AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಿ ತೆರೆಯಲ್ಲಿ ಮಿಂಚಿದರೂ ರಂಗಭೂಮಿ ಮರೆಯದ ಅನುಪಮ್​ ಖೇರ್

ಅನುಪಮ್ ಖೇರ್ ಅವರು ‘ಮೈ ನೇಮ್ ಈಸ್ ಗೌಹರ್ ಜಾನ್’ ನಾಟಕದ ಪ್ರಥಮ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿವಿ9 ನೆಟ್‌ವರ್ಕ್‌ನ ಸಿಇಒ ಮತ್ತು ಎಂಡಿ ಬರುಣ್ ದಾಸ್ ಬರುಣ್ ದಾಸ್ ಅವರು ಅವರು ಅರ್ಪಿತಾ ಚಟರ್ಜಿ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.

ಬೆಳ್ಳಿ ತೆರೆಯಲ್ಲಿ ಮಿಂಚಿದರೂ ರಂಗಭೂಮಿ ಮರೆಯದ ಅನುಪಮ್​ ಖೇರ್
ಅನುಪಮ್ ಖೇರ್
ರಾಜೇಶ್ ದುಗ್ಗುಮನೆ
|

Updated on: Oct 26, 2024 | 7:00 PM

Share

ರಂಗಭೂಮಿಯಿಂದ ಬಂದು ಆ ಬಳಿಕ ಚಿತ್ರರಂಗದಲ್ಲಿ ಮಿಂಚಿದ ಅನೇಕರು ಇದ್ದಾರೆ. ಸಿನಿಮಾ ರಂಗದಲ್ಲಿ ಮಿಂಚಿದ ಬಳಿಕವೂ ರಂಗಭೂಮಿಯಲ್ಲಿ ತೊಡಗಿಕೊಂಡವರು ಕಡಿಮೆ. ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು ಈಗಲೂ ರಂಗಭೂಮಿಯ ನಂಟು ಹೊಂದಿದ್ದಾರೆ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಈ ವಿಚಾರದಲ್ಲಿ ಅನೇಕರಿಗೆ ಮಾದರಿ. ಅವರು ಬಾಲಿವುಡ್​ನಲ್ಲಿ ಮಿಂಚುತ್ತಿದ್ದರೂ ರಂಗಭೂಮಿ ಮರೆತಿಲ್ಲ.

ಮುಂಬೈನ ಬಾಂದ್ರಾದಲ್ಲಿರುವ ಬಾಲಗಂಧರ್ವ ಥಿಯೇಟರ್​ನಲ್ಲಿ ಶುಕ್ರವಾರ ‘ಮೈ ನೇಮ್ ಈಸ್ ಜಾನ್’ ನಾಟಕದ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ನಾಟಕದ ಮೊದಲ ಶೋ ಇದು. ಖ್ಯಾತ ನರ್ತಕಿ ಮತ್ತು ಗಾಯಕಿ ಗೌಹರ್ ಜಾನ್ ಅವರ ಜೀವನಾಧಾರಿತ ಈ ನಾಟಕದಲ್ಲಿ ಅರ್ಪಿತಾ ಚಟರ್ಜಿ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಖ್ಯಾತ ನಟ ಅನುಪಮ್ ಖೇರ್, ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, ನಟಿ ಜೂಹಿ ಬಬ್ಬರ್ ಸೇರಿದಂತೆ ಹಲವು ಗಣ್ಯರು ನಾಟಕ ವೀಕ್ಷಿಸಲು ಹಾಜರಿದ್ದರು.

ಅನುಪಮ್ ಖೇರ್ ಅವರು ಈ ನಾಟಕವನ್ನು ಮತ್ತು ಅರ್ಪಿತಾ ಚಟರ್ಜಿ ಅವರ ನಟನೆಯನ್ನು ಶ್ಲಾಘಿಸಿದರು. ‘ಓರ್ವ ಕಲಾವಿದನಾಗಿ ನಾನು ಈ ನಾಟಕ ನೋಡಿ ಸಾಕಷ್ಟು ಕಲಿತಿದ್ದೇನೆ’ ಎಂದು ಅನುಪಮ್ ಖೇರ್ ಹೇಳಿದ್ದಾರೆ.

ನಾಟಕದ ಬಗ್ಗೆ ಬರುಣ್ ದಾಸ್ ಹೇಳಿದ್ದೇನು?

ನಾಟಕದ ಬರಹಗಾರ ಮತ್ತು ಟಿವಿ9 ನೆಟ್‌ವರ್ಕ್‌ನ ಸಿಇಒ ಮತ್ತು ಎಂಡಿ ಬರುಣ್ ದಾಸ್ ನಾಟಕ ನೋಡಿದ ಬಳಿಕ ಮಾತನಾಡಿದ್ದಾರೆ. ‘ನಾವು ಬಿಸ್ನೆಸ್ ಮಾಡುವವರು. ನಾವು ಲಾಭ ಮತ್ತು ನಷ್ಟವನ್ನು ನೋಡುತ್ತೇವೆ. ಆದರೆ ನಾನು ಇಂತಹ ಕಾರ್ಯಕ್ರಮಗಳಿಗೆ ಬಂದಾಗ, ಸಮಾಜದಲ್ಲಿ ಕೆಲವು ವಿಷಯಗಳಲ್ಲಿ ನಾವು ಕಡಿಮೆ ಕೊಡುಗೆ ನೀಡುತ್ತಿದ್ದೇವೆ ಎಂದು ನನಗೆ ಅನಿಸುತ್ತದೆ’ ಎಂದರು ಅವರು.

ಇದನ್ನೂ ಓದಿ: ಅನುಪಮ್ ಖೇರ್ ಕಚೇರಿಯನ್ನು ಲೂಟಿ ಮಾಡಿದ ಕಳ್ಳರು; ಸಿಕ್ಕಿದ್ದೇನು?

‘ಮೊದಲ ದಿನದಿಂದಲೂ ನಾನು ಈ ನಾಟಕದ ಭಾಗವಾಗಿದ್ದೇನೆ. ಸ್ಕ್ರಿಪ್ಟ್‌ನಲ್ಲಿ ಬದಲಾವಣೆ ಮಾಡುವಂತೆ ನಿರ್ದೇಶಕರಿಗೆ ಹಲವು ಬಾರಿ ಸೂಚಿಸಿದ್ದೇನೆ. ಈ ನಾಟಕದಲ್ಲಿ ಅರ್ಪಿತಾ ಚಟರ್ಜಿಯವರ ಕೊಡುಗೆ ನಿಜಕ್ಕೂ ಗಮನಾರ್ಹ. ಅರ್ಪಿತಾ ಮಾತ್ರವಲ್ಲ, ಈ ನಾಟಕದ ನಿರ್ದೇಶಕರಿಂದ ಹಿಡಿದು ಹಿನ್ನೆಲೆ ಕಲಾವಿದರವರೆಗೆ ಎಲ್ಲರೂ ತುಂಬಾ ಶ್ರಮಪಟ್ಟಿದ್ದಾರೆ. ಈ ನಾಟಕವನ್ನು ನೋಡುವುದು ನಿಜಕ್ಕೂ ಪ್ರೇಕ್ಷಕರಿಗೆ ಅದ್ಭುತ ಅನುಭವವಾಗುತ್ತದೆ’ ಎಂದರು ಬರುಣ್ ದಾಸ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.