ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ (Kiara Advani) ಪ್ರಸ್ತುತ ಬಹುಬೇಡಿಕೆಯ ನಟಿ. ದೊಡ್ಡ ದೊಡ್ಡ ಪ್ರಾಜೆಕ್ಟ್ಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರಲ್ಲಿಯೂ ಕಿಯಾರಾ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬೋಲ್ಡ್ ಡ್ರೆಸ್ನಲ್ಲಿ ಮಿಂಚುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದೀಗ ಎಲ್ಲೆಡೆ ವೈರಲ್ ಆಗಿದೆ. ಬ್ಯಾಕ್ಲೆಸ್ ಡ್ರೆಸ್ ಧರಿಸಿದ್ದ ಕಿಯಾರಾ, ಮ್ಯಾಗಜೀನ್ ಕವರ್ ಒಂದಕ್ಕೆ ಫೋಟೋಶೂಟ್ (Photo Shoot) ಮಾಡಿಸಿದ್ದರು. ಫೋಟೋ ಕ್ಲಿಕ್ಕಿಸುವ ವೇಳೆ ವಿಡಿಯೋವನ್ನೂ ಸೆರೆಹಿಡಿಯಲಾಗಿತ್ತು. ಫೋಟೋಗೆ ಪೋಸ್ ನೀಡುತ್ತಿರುವ ಮಾದರಿಯ ಈ ವಿಡಿಯೋವನ್ನು ಇದೀಗ ಸ್ವತಃ ನಟಿಯೇ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅವರ ಬೋಲ್ಡ್ ಲುಕ್ಗೆ ಅಭಿಮಾನಿಗಳು ಮಾರುಹೋಗಿದ್ದಾರೆ. ವಿಶೇಷವೆಂದರೆ ಈ ವಿಡಿಯೋ ಖ್ಯಾತ ಸೆಲೆಬ್ರಿಟಿಗಳ (Celebrity) ಗಮನವನ್ನೂ ಸೆಳೆದಿದೆ.
ಕೆ.ಎಲ್.ರಾಹುಲ್ ಅವರ ಸ್ನೇಹಿತೆ ಆಥಿಯಾ ಶೆಟ್ಟಿ, ಜಾಹ್ನವಿ ಕಪೂರ್ ಮೊದಲಾದವರು ಕಾಮೆಂಟ್ಗಳ ಮೂಲಕ ಕಿಯಾರಾಗೆ ಶಹಬ್ಬಾಸ್ ಎಂದಿದ್ದಾರೆ. ಖ್ಯಾತ ವಿನ್ಯಾಸಕಾರ ಮನೀಶ್ ಮಲ್ಹೋತ್ರಾ ಕೂಡ ಕಿಯಾರಾ ಸ್ಟೈಲ್ಗೆ ಫಿದಾ ಆಗಿದ್ದು, ಮೆಚ್ಚುಗೆ ಸೂಚಿಸಿದ್ದಾರೆ. ವಿಶೇಷವೆಂದರೆ ಬಹುಭಾಷಾ ನಟಿ ಸಮಂತಾ ಕೂಡ ಕಿಯಾರಾ ಅಡ್ವಾನಿ ಲುಕ್ಗೆ ಫಿದಾ ಆಗಿದ್ದಾರೆ. ‘ಫ್ಯೂ.. ನೀವು ಮತ್ತು ಡ್ರೆಸ್’ ಎಂದು ಕಾಮೆಂಟ್ ಮಾಡಿದ್ದಾರೆ. ಫ್ಯೂ ಎನ್ನುವುದು ಹಾಟ್ ಆಗಿ ಕಾಣಿಸುತ್ತಿದ್ದೀರಿ ಎಂದು ತಿಳಿಸಲು ಬಳಸುವ ಪದ. ಹೀಗೆ ಸಮಂತಾ ತಮ್ಮ ಅಭಿಪ್ರಾಯ ಹಂಚಿಕೊಂಡು ಕಿಯಾರಾಗೆ ಶಹಬ್ಬಾಸ್ ಎಂದಿದ್ದಾರೆ. ಹಲವು ಅಭಿಮಾನಿಗಳು ಸಮಂತಾ ಜತೆ ದನಿಗೂಡಿಸಿದ್ದಾರೆ.
ಕಿಯಾರಾ ಹಂಚಿಕೊಂಡ ವಿಡಿಯೋ ಇಲ್ಲಿದೆ:
ಕಿಯಾರಾ ಹಂಚಿಕೊಂಡಿರುವ ವಿಡಿಯೋ ‘ಬಜಾರ್’ಗಾಗಿ ಕಿಯಾರಾ ಫೋಟೋ ಶೂಟ್ ಮಾಡಿಸಿದ ಸಂದರ್ಭದ್ದಾಗಿದೆ. ಈ ಸಂಸ್ಥೆ ಕಿಯಾರಾ ಚಿತ್ರಗಳನ್ನು ಹಂಚಿಕೊಂಡಿದೆ. ಆ ಚಿತ್ರಗಳು ಇಲ್ಲಿವೆ.
ಚಿತ್ರಗಳ ವಿಷಯಕ್ಕೆ ಬಂದರೆ ಕಿಯಾರಾ ಅಡ್ವಾನಿ ನಟಿಸಿದ್ದ ‘ಶೇರ್ಷಾ’ ಕಳೆದ ವರ್ಷದ ಅತ್ಯಂತ ದೊಡ್ಡ ಬಾಲಿವುಡ್ ಹಿಟ್ ಚಿತ್ರಗಳಲ್ಲಿ ಒಂದಾಗಿತ್ತು. ಅಮೆಜಾನ್ ಪ್ರೈಮ್ನಲ್ಲಿ ಈ ಚಿತ್ರ ತೆರೆ ಕಂಡಿತ್ತು. ಪ್ರಸ್ತುತ ಕಿಯಾರಾ ‘ಭೂಲ್ ಭುಲಯ್ಯಾ 2’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜತೆ ಬಣ್ಣ ಹಚ್ಚುತ್ತಿದ್ದಾರೆ. ವರುಣ್ ಧವನ್ ಜತೆ ‘ಜುಗ್ ಜುಗ್ ಜೀಯೊ’ ಚಿತ್ರದಲ್ಲೂ ಕಿಯಾರಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ನೀತು ಕಪೂರ್ ಹಾಗೂ ಅನಿಲ್ ಕಪೂರ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಈ ವರ್ಷ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ:
ಮಾಜಿ ಪತ್ನಿಯ ಮದುವೆ ಬಟ್ಟೆಯನ್ನು ಗರ್ಲ್ ಫ್ರೆಂಡ್ ಗೆ ನೀಡಿದ ಪತಿ… ಕೊನೆಗೆ ಮಾಜಿ ಪತ್ನಿ ಮಾಡಿದ್ದೇನು ಗೊತ್ತಾ?