
ಸಿನಿಮಾ ನಟ-ನಟಿಯರು ಉದ್ಯಮಗಳಲ್ಲಿ ತೊಡಗಿಕೊಳ್ಳುವುದು ಮಾಮೂಲು. ನಟರು ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಸ್ಪೋರ್ಟ್ಸ್ ಫ್ರಾಂಚೈಸ್ ಇನ್ನಿತರೆ ಉದ್ಯಮಗಳ ಮೇಲೆ ಬಂಡವಾಳ ಹೂಡಿದರೆ ನಟಿಯರು ಸೌಂದರ್ಯಕ್ಕೆ ಸಂಬಂಧಿಸಿದ ಬ್ರ್ಯಾಂಡ್ಗಳ ಮೇಲೆ ಹೂಡಿಕೆ ಮಾಡುತ್ತಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಆಲಿಯಾ ಭಟ್ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಹ ಸೌಂದರ್ಯವರ್ಧಕ ಕಂಪೆನಿಗಳನ್ನು ಸ್ಥಾಪಿಸಿದ್ದಾರೆ. ಆದರೆ ಅತಿ ಹೆಚ್ಚು ಯಶಸ್ಸು ಗಳಿಸಿರುವುದು ನಟಿ ಕೃತಿ ಸೆನೊನ್.
ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ನಟಿ ಕೃತಿ ಸನೊನ್ ‘ಹೈಫನ್’ ಹೆಸರಿನ ಸೌಂದರ್ಯವರ್ಧಕ ಬ್ರ್ಯಾಂಡ್ ಅನ್ನು ಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಬ್ರ್ಯಾಂಡ್ನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಸ್ವತಃ ಕೃತಿ ಸನೊನ್ ಈ ಬ್ರ್ಯಾಂಡ್ನ ರಾಯಭಾರಿ ಆಗಿದ್ದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಈ ಬ್ರ್ಯಾಂಡ್ನ ಒಟ್ಟು ಮಾರಾಟ ಮೌಲ್ಯ ಬರೋಬ್ಬರಿ 400 ಕೋಟಿ ರೂಪಾಯಿ ದಾಟಿದೆ.
ಬ್ರ್ಯಾಂಡ್ ಒಂದರ ಸೇಲ್ 400 ಕೋಟಿಗೂ ಹೆಚ್ಚಾಗುವುದು ಸಾಮಾನ್ಯ ವಿಷಯವಲ್ಲ. ಅದೂ ಕೇವಲ ಎರಡು ವರ್ಷಗಳಲ್ಲಿ ಕೃತಿ ಸನೊನ್ ಮತ್ತು ಅವರ ತಂಡ ಹೀಗೊಂದು ಅದ್ಭುತ ಸಾಧನೆಯನ್ನು ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ನಟಿ ಕೃತಿ ಸನೊನ್, ‘ಕಳೆದ ಎರಡು ವರ್ಷಗಳು ಅದ್ಭುತವಾದವು. ಹೈಫನ್ ಅನ್ನು ಸೊನ್ನೆಯಿಂದ ಈ ಹಂತದ ವರೆಗೆ ಕಟ್ಟಿ ನಿಲ್ಲಿಸಿದ್ದು ನನ್ನ ಜೀವನದ ಅತ್ಯಂತ ವೈಯಕ್ತಿಕ ಮತ್ತು ತೃಪ್ತಿಕರ ಪ್ರಯಾಣಗಳಲ್ಲಿ ಒಂದಾಗಿದೆ. ಒಂದು ಕಲ್ಪನೆಯಿಂದ ಈಗ ಅನೇಕ ಗ್ರಾಹಕರು ನಂಬುವ ಮತ್ತು ಪ್ರೀತಿಸುವ ಬ್ರ್ಯಾಂಡ್ ಆಗಿ ಬೆಳೆಯುವುದನ್ನು ನೋಡುವುದು ಆನಂದಕರ, ನಂಬಲಸಾಧ್ಯ. ನಮ್ಮಲ್ಲಿ ನಂಬಿಕೆ ಇಟ್ಟಿರುವ ಮತ್ತು ತಮ್ಮ ಜೀವನದಲ್ಲಿ ನಮ್ಮನ್ನು ಹೈಫನ್ ಮಾಡಲು ಆಯ್ಕೆ ಮಾಡಿಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಇದು ಕೇವಲ ಆರಂಭ, ಅಲ್ಲಿ ನಾವು ಚರ್ಮದ ಆರೈಕೆಯನ್ನು ಇನ್ನೂ ಉತ್ತಮವಾಗಿ, ಭಿನ್ನವಾಗಿ ಹೈಫನ್ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಎಲ್ಲವನ್ನೂ ಮೌಲ್ಯಯುತವಾಗಿಸುವ ಸಮುದಾಯದೊಂದಿಗೆ ಬೆಳೆಯುತ್ತೇವೆ. ನಮಗೆ 2 ವರ್ಷಗಳ ಶುಭಾಶಯಗಳು’ ಎಂದಿದ್ದಾರೆ.
ಇದನ್ನೂ ಓದಿ:ಬಾಯ್ಫ್ರೆಂಡ್ ಜೊತೆ ಲಾರ್ಡ್ಸ್ನಲ್ಲಿ ಕ್ರಿಕೆಟ್ ನೋಡಿದ ನಟಿ ಕೃತಿ ಸನೊನ್
ಕೃತಿ ಸನೊನ್ ಒಡೆತನದ ಹೈಫನ್, ಸಸ್ಯ ಜನ್ಯ ವಸ್ತುಗಳನ್ನು ಬಳಸಿಕೊಂಡು ಹಾಗೂ ಫಾರ್ಮುಲಾಗಳನ್ನು ಬಳಸಿಕೊಂಡು ಪ್ರಾಡಕ್ಟ್ಗಳನ್ನು ತಯಾರು ಮಾಡಿ ಅದನ್ನು ಗ್ರಾಹಕರಿಗೆ ನೀಡುತ್ತದೆ. ಹೈಫನ್ ಬಹಳ ದುಬಾರಿ ಏನೂ ಅಲ್ಲದ, ತೀರ ಅಗ್ಗವೂ ಅಲ್ಲದ, ಕೈಗೆಟುಕುವ ಬೆಲೆಯನ್ನು ಒಳಗೊಂಡಿದೆ. ಹೈಫನ್ನ ಯಾವ ಪ್ರಾಡಕ್ಟ್ ಸಹ 600 ಕ್ಕಿಂತ ಹೆಚ್ಚಿನ ಬೆಲೆ ಹೊಂದಿಲ್ಲ, ಕೇವಲ ಕಾಂಬೊ ಪ್ಯಾಕ್ಗಳು ಮಾತ್ರ 1000ಕ್ಕೂ ಹೆಚ್ಚಿನ ಬೆಲೆ ಹೊಂದಿವೆ.
ದೀಪಿಕಾ ಪಡುಕೋಣೆ 80 ಸಿ ಹೆಸರಿನ ಸ್ಕಿನ್ ಕೇರ್ ಬ್ರ್ಯಾಂಡ್ ಹೊಂದಿದ್ದಾರೆ. ಆದರೆ ಅವರ ವ್ಯಾಪಾರ ಇಷ್ಟು ಜೋರಿಲ್ಲ. ದೀಪಿಕಾ ಅವರ ಬ್ರ್ಯಾಂಡ್ನ ಉತ್ಪನ್ನಗಳ ಬೆಲೆ ಬಲು ದುಬಾರಿ. ಬಹುತೇಕ ಉತ್ಪನ್ನಗಳ ಬೆಲೆ 1000ಕ್ಕೂ ಹೆಚ್ಚಿವೆ, ಕೆಲವುಗಳ ಬೆಲೆ 3000 ದಿಂದ 5000 ವರೆಗೆ ಇವೆ. ಆದರೆ ಕೃತಿ ಸನೊನ್ ತಮ್ಮ ಉತ್ಪನ್ನಗಳಿಗೆ ಕೈಗೆಟುವ ಬೆಲೆ ಇರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ