ಕಿಯಾರಾ ಅಡ್ವಾಣಿ ಮದುವೆ ಆಗಿದ್ದು ಈ ಕಾರಣಕ್ಕೆ; ಮೊದಲೇ ರಿವೀಲ್ ಮಾಡಿದ್ದ ನಟಿ

ಹಲವರು ಹಣಕ್ಕಾಗಿ ಮದುವೆ ಆಗುತ್ತಾರೆ. ಹೀರೋಯಿನ್​ಗಳು ಉದ್ಯಮಿಗಳನ್ನು ಪ್ರೀತಿಸಿ ಮದುವೆ ಆದ ಬಳಿಕ ಇದೇ ರೀತಿಯ ಆರೋಪಗಳು ಎದುರಾಗುತ್ತವೆ. ಕಿಯಾರಾ ಅವರು ಈ ವಿಚಾರದಲ್ಲಿ ಮೊದಲೇ ಮಾತನಾಡಿದ್ದರು.

ಕಿಯಾರಾ ಅಡ್ವಾಣಿ ಮದುವೆ ಆಗಿದ್ದು ಈ ಕಾರಣಕ್ಕೆ; ಮೊದಲೇ ರಿವೀಲ್ ಮಾಡಿದ್ದ ನಟಿ
ಕಿಯಾರಾ-ಸಿದ್ದಾರ್ಥ್​

Updated on: Feb 09, 2023 | 8:05 AM

ನಟಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಮದುವೆ ಆಗಿ ತಮ್ಮ ಮನೆಗೆ ಮರಳಿದ್ದಾರೆ. ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ (Jaisalmer) ಈ ಜೋಡಿ ಅದ್ದೂರಿಯಾಗಿ ಮದುವೆಯಾಗಿದೆ. ಫೆಬ್ರವರಿ 8ರಂದು ದೆಹಲಿ ಏರ್​ಪೋರ್ಟ್​ನಲ್ಲಿ ಇವರು ಪರಸ್ಪರ ಕೈ ಹಿಡಿದು ಬರುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮದುವೆಗೂ ಮೊದಲು ಕಿಯಾರಾ ಮದುವೆ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದರು. ಈ ವೇಳೆ ‘ನಾನು ಪ್ರೀತಿಗಾಗಿ ಮಾತ್ರ ಮದುವೆ ಆಗುತ್ತೇನೆ’ ಎಂದು ಹೇಳಿದ್ದರು.

ಹಲವರು ಹಣಕ್ಕಾಗಿ ಮದುವೆ ಆಗುತ್ತಾರೆ. ಹೀರೋಯಿನ್​ಗಳು ಉದ್ಯಮಿಗಳನ್ನು ಪ್ರೀತಿಸಿ ಮದುವೆ ಆದ ಬಳಿಕ ಇದೇ ರೀತಿಯ ಆರೋಪಗಳು ಎದುರಾಗುತ್ತವೆ. ಕಿಯಾರಾ ಅವರು ಈ ವಿಚಾರದಲ್ಲಿ ಮೊದಲೇ ಮಾತನಾಡಿದ್ದರು. ತಾವು ಮದುವೆ ಆಗುತ್ತಿರೋದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದರು.

ಇದನ್ನೂ ಓದಿ
ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್
ಕಿಯಾರಾ-ಸಿದ್ದಾರ್ಥ್​ ಮದುವೆಯಲ್ಲಿ ಮೊಬೈಲ್ ಬಳಸೋ ಹಾಗಿಲ್ಲ; ಅತಿಥಿಗಳಿಗೆ ಸೂಚನೆ
ಮದುವೆ ನಡೆಯೋ ಸ್ಥಳಕ್ಕೆ ಆಗಮಿಸಿದ ನಟಿ ಕಿಯಾರಾ ಅಡ್ವಾಣಿ; ಖಚಿತವಾಯ್ತು ಸುದ್ದಿ

ಬಾಲಿವುಡ್ ಬಬಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಕಿಯಾರಾ, ‘ನಾನು ಪ್ರೀತಿಗಾಗಿ ಮಾತ್ರ ಮದುವೆ ಆಗುತ್ತೇನೆ. ನಾನು ವಿವಾಹ ಆದೆ ಎಂದರೆ ಅದಕ್ಕೆ ಕಾರಣ ಪ್ರೀತಿಯೇ ಆಗಿರುತ್ತದೆ. ಪ್ರೀತಿ ಜೀವನಕ್ಕೆ ಗಟ್ಟಿ ಅಡಿಪಾಯ. ಅದರ ಮೇಲೆ ಎಲ್ಲವೂ ನಿರ್ಮಾಣ ಆಗುತ್ತದೆ’ ಎಂದು ಹೇಳಿದ್ದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ನವ ದಂಪತಿ

ಸಿದ್ದಾರ್ಥ್ ದೆಹಲಿಯಲ್ಲಿ ಮನೆ ಹೊಂದಿದ್ದಾರೆ. ಹೀಗಾಗಿ, ಮದುವೆ ಆದ ಬಳಿಕ ದಂಪತಿ ದೆಹಲಿಗೆ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ಸಾಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕ್ಯೂಟ್ ಜೋಡಿ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಸಿದ್ದಾರ್ಥ್ ಹಾಗೂ ಕಿಯಾರಾ ಮುಂಬೈನಲ್ಲೇ ಸೆಟಲ್ ಆಗಿದ್ದಾರೆ. ಈಗ ಇಬ್ಬರೂ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿದ್ದಾರ್ಥ್​ ಮಲ್ಹೋತ್ರ-ಕಿಯಾರಾ ಅಡ್ವಾಣಿ ಮಧ್ಯೆ ಇರೋ ವಯಸ್ಸಿನ ಅಂತರ ಇಷ್ಟೊಂದಾ?

ಪ್ರೀತಿ ಹುಟ್ಟಿದ್ದು ಹೇಗೆ

‘ಲಸ್ಟ್ ಸ್ಟೋರಿಸ್​’ ಶೂಟಿಂಗ್ ಸೆಟ್​ಗೆ ಸಿದ್ದಾರ್ಥ್ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆದಿದೆ. ಆ ಬಳಿಕ ಇಬ್ಬರೂ ‘ಶೇರ್ಷಾ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಇವರ ಮಧ್ಯೆ ಪ್ರೀತಿ ಹುಟ್ಟಿ ಹಲವು ವರ್ಷಗಳು ಕಳೆದಿವೆ. ಅನೇಕ ಬಾರಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಕಳೆದ ವರ್ಷ ಇವರ ಸಂಬಂಧ ಮುರಿದುಬಿತ್ತು ಎನ್ನಲಾಗಿತ್ತು. ಆದರೆ, ಈ ವರ್ಷ ಇಬ್ಬರೂ ಮದುವೆ ಆಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:03 am, Thu, 9 February 23