AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿಗಿಂತಲೂ ಕ್ರೂರ: ಮಾಜಿ ಗೆಳತಿ

Salman Khan-Lawrence Bishnoi: ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ, ‘ಲಾರೆನ್ಸ್ ಬಿಷ್ಣೊಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ’ ಎಂದಿದ್ದಾರೆ. ಸಲ್ಮಾನ್ ತಮ್ಮ ಮೇಲೆ ಹಾಗೂ ಐಶ್ವರ್ಯಾ ರೈ ಮೇಲೆ ದೈಹಿಕ ಹಲ್ಲೆ ಮಾಡಿದ್ದ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿಗಿಂತಲೂ ಕ್ರೂರ: ಮಾಜಿ ಗೆಳತಿ
ಮಂಜುನಾಥ ಸಿ.
|

Updated on: Oct 31, 2024 | 6:56 PM

Share

ಸಲ್ಮಾನ್ ಖಾನ್​ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ನಿಂದ ಕೊಲೆ ಬೆದರಿಕೆ ಇದೆ. ಇತ್ತೀಚೆಗಷ್ಟೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ನವರು ಎನ್ನಲಾದ ಕೆಲವರು ಸಲ್ಮಾನ್ ಖಾನ್​ರ ಆಪ್ತ ಬಾಬಾ ಸಿದ್ಧಿಕಿಯನ್ನು ಹತ್ಯೆ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಅಂತೂ ತಾನು ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಹೇಳಿದ್ದಾನೆ. ಇದರ ನಡುವೆ ಸಲ್ಮಾನ್ ಖಾನ್​ರ ಮಾಜಿ ಗೆಳತಿ ಎನ್ನಲಾಗುವ ಸೋಮಿ ಅಲಿ, ‘ಲಾರೆನ್ಸ್ ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ’ ಎಂದು ಹೇಳಿದ್ದಾರೆ. ಸೋಮಿಯ ಈ ಹೇಳಿಕೆ ವೈರಲ್ ಆಗುತ್ತಿದೆ.

ಐಎಎನ್​ಎಸ್​ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋಮಿ ಅಲಿ, ‘ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ. ಆತನೊಂದಿಗೆ ರಿಲೇಷನ್​ಶಿಪ್​ನಲ್ಲಿದ್ದಾಗ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನಾನು ಅನುಭವಿಸಿದ್ದೆ. ನಾನು ಮಾತ್ರವೇ ಅಲ್ಲ ಸಲ್ಮಾನ್ ಖಾನ್ ಜೊತೆಗೆ ಪ್ರೇಮ ಸಂಬಂಧದಲ್ಲಿದ್ದ ಎಲ್ಲ ನಟಿಯರೂ ಸಹ ಸಾಕಷ್ಟು ಹಿಂಸೆ ಮತ್ತು ನೋವನ್ನು ಅನುಭವಿಸಿದ್ದಾರೆ, ಆದರೆ ನನ್ನಷ್ಟು ಕೆಟ್ಟದಾಗಿ ಆತ ಇನ್ಯಾರೊಂದಿಗೂ ನಡೆದುಕೊಂಡಿರಲಿಲ್ಲ’ ಎಂದಿದ್ದಾರೆ.

‘ಐಶ್ವರ್ಯಾ ರೈ ಮೇಲೆಯೂ ಸಹ ಬಹಳ ಕೆಟ್ಟದಾಗಿ ಆತ ಹಲ್ಲೆ ಮಾಡಿದ್ದ. ಐಶ್ವರ್ಯಾ ಗೆ ಹೊಡೆದು ಆಕೆಯ ಭುಜದ ಮೂಳೆಯನ್ನೇ ಮುರಿದಿದ್ದ’ ಎಂದಿರುವ ಸೋಮಿ, ‘ಕತ್ರಿನಾ ಕೈಫ್​ಗೆ ಯಾವ ರೀತಿ ಹಿಂಸೆ ಕೊಟ್ಟಿದ್ದ ಎಂಬುದು ನನಗೆ ಗೊತ್ತಿಲ್ಲ’ ಎಂದಿದ್ದಾರೆ. ‘ಸಲ್ಮಾನ್ ಖಾನ್ ನನ್ನೊಂದಿಗೆ ನಡೆದುಕೊಂಡಿರುವ ರೀತಿಯನ್ನು ನೆನಪಿಸಿಕೊಂಡರೆ, ಸಲ್ಮಾನ್ ಮುಂದೆ ಬಿಷ್ಣೋಯಿ ಏನೂ ಇಲ್ಲ ಅನಿಸುತ್ತದೆ’ ಎಂದಿದ್ದಾರೆ ಸೋಮಿ ಅಲಿ.

ಇದನ್ನೂ ಓದಿ:ಸಿದ್ಧಿಕಿ ಸಾವಿನಿಂದ ಸಲ್ಮಾನ್ ಖಾನ್​ಗೆ ಬರುತ್ತಿಲ್ಲ ನಿದ್ರೆ; ವಿಚಲಿತಗೊಂಡಿದ್ದಾರೆ ಸಲ್ಲು

ಸೋಮಿ ಅಲಿ ಹಿಂದಿಯ ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 1991 ರಿಂದ ಸುಮಾರು ಎಂಟು ವರ್ಷಗಳ ಕಾಲ ಸೋಮಿ ಅಲಿ ಹಾಗೂ ಸಲ್ಮಾನ್ ಖಾನ್ ಪ್ರೀತಿಯಲ್ಲಿದ್ದರು. ಬಳಿಕ ಸಲ್ಮಾನ್ ಖಾನ್ ಐಶ್ವರ್ಯಾ ರೈ ಅನ್ನು ಪ್ರೀತಿಸಲು ಪ್ರಾರಂಭಿಸಿದರು ಎನ್ನಲಾಗುತ್ತದೆ. 1997 ರಲ್ಲಿ ‘ಚುಪ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದ ಸೋಮಿ ಅಲಿ ಆ ನಂತರ ಭಾರತ ಬಿಟ್ಟು ಫ್ಲೋರಿಡಾಕ್ಕೆ ತೆರಳಿದ್ದರು. ಬಳಿಕ ಯಾವುದೇ ಹಿಂದಿ ಸಿನಿಮಾದಲ್ಲಿ ನಟಿಸಲಿಲ್ಲ.

ಸಲ್ಮಾನ್ ಖಾನ್​ಗೆ ಲಾರೆನ್ಸ್ ಬಿಷ್ಣೋಯಿಯಿಂದ ಬೆದರಿಕೆ ಬಂದಾಗಲೂ ಹೇಳಿಕೆ ನೀಡಿದ್ದ ಸೋಮಿ ಅಲಿ, ಲಾರೆನ್ಸ್ ಬಿಷ್ಣೋಯಿ ಫೋನ್ ನಂಬರ್ ಇದ್ದರೆ ಕೊಡಿ ನಾನು ಲಾರೆನ್ಸ್ ಬಿಷ್ಣೋಯಿ ಬಳಿ ಮಾತನಾಡುತ್ತೇನೆ ಎಂದಿದ್ದರು. ಆದರೆ ಈಗ ಸಲ್ಮಾನ್ ಖಾನ್​ಗಿಂತಲೂ ಬಿಷ್ಣೋಯಿ ಮೇಲು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ