
‘ಲೋಕಃ: ಚಾಪ್ಟರ್ 1-ಚಂದ್ರ’ (Lokah) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಬಜೆಟ್ 30-40 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ ಎನ್ನಲಾಗುತ್ತಿದೆ. ಸಿನಿಮಾದ ಕಲೆಕ್ಷನ್ ಇದರ ಮೂರ್ನಾಲ್ಕು ಪಟ್ಟು ಹೆಚ್ಚಿದೆ. ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ 133 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್ ಆಗಿ 25 ದಿನಗಳು ಕಳೆದಿವೆ. ಈಗ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ನಿರ್ಮಾಪಕರು ಅಪ್ಡೇಟ್ ಕೊಟ್ಟಿದ್ದಾರೆ.
ಕಲ್ಯಾಣಿ ಪ್ರಿಯದರ್ಶನ್ ಅವರು ‘ಲೋಕಃ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ನಸ್ಲೇನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ಸೌಬಿನ್ ಶಾಹಿರ್ ಸೇರಿದಂತೆ ಅನೇಕರು ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಕೇರಳ ಮಾತ್ರವಲ್ಲದೆ, ಕರ್ನಾಟಕದಲ್ಲೂ ಒಳ್ಳೆಯ ಗಳಿಕೆ ಮಾಡಿದೆ.
‘ಲೋಕಃ’ ಸಿನಿಮಾ ಈವರೆಗೆ 270 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ಈ ಚಿತ್ರ ಮೋಹನ್ ಲಾಲ್ ಅವರ ‘ಲುಸಿಫರ್ 2’ ಚಿತ್ರದ ದಾಖಲೆಯನ್ನು ಮುರಿದಿದೆ. 25ನೇ ದಿನ ಸಿನಿಮಾ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೀಗಾಗಿ, ಸದ್ಯಕ್ಕಂತೂ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗೋದಿಲ್ಲ ಎಂದು ದುಲ್ಕರ್ ಮಾಹಿತಿ ನೀಡಿದ್ದಾಗಿ ವರದಿ ಆಗಿದೆ.
‘ಲೋಕಃ ಸಿನಿಮಾ ಸದ್ಯಕ್ಕಂತೂ ಒಟಿಟಿಗೆ ಬರಲ್ಲ. ಫೇಕ್ ಸುದ್ದಿಗಳನ್ನು ನಿರ್ಲಕ್ಷಿಸಿ. ಅಧಿಕೃತ ಘೋಷಣೆಗೆ ಕಾಯಿರಿ’ ಎಂದು ದುಲ್ಕರ್ ಅವರು ಮಾಹಿತಿ ನೀಡಿದ್ದಾರೆ. ದಸರಾ ಹಬ್ಬ ಆರಂಭ ಆಗಿದೆ. ಈ ವೇಳೆ ಹಲವು ರಜೆಗಳು ಸಿಗುತ್ತಿವೆ. ಈ ಸಮಯದಲ್ಲಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಲೋಕಃ’ ಸಿನಿಮಾ ಭರ್ಜರಿ ಕಲೆಕ್ಷನ್, ಲಾಭವನ್ನು ಹಂಚಲು ಮುಂದಾದ ನಿರ್ಮಾಪಕ
‘ಲೋಕಃ’ ಚಿತ್ರವನ್ನು ದುಲ್ಕರ್ ಸಲ್ಮಾನ್ ನಿರ್ಮಿಸಿದ್ದಾರೆ. ಈ ಸರಣಿಯಲ್ಲಿ ಒಟ್ಟೂ ಐದು ಚಿತ್ರಗಳು ಬರಲಿವೆಯಂತೆ. ಈ ಸಿನಿಮಾದ ಕಥೆ ಬೆಂಗಳೂರಿನಲ್ಲಿ ಸಾಗುತ್ತದೆ. ಈ ಸಿನಿಮಾದಿಂದ ಬೆಂಗಳೂರಿನವರಿಗೆ ಅವಮಾನ ಆಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆ ಬಳಿಕ ದೃಶ್ಯಕ್ಕೆ ಕತ್ತರಿ ಹಾಕಿ, ಕನ್ನಡಿಗರ ಬಳಿ ಕ್ಷಮೆ ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.