ಬಾಲಿವುಡ್‌ನ ದಂತಕತೆಗಳಲ್ಲಿ ಒಬ್ಬರಾಗಿರುವ ದಿಲೀಪ್ ಕುಮಾರ್ ಜುಲೈ 7ರಂದು ತಮ್ಮ 97ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಅವರ ಕುರಿತ ಮಾಹಿತಿಗಳು ಅಧಿಕೃತವಾಗಿ ದಿಲೀಪ್ ಕುಮಾರ್ ಟ್ವಿಟರ್ ಖಾತೆಯಲ್ಲಿ ಲಭ್ಯವಾಗುತ್ತಿತ್ತು. ಕೊನೆಯ ದಿನಗಳಲ್ಲೂ ಅವರ ಆರೋಗ್ಯದ ಮಾಹಿತಿಯನ್ನು ಅದರಿಂದ ನೀಡಲಾಗುತ್ತಿತ್ತು. ಇದೀಗ ಆ ಟ್ವಿಟರ್ ಖಾತೆಯನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ದಿಲೀಪ್ ಪತ್ನಿ ಸಾಯಿರಾ ಬಾನು ಅನುಮತಿ ನೀಡಿದ್ದಾರೆ ಎಂದು ಕುಟುಂಬದ ಆಪ್ತ ಫೈಸಲ್ ಫಾರೂಖಿ ಟ್ವೀಟ್ ಮುಖಾಂತರ ತಿಳಿಸಿದ್ದಾರೆ.
ದಿಲೀಪ್ ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ನೀಡಲಾಗಿದ್ದು, ‘ಬಹಳಷ್ಟು ಸಂವಾದ, ಮಾತುಕತೆ ನಡೆದ ನಂತರ ಈ ಖಾತೆಯನ್ನು ಡಿಲೀಟ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕೆ ಅವರ ಪತ್ನಿ ಸೈರಾ ಬಾನು ಕೂಡ ಅನುಮತಿ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿಮತ್ತು ಅಭಿಮಾನಕ್ಕೆ ಧನ್ಯವಾದಗಳು’ ಎಂದು ಪೋಸ್ಟ್ ಮಾಡಲಾಗಿದ್ದು, ಕೆಳಗೆ ಫೈಸಲ್ ಫಾರೂಖಿ ಅವರ ಹೆಸರನ್ನು ಹಾಕಲಾಗಿದೆ. ದಿಲೀಪ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದಾಗಲೂ ಫೈಸಲ್ ಮಾಹಿತಿ ನೀಡಿದ್ದರು. ದಿಲೀಪ್ ಟ್ವಿಟರ್ ಖಾತೆಯನ್ನು ಸೈರಾ ಬಾನು ಹಾಗೂ ಫೈಸಲ್ ಜಂಟಿಯಾಗಿ ನಿರ್ವಹಿಸುತ್ತಿದ್ದರು. ಈ ಖಾತೆಗೆ ಸುಮಾರು 6 ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದಾರೆ. ಇದೀಗ ಎಲ್ಲರ ಒಮ್ಮತದೊಂದಿಗೆ ಟ್ವಿಟರ್ ಖಾತೆ ಮುಚ್ಚಲು ನಿರ್ಧರಿಸಲಾಗಿದೆ.
ಈ ಕುರಿತು ಮಾಡಲಾಗಿರುವ ಟ್ವೀಟ್:
After much discussion and deliberation and with the consent of Saira Banu ji, I hv decided to close this twitter account of beloved Dilip Kumar Saab. Thank you for your continuous love and support.
-Faisal Farooqui pic.twitter.com/NAabHe1DZu— Dilip Kumar (@TheDilipKumar) September 15, 2021
ದಿಲೀಪ್ ನೆನಪು ಹಾಗೇ ಇರಲಿ ಎಂದ ಅಭಿಮಾನಿಗಳು:
ದಿಲೀಪ್ ಅವರ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಲು ಅಭಿಮಾನಿಗಳು ಅಷ್ಟಾಗಿ ಸಮ್ಮತಿ ಸೂಚಿಸಿಲ್ಲ. ಅವರ ನೆನಪುಗಳೆಲ್ಲವೂ ಇಲ್ಲಿವೆ. ದಯವಿಟ್ಟು ಈ ಖಾತೆ ಹಾಗೇ ಇರಲಿ ಎಂದು ಹಲವರು ಕೋರಿಕೊಳ್ಳುತ್ತಿದ್ದಾರೆ. ಮತ್ತೆ ಹಲವರು, ‘ಸೈರಾ ಬಾನು ಅವರ ಭಾವನೆಗಳನ್ನು ಗೌರವಿಸುತ್ತೇವೆ. ಆದರೆ ಈ ಖಾತೆ ಉಳಿದಿದ್ದರೆ ಸಂತಸವಾಗುತ್ತಿತ್ತು’ ಎಂದು ಬರೆದಿದ್ದಾರೆ. ಬಹುತೇಕ ಅಭಿಮಾನಿಗಳು ಟ್ವಿಟರ್ ಖಾತೆ ಇರಲಿ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ದಿಲೀಪ್ ಕುಮಾರ್ ನೆನಪಿನಲ್ಲಿ’ ಎಂದು ಟ್ವಿಟರ್ ಖಾತೆಯ ಹೆಸರನ್ನು ಬದಲಾಯಿಸಿ- ಪೋಸ್ಟ್ಗಳನ್ನು ಹಂಚಿಕೊಳ್ಳಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಅಭಿಮಾನಿಗಳ ಈ ಕೋರಿಕೆಗೆ ಇನ್ನೂ ದಿಲೀಪ್ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:
‘ನಾನು ಉಳಿಯುವ ರೀತಿ ಕಾಣುತ್ತಿಲ್ಲ’; ಹೊಸ ವಿಡಿಯೋ ಮಾಡಿ ಹರಿಬಿಟ್ಟ ನಟಿ ವಿಜಯಲಕ್ಷ್ಮಿ
Shah Rukh Khan: ಟ್ವಿಟರ್ನಲ್ಲಿ ಟ್ರೆಂಡ್ ಆದ ‘ಬಾಯ್ಕಾಟ್ ಶಾರುಖ್ ಖಾನ್’; ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?
(Late actor Dileep Kumar’s twitter handle will be deleted in the consent of Saira Banu)