ಭಯವನ್ನು ಬದಿಗಿಟ್ಟು ದುಬೈಗೆ ತೆರಳಲು ರೆಡಿ ಆದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ನಿಂದ ಕೊಲೆ ಬೆದರಿಕೆಗಳು ಸತತವಾಗಿ ಬರುತ್ತಲೇ ಇವೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್​ರ ಆಪ್ತ ಗೆಳೆಯ ಬಾಬಾ ಸಿದ್ಧಿಕಿಯನ್ನು ಇದೇ ಗುಂಪಿನ ಕೆಲವರು ಕೊಂದಿದ್ದಾರೆ. ಇದರ ನಡುವೆ ಸಲ್ಮಾನ್ ಖಾನ್ ದುಬೈಗೆ ಹಾರಲು ಸಜ್ಜಾಗಿದ್ದಾರೆ.

ಭಯವನ್ನು ಬದಿಗಿಟ್ಟು ದುಬೈಗೆ ತೆರಳಲು ರೆಡಿ ಆದ ಸಲ್ಮಾನ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 27, 2024 | 12:30 PM

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಕಳೆದ ಹಲವು ವರ್ಷಗಳಿಂದ ಗೂಂಡಾ ಲಾರೆನ್ಸ್ ಬಿಷ್ಣೋಯ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟನಿಗೆ ಹಲವು ಬಾರಿ ಬೆದರಿಕೆ ಕೂಡ ಬಂದಿದೆ. ಇದೇ ವೇಳೆ ಸಲ್ಮಾನ್ ಖಾನ್ ಅವರ ವಿಶೇಷ ಸ್ನೇಹಿತ ಹಾಗೂ ಹಿರಿಯ ನಾಯಕ ಬಾಬಾ ಸಿದ್ಧಿಕಿ ಅವರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ತಕ್ಷಣವೇ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಯಿತು. ಸದ್ಯ ಖಾನ್ ಕುಟುಂಬ ಭಯದ ಸ್ಥಿತಿಯಲ್ಲಿದೆ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಿದ್ದಾರೆ. ಸಲ್ಮಾನ್ ಖಾನ್ ಇತ್ತೀಚೆಗೆ ‘ಸಿಂಗಮ್ ಅಗೇನ್’ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಇದಲ್ಲದೇ ನಟ ದುಬೈಗೂ ಹೋಗಲಿದ್ದಾರೆ ಎಂಬ ವರದಿಗಳಿವೆ.

ಲಾರೆನ್ಸ್ ಬಿಷ್ಣೋಯ್ ಬೆದರಿಕೆಯಿಂದಾಗಿ ಸಲ್ಮಾನ್ ಖಾನ್ ಸಂಪೂರ್ಣ ಭದ್ರತೆಯೊಂದಿಗೆ ಮುಂಬೈನಲ್ಲಿದ್ದಾರೆ. ‘ಸಿಖಂದರ್’ ಸಿನಿಮಾದ ಶೂಟಿಂಗ್ ಮುಂಬೈನ ಹೊರಗೆ ನಡೆಯಬೇಕಿತ್ತು. ಆದರೆ ಅದನ್ನು ರದ್ದುಪಡಿಸಿ ಮುಂಬೈನಲ್ಲಿ ಸೆಟ್ ಹಾಕಲಾಗಿದೆ ಎಂಬ ಮಾಹಿತಿ ಇದೆ. ವರದಿಯ ಪ್ರಕಾರ ಸಲ್ಮಾನ್ ಖಾನ್ ಶೀಘ್ರದಲ್ಲೇ ದುಬೈಗೆ ಕಾರ್ಯಕ್ರಮವೊಂದಕ್ಕೆ ತೆರಳಲಿದ್ದಾರೆ.

‘ದಬಾಂಗ್ ರಿಲೋಡೆಡ್’ಗಾಗಿ ಸಲ್ಮಾನ್ ಖಾನ್ ದುಬೈಗೆ ಹೋಗಲಿದ್ದಾರೆ ಎಂಬ ವರದಿಗಳಿವೆ. ಡಿಸೆಂಬರ್ 7ರಂದು ಶೋ ಆರಂಭವಾಗಲಿದೆ ಎಂದು ವರದಿಯಾಗಿದೆ. ಸಲ್ಮಾನ್ ತಮ್ಮ ಜೀವಕ್ಕೆ ಅಪಾಯವಿರುವಾಗಲೂ ಎಲ್ಲಾ ಚಿತ್ರೀಕರಣ ಮತ್ತು ಕಾರ್ಯಕ್ರಮಗಳನ್ನು ಸಮಯಕ್ಕೆ ಮುಗಿಸುತ್ತಿದ್ದಾರೆ.

ಇದನ್ನೂ ಓದಿ:ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೇಳೋದೇನು?

ಸಲ್ಮಾನ್ ಖಾನ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್, ಸೋನಾಕ್ಷಿ ಸಿನ್ಹಾ, ಸುನಿಲ್ ಗ್ರೋವರ್, ಆಸ್ತಾ ಗಿಲ್ ಮತ್ತು ಮನೀಶ್ ಪಾಲ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶೋ ದುಬೈ ಹಾರ್ಬರ್‌ನಲ್ಲಿ ನಡೆಯಲಿದೆ. ಸಿಕ್ಕಿರುವ ಮಾಹಿತಿಯಂತೆ ಶೋ ಟಿಕೆಟ್‌ಗಳ ಮಾರಾಟವೂ ಆರಂಭವಾಗಿದೆ.

ಸಲ್ಮಾನ್ ಖಾನ್ ಸಂಪೂರ್ಣ ಭದ್ರತೆಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಆದರೆ ಯಾವುದೇ ಸಮಸ್ಯೆಗಳು ಉದ್ಭವಿಸಿದರೆ, ಪ್ರೋಗ್ರಾಂನಲ್ಲಿ ಕೆಲವು ಬದಲಾವಣೆಗಳಾಗಬಹುದು… ಎಂದು ಕೂಡ ಹೇಳಲಾಗುತ್ತದೆ. ನಿಮಗೆ ಹೇಳಬೇಕೆಂದರೆ, ಸಲ್ಮಾನ್ ಖಾನ್ ಅವರು ‘ಸಿಂಗಮ್ ಅಗೇನ್’ ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಚಿತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರದ ಬಗ್ಗೆ ಮಾತನಾಡುತ್ತಾ, ನಟ ‘ಸಿಖಂದರ್’ ಚಿತ್ರದ ಮೂಲಕ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಜೊತೆ ನಟಿ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ