AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಧ ಬಟ್ಟೆ ಹಾಕುವ ಖುಷಿ ಮುಖರ್ಜಿಯ ಉಡುಗೆ ಬಗ್ಗೆ ಟೀಕೆ ಮಾಡಿದ ಉರ್ಫಿ ಜಾವೇದ್

Kushee Mukharji-Urfi Javed ಖುಷಿ ಮುಖರ್ಜಿ ಅವರ ಇತ್ತೀಚಿನ ಉಡುಗೆ ಶೈಲಿ ಉರ್ಫಿ ಜಾವೇದ್ ಅವರಿಂದ ಟೀಕೆಗೆ ಒಳಗಾಗಿದೆ. ಖುಷಿ ತಮ್ಮ ಉಡುಗೆಯ ಬಗ್ಗೆ ಸ್ಪಷ್ಟನೆ ನೀಡಿದ್ದರೂ, ಉರ್ಫಿ ಅವರ ಟೀಕೆ ವಿವಾದ ಸೃಷ್ಟಿಸಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನಟಿಯರ ಉಡುಗೆ ಶೈಲಿಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಭಿನ್ನವಾಗಿದೆ. ಸ್ವತಃ ಉರ್ಫಿ ಚಿತ್ರ-ವಿಚಿತ್ರ ಉಡುಗೆಗಳನ್ನು ಧರಿಸುತ್ತಾರೆ. ಈಗ ಖುಷಿ ಅವರನ್ನು ಟೀಕೆ ಮಾಡಿದ್ದಾರೆ.

ಅರ್ಧ ಬಟ್ಟೆ ಹಾಕುವ ಖುಷಿ ಮುಖರ್ಜಿಯ ಉಡುಗೆ ಬಗ್ಗೆ ಟೀಕೆ ಮಾಡಿದ ಉರ್ಫಿ ಜಾವೇದ್
Kushee Urfi
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Jul 03, 2025 | 3:36 PM

Share

ಖುಷಿ ಮುಖರ್ಜಿ (Kushee Mukharji) ಅವರು ಇತ್ತೀಚೆಗೆ ತಾವು ಧರಿಸುವ ಬಟ್ಟೆ ಮೂಲಕ ಸುದ್ದಿ ಆಗುತ್ತಿದ್ದಾರೆ ಹಾಗೂ ಟೀಕೆ ಎರಡನ್ನೂ ಎದುರಿಸುತ್ತಿದ್ದಾರೆ. ಅವರು ಸ್ಪ್ಲಿಟ್ಸ್ ವಿಲ್ಲಾದ ಮಾಜಿ ಸ್ಪರ್ಧಿ ಕೂಡ ಹೌದು. ಅವರ ಬಟ್ಟೆ ಬಗ್ಗೆ ಈಗ ನಟಿ ಉರ್ಫಿ ಜಾವೇದ್ ಅವರು ಮಾತನಾಡಿದ್ದಾರೆ ಮತ್ತು ನಟಿಯನ್ನು ಟೀಕಿಸಿದ್ದಾರೆ. ತಾವೇ ಆ ರೀತಿ ಬಟ್ಟೆ ಹಾಕೋ ಉರ್ಫಿ ಅವರಿಗೆ ಈ ಬಗ್ಗೆ ಮಾತನಾಡಲು ಎಷ್ಟು ಹಕ್ಕಿದೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಖುಷಿ ಮುಖರ್ಜಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಟಾಪ್ ಮಾತ್ರ ಧರಿಸಿದ್ದರು. ಅವರು ಒಳ ಉಡುಪು ಹಾಕಿ ಇರಲಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ನಟಿ ಅಲ್ಲಗಳೆದಿದ್ದಾರೆ ಎನ್ನಬಹುದು. ತಾವು ಒಳ ಉಡುಪು ಹಾಕಿದ್ದಾಗಿ ಹೇಳಿಕೊಂಡಿದ್ದಾರೆ. ಈಗ ಈ ನಟಿಯನ್ನು ಉರ್ಫಿ ಅವರು ಟೀಕಿಸಿದ್ದಾರೆ ಅನ್ನೋದು ವಿಚಿತ್ರ.

ಉರ್ಫಿ ಅವರು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಪೂರ್ತಿ ಬಟ್ಟೆಯನ್ನು ಧರಿಸಿ ಬಂದಿದ್ದರು. ಅನೇಕರು ತನ್ನನ್ನು ಕಾಪಿ ಮಾಡುತ್ತಿದ್ದಾರೆ ಎಂದಿದ್ದಾರೆ ಉರ್ಫಿ. ‘ನಾನು ಈಗ ಬಟ್ಟೆ ಧರಿಸೋಕೆ ಆರಂಭಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ. ‘ನನ್ನನ್ನು ಕಾಪಿ ಮಾಡುತ್ತಾರೆ’ ಎಂದು ಉರ್ಫಿ ಹೇಳಿದ್ದು ಖುಷಿಗೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಉರ್ಫಿ ಕೂಡ ಮೊದಲು ಇದೇ ರೀತಿ ಬಟ್ಟೆ ಹಾಕುತ್ತಿದ್ದರು.

ಇಷ್ಟು ದಿನಗಳ ಕಾಲ ಉರ್ಫಿ ಜಾವೇದ್ ಅವರು ಚಿತ್ರ ವಿಚಿತ್ರ ಡ್ರೆಸ್ ಧರಿಸಿ ಸುದ್ದಿ ಆಗುತ್ತಿದ್ದರು. ಮೊಬೈಲ್ ಫೋನ್ಗಳನ್ನು ಕೂಡ ಅವರು ತಮ್ಮ ಖಾಸಗಿ ಭಾಗವನ್ನು ಮುಚ್ಚುವಂತೆ ಮಾಡಿಕೊಂಡು ಬಂದ ಉದಾಹರಣೆ ಇದೆ. ಆದರೆ, ಅವರು ಈಗ ಬೇರೆಯವರ ಉಡುಗೆ ಬಗ್ಗೆ ಮಾತನಾಡುವುದನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

ಖುಷಿ ಮುಖರ್ಜಿ ಮಾಡಿದ ತಪ್ಪೇನು?

ಇತ್ತೀಚೆಗೆ ಖುಷಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಟಾಪ್ ಧರಿಸಿ ಬಂದಿದ್ದರು. ಆದರೆ, ಅವರು ಒಳ ಉಡುಪು ಹಾಕಿದಂತೆ ಕಾಣಿಸಿಯೇ ಇರಲಿಲ್ಲ. ‘ನಾನು ಒಳ ಉಡುಪು ಹಾಕಿಕೊಂಡಿದ್ದೆ. ಆದರೆ. ಚಡ್ಡಿಯ ಸ್ಟ್ರಿಪ್ನ ಮೇಲಕ್ಕೆ ಎಳೆದುಕೊಂಡಿದ್ದೆ. ಹೀಗಾಗಿ, ನೋಡುಗರಿಗೆ ಆ ರೀತಿ ಕಾಣಲಿಲ್ಲ’ ಎಂದು ಅವರು ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ