ಸಪ್ತಪದಿ ತುಳಿಯುವುದಕ್ಕೂ ಮುನ್ನ ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ನೆರವೇರಿತ್ತು.

ಅದ್ದೂರಿಯಾಗಿ ನೆರವೇರಿತು ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ವಿವಾಹ; ಫೋಟೋ, ವಿಡಿಯೋಗಳು ಲೀಕ್
Follow us on

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ವಿವಾಹವಾಗಿದ್ದಾರೆ. ಇಂದು (ಡಿಸೆಂಬರ್​ 09) ಮಧ್ಯಾಹ್ನ 3.30ರಿಂದ 3.45ರ ಅವಧಿಯಲ್ಲಿ ಇಬ್ಬರ ವಿವಾಹ ಕಾರ್ಯ ನೆರವೇರಿದೆ ಎಂದು ವರದಿ ಆಗಿದೆ. ಈ ಮೂಲಕ ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಹೊಸ ಬಾಳನ್ನು ಆರಂಭಿಸಲು ಮುನ್ನುಡಿ ಹಾಡಿದೆ. ತುಂಬಾನೇ ಎಚ್ಚರಿಕೆ ವಹಿಸಿದ್ದರಿಂದ ಇವರ ವಿವಾಹ ಫೋಟೋಗಳು ಎಲ್ಲಿಯೂ ಲೀಕ್​ ಆಗಿಲ್ಲ. ಆದರೆ, ವಿವಾಹ ನಡೆಯುವ ಸ್ಥಳ ಮತ್ತು ಮದುವೆಯಾದ ನಂತರ ಇಬ್ಬರೂ ಒಟ್ಟಿಗೇ ನಿಂತುಕೊಂಡಿರುವ ಕೆಲ ಫೋಟೋ, ವಿಡಿಯೋಗಳು ಲೀಕ್​ ಆಗಿವೆ.

ರಾಜಸ್ಥಾನದ ಸಿಕ್ಸ್​ ಸೆನ್ಸ್​ ಫೋರ್ಟ್​ನಲ್ಲಿ ಮದುವೆ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದೆ. ಈ ಜೋಡಿ ಸಪ್ತಪದಿ ತುಳಿಯುವುದಕ್ಕೂ ಮುನ್ನ ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ನೆರವೇರಿತ್ತು. ಇಂದು ವಿಕ್ಕಿ ಹಾಗೂ ಕತ್ರಿನಾ ಹೊಸ ಬಾಳಿಗೆ ಕಾಲಿಟ್ಟರು. ಜಗಮಗಿಸುವ ಗಾಜಿನ ಮಂಟಪದಲ್ಲಿ ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ವಿಕ್ಕಿ ಏಳು ಕುದರೆಯ ಸಾರೋಟನ್ನು ಏರಿ ಮದುವೆ ಮಂಟಪಕ್ಕೆ ಬಂದಿದ್ದರು ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ದಂಪತಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಮದುವೆಗೆ ಯಾವೆಲ್ಲ ಸೆಲೆಬ್ರಿಟಿಗಳು ಬಂದಿದ್ದರು ಎನ್ನುವ ಪಟ್ಟಿ ಕೂಡ ಸೀಕ್ರೆಟ್​ ಆಗಿದೆ. ಸಮಾರಂಭಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸಲು ​ಒಂದು ವೆಲ್​ಕಮ್​ ನೋಟ್​ ನೀಡಲಾಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅದರ ಫೋಟೋ ವೈರಲ್​ ಆಗಿತ್ತು. ‘ಕಡೆಗೂ ನೀವು ಇಲ್ಲಿಗೆ ಬಂದು ತಲುಪಿದ್ದೀರಿ. ನೀವೆಲ್ಲರೂ ನಿಮ್ಮ ಮೊಬೈಲ್​ ಫೋನ್​ಗಳನ್ನು ರೂಮ್​ನಲ್ಲಿಯೇ ಇಟ್ಟುಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಯಾವುದೇ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಬೇಡಿ. ನಿಮ್ಮೆಲ್ಲರನ್ನೂ ಭೇಟಿಯಾಗಲು ನಾವು ಕಾದಿದ್ದೇವೆ’ ಎಂದು ಬರೆಯಲಾಗಿತ್ತು. ಅದರಂತೆಯೇ ಈ ಜೋಡಿ ಮದುವೆ ರಹಸ್ಯವನ್ನು ಕಾಪಾಡಿಕೊಂಡಿದೆ.

ಅಮೇಜಾನ್​ ಪ್ರೈಮ್​ ವಿಡಿಯೋ ಕತ್ರಿನಾ-ವಿಕ್ಕಿ ಮದುವೆ ಸಮಾರಂಭವನ್ನು ಶೂಟ್​ ಮಾಡಿ ಪ್ರಸಾರ ಮಾಡುವ ಹಕ್ಕನ್ನು ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಫೋಟೋ ಲೀಕ್​ ಆಗಬಾರದು ಎಂದು ದಂಪತಿ ಎಚ್ಚರಿಕೆ ವಹಿಸಿದೆ ಎನ್ನುವ ಮಾತು ಜೋರಾಗಿದೆ.

ಇದನ್ನೂ ಓದಿ: ವಿರಾಟ್​- ಅನುಷ್ಕಾ ಮನೆಯ ನೆರೆಮನೆಯವರಾಗಲಿದ್ದಾರೆ ಕತ್ರಿನಾ ಕೈಫ್​ – ವಿಕ್ಕಿ ಕೌಶಲ್​

Published On - 6:49 pm, Thu, 9 December 21