AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದಲಾಗೋದೇ ಇಲ್ಲ ಅಕ್ಷಯ್ ಕುಮಾರ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್

Akshay Kumar: ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರ ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣದಿರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ‘ಜಾಲಿ ಎಲ್​ಎಲ್​ಬಿ 3’ ಚಿತ್ರದ ಕಡಿಮೆ ಗಳಿಕೆ ಇದಕ್ಕೆ ಉದಾಹರಣೆ. ಭವಿಷ್ಯದ ಚಿತ್ರಗಳಲ್ಲಿ ಯಶಸ್ಸು ಕಾಣಲು ಅವರು ಹೊಸ ತಂತ್ರಗಳನ್ನು ಅನುಸರಿಸಬೇಕಾಗಿದೆ.

ಬದಲಾಗೋದೇ ಇಲ್ಲ ಅಕ್ಷಯ್ ಕುಮಾರ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್
ಅಕ್ಷಯ್ ಕುಮಾರ್
ರಾಜೇಶ್ ದುಗ್ಗುಮನೆ
|

Updated on: Sep 20, 2025 | 7:30 AM

Share

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅದೃಷ್ಟ ಏಕೋ ಇತ್ತೀಚೆಗೆ ಕೈ ಕೊಟ್ಟಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ತರಿಸುತ್ತಿದೆ. ಅವರು ಕೂಡ ಈ ವಿಚಾರದಿಂದ ಡಿಸ್ಟರ್ಬ್ ಆಗುತ್ತಿದ್ದಾರೆ. ಈ ವರ್ಷ ಅವರ ಐದನೇ ಸಿನಿಮಾ ರಿಲೀಸ್ ಆಗಿದೆ. ಆದರೆ, ಚಿತ್ರ ಮಾತ್ರ ಸಾಧಾರಣ ಕಲೆಕ್ಷನ್ ಮಾಡಿದೆ. ಇದರಿಂದ ಅಕ್ಷಯ್ ಕುಮಾರ್ ಅದೃಷ್ಟ ಬದಲಾಗುವುದೇ ಇಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.

ಅಕ್ಷಯ್ ಕುಮಾರ್ ಅವರು 2021ರಲ್ಲಿ ರಿಲೀಸ್ ಆದ ‘ಸೂರ್ಯವಂಶಿ’ ಸಿನಿಮಾ ಬಳಿಕ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಕಾಣಲಿಲ್ಲ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈ ಕಾರಣದಿಂದಲೇ ಅವರು ಒಪ್ಪಿಕೊಂಡ ಸಿನಿಮಾಗಳ ಶೂಟ್ ಪೂರ್ಣಗೊಳಿಸುತ್ತಿದ್ದಾರೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ಅವರು ಯೋಚಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ನಟನೆಯ ‘ಜಾಲಿ ಎಲ್​ಎಲ್​ಬಿ 3’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ ನಟಿಸಿದ್ದಾರೆ.

ಅಕ್ಷಯ್ ಕುಮಾರ್ ಸಿನಿಮಾಗಳ ಮೊದಲ ದಿನವೇ 30 ಕೋಟಿ ರೂಪಾಯಿ ಗಳಿಕೆ ಮಾಡಿದ ಉದಾಹರಣೆ ಇದೆ. ಆದರೆ, ‘ಜಾಲಿ ಎಲ್​ಎಲ್​ಬಿ 3’ ಸಿನಿಮಾ 12 ಕೋಟಿ ರೂಪಾಯಿ ಗಳಿಕೆ ಮಾಡಿದೆ. 12 ಕೋಟಿ ರೂಪಾಯಿ ಸಣ್ಣ ಮೊತ್ತವೇನೂ ಅಲ್ಲ. ಆದರೆ, ಅಕ್ಷಯ್ ಕುಮಾರ್​ಗೆ ಇರೋ ಸ್ಟಾರ್​ಡಂಗೆ ಈ ಕಲೆಕ್ಷನ್ ಏನೂ ಅಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿಯಲ್ಲಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ
Image
‘ಕಲ್ಕಿ’ ಚಿತ್ರದಿಂದ ಹೊರಬಂದು ಶಾರುಖ್ ಹೇಳಿಕೊಟ್ಟ ಪಾಠ ನೆನೆದ ದೀಪಿಕಾ
Image
ಬಯಸಿ ಬಂದ ಪ್ರೀತಿಯನ್ನು ಕಾಲಿನಿಂದ ಒದ್ದ ಭೂಮಿಕಾ; ಗೌತಮ್ ಮತ್ತೆ ಏಕಾಂಗಿ
Image
ಸೌಂದರ್ಯಾ ಜೊತೆ ವಿಮಾನದಲ್ಲಿ ಕನ್ನಡದ ಈ ನಟಿಯೂ ಇರಬೇಕಿತ್ತು
Image
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಇದನ್ನೂ ಓದಿ: ‘ಒಳ್ಳೆಯ ಕಥೆ ಇದ್ರೆ ಹೇಳಿ ಸಿನಿಮಾ ಮಾಡೋಣ’; ರಾಜ್​ ಬಿ ಶೆಟ್ಟಿಗೆ ಅಕ್ಷಯ್ ಕುಮಾರ್ ಬುಲಾವ್

ಅಕ್ಷಯ್ ಕುಮಾರ್ ಬಳಿ ಸದ್ಯ ‘ಭೂತ್ ಬಂಗ್ಲಾ’ ಹಾಗೂ ‘ಹೈವಾನ್’ ಸಿನಿಮಾ ಇದೆ. ಎರಡೂ ಚಿತ್ರಗಳ ಶೂಟ್ ನಡೆಯುತ್ತಿದ್ದು, 2026ರಲ್ಲಿ ರಿಲೀಸ್ ಆಗಲಿವೆ. ಈ ವರ್ಷ ಅಕ್ಷಯ್ ನಟನೆಯ ‘ಸ್ಕೈ ಫೋರ್ಸ್’, ‘ಕೇಸರಿ ಚಾಪ್ಟರ್ 2’, ‘ಹೌಸ್​ಫುಲ್ 5’, ‘ಕಣ್ಣಪ್ಪ’ (ಅತಿಥಿ ಪಾತ್ರ) ರಿಲೀಸ್ ಆಗಿವೆ. ಕನ್ನಡದ ರಾಜ್ ಬಿ ಶೆಟ್ಟಿ ಅವರನ್ನು ಅಕ್ಷಯ್ ಇತ್ತೀಚೆಗೆ ಭೇಟಿ ಮಾಡಿದ್ದರು. ಈ ವೇಳೆ ಹೊಸ ಕಥೆ ಮಾಡಲು ರಾಜ್​ಗೆ ಅಕ್ಷಯ್ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ