ಫೋನ್ ಮಾಡಲು ಅಮಿತಾಭ್ ಬಳಿ ಹಣ ಕೇಳಿದ್ದ ರತನ್ ಟಾಟಾ
ಅಮಿತಾಭ್ ಬಚ್ಚನ್ ಅವರು ತಮ್ಮ ಇತ್ತೀಚಿಗೆ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ರತನ್ ಟಾಟಾ ಅವರೊಂದಿಗಿನ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ರತನ್ ಟಾಟಾ ಅವರಿಗೆ ಹಣವಿಲ್ಲದೆ ಕರೆ ಮಾಡಲು ಸಹಾಯ ಬೇಕಾಗಿತ್ತು. ತಮ್ಮಿಂದ ಅವರು ಸಹಾಯ ಪಡೆದಿದ್ದರು ಎಂದು ಅಮಿತಾಭ್ ವಿವರಿಸಿದ್ದಾರೆ.
ಉದ್ಯಮಿ ರತನ್ ಟಾಟಾ ಅವರು ಅಕ್ಟೋಬರ್ 9 ರಂದು ನಿಧನರಾದರು. ಅವರು ತಮ್ಮ 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ರತನ್ ಟಾಟಾ ಅವರು ಇಂದು ನಮ್ಮೊಂದಿಗಿಲ್ಲವಾದರೂ ಅವರ ಅನೇಕ ನೆನಪುಗಳು ಇಂದಿಗೂ ಜೀವಂತವಾಗಿವೆ. ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ರತನ್ ಟಾಟಾ ಜೊತೆಗಿನ ಕಾಲದ ನೆನಪನ್ನು ಹಂಚಿಕೊಂಡಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ 16′ ಶೋನಲ್ಲಿ ಅಮಿತಾಭ್ಈ ಬಗ್ಗೆ ಮಾತನಾಡಿದ್ದಾರೆ. ’ರತನ್ ಟಾಟಾ ಹಣ ಕೇಳಿದ್ದರು’ ಎಂದಿದ್ದಾರೆ. ‘ಕೆಬಿಸಿ 16′ ಪ್ರೋಮೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅಮಿತಾಭ್ ಅವರು ಬೋಮನ್ ಇರಾನಿ ಮತ್ತು ಫರಾ ಖಾನ್ ಅವರು ರತನ್ ಟಾಟಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ರತನ್ ಟಾಟಾ ಅವರನ್ನು ನೆನಪಿಸಿಕೊಂಡ ಅಮಿತಾಭ್, ‘ಒಮ್ಮೆ ನಾವಿಬ್ಬರೂ ಒಂದೇ ವಿಮಾನದಲ್ಲಿ ತೆರಳಿದ್ದೆವು. ನಾವು ವಿಮಾನ ನಿಲ್ದಾಣದಲ್ಲಿ ಇಳಿದೆವು. ಇಳಿದ ನಂತರ ರತನ್ ಟಾಟಾ ಅವರಿಗೆ ತಮ್ಮನ್ನು ಕರೆದುಕೊಂಡು ಹೋಗಲು ಬಂದವರು ಕಾಣಲಿಲ್ಲ. ನಾನು ಅವರನ್ನು ನೋಡಿದೆ ಮತ್ತು ಅವರು ಫೋನ್ ಮಾಡಲು ಫೋನ್ ಬೂತ್ ಕಡೆಗೆ ಹೋದರು’ ಎಂದಿದ್ದಾರೆ.
ನಂತರ ಏನಾಯಿತು ಎಂದು ನಾನು ಎಂದಿಗೂ ಮರೆಯುವುದಿಲ್ಲ ಎಂದು ಬಿಗ್ ಬಿ ಹೇಳಿದರು, ‘ಸ್ವಲ್ಪ ಸಮಯದ ನಂತರ ರತನ್ ಟಾಟಾ ನನ್ನ ಬಳಿಗೆ ಬಂದು, ಅಮಿತಾಭ್ ಅವರೇ ನಾನು ನಿಮ್ಮಿಂದ ಸ್ವಲ್ಪ ಹಣವನ್ನು ಪಡೆಯಬಹುದೇ? ಕರೆ ಮಾಡಲು ನನ್ನ ಬಳಿ ಹಣವಿಲ್ಲ ಎಂದರು’ ಎಂಬುದಾಗಿ ಅಚ್ಚರಿ ವ್ಯಕ್ತಪಡಿಸಿದರು ಬಿಗ್ ಬಿ. ‘ಇಷ್ಟು ದೊಡ್ಡ ಉದ್ಯಮಿ ನನ್ನೊಂದಿಗೆ ಸಿಂಪಲ್ ಆಗಿ ಮಾತನಾಡಿದ್ದರು’ ಎಂದು ಹೇಳಿದ್ದಾರೆ.
ರತನ್ ಟಾಟಾ ಅನೇಕರಿಗೆ ಸ್ಫೂರ್ತಿ. ಉದ್ಯಮ ವಲಯವನ್ನು ಮೀರಿ, ರತನ್ ಟಾಟಾ ಅನೇಕರೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಿದರು. ಎರಡು ದಶಕಗಳ ಕಾಲ ಅವರು ಟಾಟಾ ಸಮೂಹದ ಮುಖ್ಯಸ್ಥರಾಗಿದ್ದರು.
View this post on Instagram
ಇದನ್ನೂ ಓದಿ: ‘ನನ್ನನ್ನು ತೆಲುಗು ಚಿತ್ರರಂಗದ ಭಾಗವಾಗಿ ಪರಿಗಣಿಸಿ’; ಕೋರಿಕೆ ಇಟ್ಟ ಅಮಿತಾಭ್ ಬಚ್ಚನ್
ರತನ್ ಟಾಟಾ ಅವರು ಅನೇಕರ ಮೇಲೆ ಆಳವಾಗಿ ಪ್ರಭಾವ ಬೀರಿದರು. ಎರಡು ದಶಕಗಳ ಕಾಲ ಅವರು ಟಾಟಾ ಸಮೂಹದ ಮುಖ್ಯಸ್ಥರಾಗಿದ್ದರು. ಟಾಟಾ ಉಪ್ಪಿನಿಂದ ಸಾಫ್ಟ್‌ವೇರ್‌ವರೆಗೆ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದೆ. ಆದರೆ ಅವರ ಸಾವಿನ ಸುದ್ದಿ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.