‘ಒಳ್ಳೆಯ ಕಥೆ ಇದ್ರೆ ಹೇಳಿ ಸಿನಿಮಾ ಮಾಡೋಣ’; ರಾಜ್ ಬಿ ಶೆಟ್ಟಿಗೆ ಅಕ್ಷಯ್ ಕುಮಾರ್ ಬುಲಾವ್
ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಚಿತ್ರ ಭಾರೀ ಯಶಸ್ಸು ಕಂಡಿದೆ. ಅವರು ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಸಹಯೋಗದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಚಿತ್ರದ ಬಳಿಕ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈಗ ರಾಜ್ ಬಿ ಶೆಟ್ಟಿ ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ರಾಜ್ ಹಾಗೂ ಅಕ್ಷಯ್ ಭೇಟಿಯ ಫೋಟೋಗಳು ವೈರಲ್ ಆಗಿವೆ.
‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಮೆಚ್ಚುಗೆ ಪಡೆದಿದೆ. ಈ ಚಿತ್ರ ಹಿಂದಿಗೂ ರಿಮೇಕ್ ಆಗುತ್ತಿದ್ದು, ಇದರ ಹಕ್ಕು ಮಾರಾಟ ಆಗಿದೆ. ಈ ಮೊದಲು ‘ಸು ಫ್ರಮ್ ಸೋ’ ಸಿನಿಮಾ ಗೆಲುವಿನ ಬಳಿಕ ಸಿನಿಮಾ ನಿರ್ದೇಶಕ ಜೆಪಿ ಅವರು ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ಭೇಟಿ ಮಾಡಿದ್ದರು. ಈಗ ರಾಜ್ ಅವರು ಅಕ್ಷಯ್ ಕುಮಾರ್ನ ಭೇಟಿ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಅವರು ‘ಹೈವಾನ್’ ಹೆಸರಿನ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದ ಕೆವಿಎನ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಶೂಟ್ ಊಟಿಯಲ್ಲಿ ನಡೆಯುತ್ತಿದೆ. ಚಿತ್ರದ ಸೆಟ್ಟಲ್ಲಿ ರಾಜ್ ಬಿ ಶೆಟ್ಟಿ ಅವರು ಅಕ್ಷಯ್ನ ಭೇಟಿ ಆಗಿದ್ದಾರೆ.
‘ಸು ಫ್ರಮ್ ಸೋ’ ನೋಡಿ ಅಕ್ಷಯ್ ಕುಮಾರ್ ಕೊಂಡಾಡಿದ್ದಾರೆ. ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ ಎಂದು ರಾಜ್ ಬಿ. ರಾಜ್ ಬಿ ಶೆಟ್ಟಿ ಅವರನ್ನು ಅಕ್ಷಯ್ ಕುಮಾರ್ ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕನ್ನಡಿಗರ ಪಾಲಿಗೆ ವಿಶೇಷ ಹೆಮ್ಮೆ ತಂದಿದೆ.
ಇದನ್ನೂ ಓದಿ: ‘ಗುಟ್ಕಾ ತಿನ್ನೋದು ಕೆಟ್ಟದ್ದು’: ಜನರಿಗೆ ಸಂದೇಶ ನೀಡಿದ ನಟ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಸ್ಟಾರ್ ಹೀರೋ. ಹಲವು ಸಿನಿಮಾ ಕೆಲಸಗಳನ್ನು ಅವರು ಒಟ್ಟಾಗಿ ಮಾಡುತ್ತಾರೆ. ಈಗಾಗಲೇ ರಾಜ್ ಅವರು ಸ್ಟಾರ್ಗಳ ಜೊತೆ ಸಿನಿಮಾ ಮಾಡೋದಿಲ್ಲ ಎಂದು ಹೇಳಿಯಾಗಿದೆ. ಅವರ ಕಾಲ್ಶೀಟ್ಗಾಗಿ ಒದ್ದಾಡೋದು ಅವರಿಗೆ ಇಷ್ಟವಿಲ್ಲವಂತೆ. ಹೀಗಾಗಿ, ಅವರು ಅಕ್ಷಯ್ ಜೊತೆ ಸಿನಿಮಾ ಮಾಡೋದು ಅನುಮಾನ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:31 pm, Sat, 13 September 25








