ಸಲ್ಮಾನ್ ಖಾನ್ಗೆ ಜೀವನ ಬೆದರಿಕೆ ಹಾಕಿರುವ ಹಾಗೂ ಇತ್ತೀಚೆಗಷ್ಟೆ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಖಿಯನ್ನು ಹತ್ಯೆ ಮಾಡಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಹಚರರು ಇದೀಗ ಖ್ಯಾತ ಪಂಜಾಬಿ ಗಾಯಕ ಬಾದ್ಶಾಗೆ ಸೇರಿದ ಬಾರ್ ಮತ್ತು ರೆಸ್ಟೊರೆಂಟ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಚಂಡೀಘಡದಲ್ಲಿರುವ ಬಾದ್ಶಾ ಮಾಲೀಕತ್ವದ ಬಾರ್ ಮತ್ತು ರೆಸ್ಟೊರೆಂಟ್ ಮುಂಭಾಗದಲ್ಲಿ ಬಾಂಬ್ ಎಸೆಯಲಾಗಿದೆ. ಆದರೆ ಈ ದಾಳಿಯಲ್ಲಿಯೂ ಯಾರಿಗೂ ಹಾನಿ ಆಗಿಲ್ಲ. ಬಾರ್ಗೂ ಹಾನಿ ಆಗಿಲ್ಲ.
ಬಾದ್ಶಾರ ನೈಟ್ಕ್ಲಬ್, ಚಂಢೀಘಡದ ಸೆಕ್ಟರ್ 26 ರಲ್ಲಿದ್ದು, ಇಲ್ಲಿದೆ ಐಟಿ ಮಂದಿ ಸೇರಿದಂತೆ ಶ್ರೀಮಂತ ಯುವಕ-ಯುವತಿಯರು ಪಾರ್ಟಿ ಮಾಡಲು ಆಗಮಿಸುತ್ತಾರೆ. ನವೆಂಬರ್ 27ರ ಮುಂಜಾನೆ 2:45 ರ ವೇಳೆಗೆ ಬೈಕ್ನಲ್ಲಿ ಬಂದ ಇಬ್ಬರು ಬಾಂಬ್ ಅನ್ನು ನೈಟ್ಕ್ಲಬ್ ಮುಂದೆ ಎಸೆದು ಪರಾರಿಯಾಗಿದ್ದಾರೆ. ಲಘು ಬಾಂಬ್ಗಳನ್ನು ಎಸೆಯಲಾಗಿದ್ದು, ಇದರಿಂದ ಯಾವುದೇ ಹಾನಿ ಆಗಿಲ್ಲ. ಆಸ್ತಿಗೂ ಸಹ ಸಣ್ಣ ಪ್ರಮಾಣದ ಹಾನಿ ಆಗಿದೆ ಅಷ್ಟೆ.
ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿಯ ಸಹಚರರೇ ಆಗಿರುವ ಗೋಲ್ಡಿ ಬ್ರಾರ್, ರೋಹಿತ್ ಗದಾರ ಅವರುಗಳು ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. ಬಾದ್ಶಾಗೆ ಸೇರಿದ ಡಿಯೋರಾ ರೆಸ್ಟಾರೆಂಟ್ ಮತ್ತು ಸಿವಿಲ್ಲೀ ಬಾರ್ ಮತ್ತು ಲಾಂಜ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗಿದ್ದು, ಈ ಹಿಂದೆ ಬಾದ್ಶಾ ಬಳಿ ಹಫ್ತಾ ಹಣ ಕೇಳಿದ್ದೆವು ಆದರೆ ಆತ ಕೊಡದೇ ನಿರ್ಲಕ್ಷ್ಯ ಮಾಡಿದ್ದ ಇದೇ ಕಾರಣಕ್ಕೆ ಈ ದಾಳಿ ಮಾಡಲಾಗಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿಗಿಂತಲೂ ಕ್ರೂರ: ಮಾಜಿ ಗೆಳತಿ
2022 ರಲ್ಲಿ ನಿಧನವಾದ ಗಾಯಕ, ರಾಜಕಾರಣಿ ಸಿಧು ಮೂಸೆವಾಲ ಕೊಲೆಗೆ ಗೋಲ್ಡಿ ಬ್ರಾರ್ ಕಾರಣವಾಗಿದ್ದ. ಇದೀಗ ಇದೇ ವ್ಯಕ್ತಿ ಬಾದ್ಶಾಗೆ ಸೇರಿದ ಆಸ್ತಿಯ ಮೇಲೆ ಬಾಂಬ್ ದಾಳಿ ಮಾಡಿಸಿದ್ದಾರೆ. ಇದೇ ಗ್ಯಾಂಗ್ನವರು ಗಾಯಕನ ಹನಿ ಸಿಂಗ್, ಇತ್ತೀಚೆಗೆ ಸ್ಟಾರ್ ಆಗಿರುವ ದಿಲ್ಜೀತ್ ದೊಸ್ಸಾಂಜ್ ಅವರಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Thu, 28 November 24