ಶಾರುಖ್ ಖಾನ್​ಗೆ ವೀಕೆಂಡ್​ನಲ್ಲಿ ಡಬಲ್ ಸೆಲೆಬ್ರೇಷನ್; ಬೆಳಕಿನಿಂದ ಅಲಂಕೃತಗೊಂಡ ಮನ್ನತ್

Shah Rukh Khan: ಶಾರುಖ್ ಖಾನ್ ಮನೆ ಮನ್ನತ್ ಮುಂಬೈನ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಇದೀಗ ದೀಪಾವಳಿ ಹಬ್ಬಕ್ಕೆ ಶಾರುಖ್ ಖಾನ್ ತಮ್ಮ ಮನೆಯನ್ನು ದೀಪಗಳಿಂದ ಅಲಂಕರಿಸಿದ್ದಾರೆ.

ಶಾರುಖ್ ಖಾನ್​ಗೆ ವೀಕೆಂಡ್​ನಲ್ಲಿ ಡಬಲ್ ಸೆಲೆಬ್ರೇಷನ್; ಬೆಳಕಿನಿಂದ ಅಲಂಕೃತಗೊಂಡ ಮನ್ನತ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Oct 30, 2024 | 7:14 PM

ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಈ ಬಾರಿ ಮನೆಯಲ್ಲಿ ಒಟ್ಟೊಟ್ಟಿಗೆ ಎರಡೆರಡು ಸಂಭ್ರಮ. ಶಾರುಖ್ ಖಾನ್ ಅವರು ಮುಸ್ಲಿಂ ಸಮುದಾಯದವರಾದರೂ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಈಗ ಸದ್ಯ ಅವರು ದೀಪಾವಳಿ ಸಂಭ್ರಮದಲ್ಲಿ ಇದ್ದಾರೆ. ಇದರ ಜೊತೆಗೆ ನವೆಂಬರ್ 2 ಅವರ ಜನ್ಮದಿನ. ಎರಡೆರಡು ಒಟ್ಟೊಟ್ಟಿಗೆ ಬಂದಿವೆ. ಹೀಗಾಗಿ, ಅವರಿಗೆ ಡಬಲ್ ಸೆಲೆಬ್ರೇಷನ್. ಇದು ಅವರಿಗೆ 59ನೇ ವರ್ಷದ ಜನ್ಮದಿನ. ಹೀಗಾಗಿ ಇಡೀ ಮನೆಯನ್ನು ಬೆಳಕಿನಿಂದ ಅಲಂಕರಿಸಲಾಗಿದೆ.

ಸದ್ಯ ಶಾರುಖ್ ಖಾನ್ ಅವರ ಮನ್ನತ್ ಮನೆಯ ವಿಡಿಯೋ ವೈರಲ್ ಆಗಿದೆ. ಎಎನ್ಐ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಮನ್ನತ್ ಮನೆಗೆ ಲೈಟ್ ಹಾಕಿ ಅಲಂಕರಿಸಲಾಗಿದೆ. ಅಭಿಮಾನಿಗಳು ಮನ್ನತ್ ಎದುರು ನಿಂತು ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಾ ಇದ್ದಾರೆ.

ಶಾರುಖ್ ಖಾನ್ ಮನೆ ಅವರ ಅಭಿಮಾನಿಗಳ ನೆಚ್ಚಿನ ತಾಣಗಳಲ್ಲಿ ಒಂದು. ಈ ಮನೆಯ ಎದುರು ಜನರು ಯಾವಾಗಲೂ ನೆರೆಯುತ್ತಾರೆ. ಫ್ಯಾನ್ಸ್ ಶಾರುಖ್ ಖಾನ್ ಅವರನ್ನು ನೋಡಲು ಕಾಯುತ್ತಾ ಇರುತ್ತಾರೆ. ಅವರಿಗೆ ಪೊಲೀಸ್ ರಕ್ಷಣೆ ಇದ್ದರೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನವೆಂಬರ್ 2ರಂದು ಮುಂಬೈನಲ್ಲಿ ಅವರ ಮನೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆಯಲಿದ್ದಾರೆ.

ಇದನ್ನೂ ಓದಿ:ದುಬೈನಲ್ಲಿ ಶಾರುಖ್ ಖಾನ್ ಭೇಟಿಯಾದ ಅಫ್ಘಾನ್ ಆಟಗಾರ

ಶಾರುಖ್ ಖಾನ್ ಅವರು ಬರ್ತ್ಡೇ ದಿನ ಮನೆಯ ಎದುರು ಬಂದು ಅಭಿಮಾನಿಗಳಿಗೆ ದರ್ಶನ ಕೊಡುತ್ತಾರೆ. ಫ್ಯಾನ್ಸ್ ಕಡೆ ಕೈ ಬೀಸಿ ಸಂಭ್ರಮಿಸುತ್ತಾರೆ. ಇದು ಅವರು ಮೊದಲಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯ. ಈ ಬಾರಿಯೂ ಹಾಗೆಯೇ ಆಗಬಹುದು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಶಾರುಖ್ ಖಾನ್ ಅವರು ಇತ್ತೀಚೆಗೆ ದುಬೈನಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಕುಟುಂಬದ ಜೊತೆ ಅವರು ದುಬೈ ತೆರಳಿದ್ದರು. ಅಲ್ಲಿ ಆರ್ಯನ್ ಖಾನ್ ಅವರ ಬಟ್ಟೆ ಬ್ರ್ಯಾಂಡ್ ಕಡೆಯಿಂದ ವಿಶೇಷ ಈವೆಂಟ್ ಆಯೋಜನೆ ಮಾಡಲಾಗಿತ್ತು. ಆ ಬಳಿಕ ಪಾರ್ಟಿ ಕೂಡ ಇತ್ತು.

ಶಾರುಖ್ ಖಾನ್ ಅವರು ‘ಕಿಂಗ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನೂ ಕೆಲವು ಸಿನಿಮಾಗಳು ಲೈನ್ನಲ್ಲಿ ಇವೆ. ಈ ಬಗ್ಗೆ ನವೆಂಬರ್ 2ರಂದು ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಕುರಿತು ಅಧಿಕೃತ ಮಾಹಿತಿ ಅಂದೇ ಸಿಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Wed, 30 October 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ