ಸಿದ್ಧಿಕಿ ಸಾವಿನಿಂದ ಸಲ್ಮಾನ್ ಖಾನ್​ಗೆ ಬರುತ್ತಿಲ್ಲ ನಿದ್ರೆ; ವಿಚಲಿತಗೊಂಡಿದ್ದಾರೆ ಸಲ್ಲು

ಸಲ್ಮಾನ್ ಖಾನ್​ ಅನ್ನು ಕೊಂದೇ ತೀರುವ ಪಣತೊಟ್ಟಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ, ತನ್ನ ಸಹಚರರ ಸಹಾಯದಿಂದ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಕಿಯ ಹತ್ಯೆ ಮಾಡಿದ್ದಾರೆ. ಆದರೆ ಆಪ್ತ ಸಿದ್ಧಿಕಿಯನ್ನು ಕಳೆದುಕೊಂಡ ಬಳಿಕ ಸಲ್ಮಾನ್ ಖಾನ್ ವಿಚಲಿತರಾಗಿದ್ದಾರೆ.

ಸಿದ್ಧಿಕಿ ಸಾವಿನಿಂದ ಸಲ್ಮಾನ್ ಖಾನ್​ಗೆ ಬರುತ್ತಿಲ್ಲ ನಿದ್ರೆ; ವಿಚಲಿತಗೊಂಡಿದ್ದಾರೆ ಸಲ್ಲು
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 30, 2024 | 6:55 PM

ಎನ್‌ಸಿಪಿ (ಅಜಿತ್ ಪವಾರ್) ಪಕ್ಷದ ನಾಯಕ, ಮಾಜಿ ಸಚಿವ ಬಾಬಾ ಸಿದ್ಧಿಕಿ ಅವರನ್ನು ಅಕ್ಟೋಬರ್ 12 ರಂದು ರಾತ್ರಿ 9:30 ರ ಸುಮಾರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಿದ್ಧಿಕಿ ಸಾವಿನ ಆಘಾತದಿಂದ ಅವರ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ. ಒಂದೆಡೆ, ತಂದೆಯನ್ನು ಕಳೆದುಕೊಂಡ ದುಃಖವನ್ನು ನಿಭಾಯಿಸಲು ಮಗ ಜೀಶನ್ ಸಿದ್ಧಿಕಿ ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ನಟ ಸಲ್ಮಾನ್ ಖಾನ್ ಕೂಡ ಬಾಬಾ ಸಿದ್ಧಿಕಿ ಹತ್ಯೆಯಿಂದ ಬಿಗ್ ಶಾಕ್ನಲ್ಲಿ ಇದ್ದಾರೆ.

ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್ ತುಂಬಾ ನಿಕಟ ಸಂಬಂಧ ಹೊಂದಿದ್ದರು. ಸಿದ್ಧಿಕಿ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಕಾರಣರಾಗಿದ್ದ. ಸಲ್ಮಾನ್ ಖಾನ್ ಮತ್ತು ದಾವೂದ್‌ಗೆ ಯಾರು ಸಹಾಯ ಮಾಡುತ್ತಾರೋ ಅವರ ಹೆಸರನ್ನು ಲಿಸ್ಟ್ನಲ್ಲಿ ಇಡಲಾಗುತ್ತದೆ ಎಂದು ಬಿಷ್ಣೋಯ್ ಗ್ಯಾಂಗ್ ಫೇಸ್‌ಬುಕ್ ಪೋಸ್ಟ್ ಮೂಲಕ ಬೆದರಿಕೆ ಹಾಕಿದೆ. ಹಾಗಾಗಿ ಸಲ್ಮಾನ್ ಜೊತೆಗಿನ ಆಪ್ತತೆಯಿಂದ ಸಿದ್ಧಿಕಿ ಪ್ರಾಣ ಕಳೆದುಕೊಳ್ಳಬೇಕಾಯಿತು ಎನ್ನಲಾಗಿದೆ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಜೀಶನ್ ತಂದೆಯ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಭಯವನ್ನು ಬದಿಗಿಟ್ಟು ದುಬೈಗೆ ತೆರಳಲು ರೆಡಿ ಆದ ಸಲ್ಮಾನ್ ಖಾನ್

‘ಆ ಘಟನೆಯ ನಂತರ ಸಲ್ಮಾನ್ ಭಾಯ್ ತುಂಬಾ ನಿರಾಶೆಗೊಂಡಿದ್ದಾರೆ. ಅಪ್ಪ ಮತ್ತು ಸಲ್ಮಾನ್ ಭಾಯ್ ಪರಸ್ಪರ ಸಹೋದರರಂತೆ ಇದ್ದರು. ಅವರ ಸಂಬಂಧ ತುಂಬಾ ವಿಶೇಷವಾಗಿತ್ತು. ತಂದೆಯ ಮರಣದ ನಂತರ ಭಾಯಿ ನಮಗೆ ತುಂಬಾ ಸಹಾಯ ಮಾಡಿದರು. ರಾತ್ರಿ ನಿದ್ದೆ ಬರುವುದಿಲ್ಲ ಎಂದೂ ಹೇಳಿದ್ದರು. ನಾವು ಯಾವಾಗಲೂ ಅವರಿಂದ ಬೆಂಬಲವನ್ನು ಪಡೆದಿದ್ದೇವೆ ಮತ್ತು ಅದನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತೇವೆ’ ಎಂದು ಜೀಶನ್ ಸಿದ್ಧಿಕಿ ಬಿಬಿಸಿ ಹಿಂದಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ಧಿಕಿ, 2004-2008ರ ಅವಧಿಯಲ್ಲಿ ಸಚಿವರಾಗಿದ್ದರು. ಫೆಬ್ರವರಿ 2024ರಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಬಣವನ್ನು ಸೇರಿದರು. ರಾಜಕೀಯ ವಲಯದಲ್ಲಿ ಪ್ರಸಿದ್ಧರಾಗಿದ್ದ ಸಿದ್ಧಿಕಿ ಹಿಂದಿ ಚಿತ್ರರಂಗದ ಅನೇಕ ನಟರೊಂದಿಗೆ ಸ್ನೇಹ ಸಂಬಂಧ ಹೊಂದಿದ್ದರು. ಶನಿವಾರ (ಅಕ್ಟೋಬರ್ 12) ರಾತ್ರಿ 9:30 ರ ಸುಮಾರಿಗೆ ಸಿದ್ಧಿಕಿ ಮೇಲೆ ಕೆಲವರು ನಾಲ್ಕೈದು ಗುಂಡುಗಳನ್ನು ಹಾರಿಸಿದರು. ಈ ಪೈಕಿ ಒಂದು ಗುಂಡು ಸಿದ್ಧಿಕಿಯ ಎದೆಗೆ ತಗುಲಿತ್ತು. ಈ ಗುಂಡಿನ ದಾಳಿಯಲ್ಲಿ ಸಿದ್ಧಿಕಿ ಜತೆಗಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ