‘ಕಲ್ಕಿ 2898 ಎಡಿ’ ಚಿತ್ರದಿಂದ ಹೊರಬಂದು ಶಾರುಖ್ ಹೇಳಿಕೊಟ್ಟ ಪಾಠ ನೆನೆದ ದೀಪಿಕಾ
ದೀಪಿಕಾ ಪಡುಕೋಣೆ ಅವರು ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಚಿತ್ರದ ಸೀಕ್ವೆಲ್ ನಿಂದ ಹೊರಬಂದಿದ್ದಾರೆ. ತಾಯ್ತನದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಅವರು ಹೊಸ ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಶೂಟ ಆರಂಭಿಸಿದ್ದಾರೆ. ಅವರಿಂದ ಪಡೆದ ಸಲಹೆಯನ್ನು ಅವರು ನೆನಪಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸೀಕ್ವೆಲ್ನಿಂದ ಹೊರ ಬಂದಿದ್ದಾರೆ. ಇದು ಚಿತ್ರತಂಡದ ಚಿಂತೆಗೆ ಕಾರಣ ಆಗಿದೆ. ಮುಂದೇನು ಎನ್ನುವ ಪ್ರಶ್ನೆ ಅವರನ್ನು ಬಹುವಾಗಿ ಕಾಡುತ್ತಿದೆ. ಇಷ್ಟು ದಿನಗಳ ಕಾಲ ದೀಪಿಕಾ ಅವರು ಈ ವಿಚಾರದಲ್ಲಿ ಮೌನ ತಾಳಿದ್ದರು. ಈಗ ಈ ಬಗ್ಗೆ ಅವರು ಮೌನ ಮುರಿದಿದ್ದಾರೆ. ಶಾರುಖ್ ಖಾನ್ ಹೇಳಿಕೊಟ್ಟ ಪಾಠವನ್ನು ಅವರು ನೆನಪಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರಿಗೆ ಮಗು ಜನಿಸಿದೆ. ಆ ಬಳಿಕವೂ ಅವರು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ಅವರ ಷರತ್ತುಗಳ ಪಟ್ಟಿ ದೊಡ್ಡದಿದೆ. ಮಗುವಿಗೆ ಹೆಚ್ಚು ಸಮಯ ನೀಡಬೇಕಾದ ಅನಿವಾರ್ಯತೆ ಇರುವುದರಿಂದ ದೀಪಿಕಾ ಅವರು ದಿನದಲ್ಲಿ 7-8 ಗಂಟೆ ಮಾತ್ರ ಶೂಟ್ ಮಾಡೋದಾಗಿ ಹೇಳಿದ್ದಾರೆ. ಜೊತೆಗೆ ಹೆಚ್ಚಿನ ಸಂಭಾವನೆ ಕೇಳುತ್ತಿದ್ದಾರೆ. ಈ ಷರತ್ತನ್ನು ಅಲ್ಲು ಅರ್ಜುನ್-ಅಟ್ಲಿ ಸಿನಿಮಾ ತಂಡ ಒಪ್ಪಿಕೊಂಡಿದೆ. ಜೊತೆಗೆ ಶಾರುಖ್ ಖಾನ್ ನಟನೆಯ ‘ಕಿಂಗ್’ನ ಭಾಗ ಕೂಡ ಆಗಿದ್ದಾರೆ. ಈ ಚಿತ್ರದ ಮೊದಲ ದಿನದ ಶೂಟ್ನಲ್ಲಿ ದೀಪಿಕಾ ಭಾಗಿ ಆಗಿದ್ದಾರೆ.
ಶಾರುಖ್ ಖಾನ್ ಜೊತೆ ಕೈ ಹಿಡಿದು ಫೋಟೋ ಪೋಸ್ಟ್ ಮಾಡಿದ್ದಾರೆ ದೀಪಿಕಾ. ಈ ವೇಳೆ ಅವರು ಒಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ‘ಒಂದು ಸಿನಿಮಾ ಮಾಡುವ ಅನುಭವ ಮತ್ತು ನೀವು ಅದನ್ನು ಯಾರ ಜೊತೆ ಮಾಡುತ್ತಿದ್ದೀರಿ ಎಂಬುದು ಅದರ ಯಶಸ್ಸಿಗಿಂತ ಹೆಚ್ಚು ಮುಖ್ಯ. ಸುಮಾರು 18 ವರ್ಷಗಳ ಹಿಂದೆ ಓಂ ಶಾಂತಿ ಓಂ ಚಿತ್ರೀಕರಣದ ಸಮಯದಲ್ಲಿ ಅವರು (ಶಾರುಖ್ ಖಾನ್) ನನಗೆ ಕಲಿಸಿದ ಮೊದಲ ಪಾಠ ಇದು. ಅಂದಿನಿಂದ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೂ ಆ ಕಲಿಕೆಯನ್ನು ಅನ್ವಯಿಸಿದ್ದೇನೆ. ಆ ಕಾರಣಕ್ಕೇ ಇರಬೇಕು, ನಾವು ಆರನೇ ಚಿತ್ರವನ್ನು ಒಟ್ಟಾಗಿ ಮಾಡುತ್ತಿದ್ದೇವೆ ಅನಿಸುತ್ತದೆ’ ಎಂದು ದೀಪಿಕಾ ಹೇಳಿದ್ದಾರೆ.
ಇದನ್ನೂ ಓದಿ: ‘ಏನಾಗಿದೆ ಅದನ್ನು ಬದಲಿಸಲು ಸಾಧ್ಯವಿಲ್ಲ’; ದೀಪಿಕಾ ಬಗ್ಗೆ ನಾಗ್ ಅಶ್ವಿನ್ ಬೇಸರ?
ಶಾರುಖ್ ಖಾನ್ ಹಾಗೂ ದೀಪಿಕಾ ಅವರದ್ದು ಯಶಸ್ವಿ ಜೋಡಿ ಎನಿಸಿಕೊಂಡಿದೆ. ದೀಪಿಕಾ ಅವರ ಹಿಂದಿಯ ಮೊದಲ ಸಿನಿಮಾ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಶಾರುಖ್ಗೆ ಜೊತೆಯಾಗಿದ್ದರು. ಆ ಬಳಿಕ ಅವರು ಹಿಂದಿರುಗಿ ನೋಡಿಯೇ ಇಲ್ಲ. ‘ಚೆನ್ನೈ ಎಕ್ಸ್ಪ್ರೆಸ್ಸ್’ ಜವಾನ್ ಸೇರಿದಂತೆ ಈವರೆಗೆ ಒಟ್ಟೂ ಐದು ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








