ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ? ಪಕ್ಕಾ ಟ್ರೆಡಿಷನಲ್
ಅದಾ ಶರ್ಮಾ ಅವರ ನಿಜವಾದ ಹೆಸರು ಅನೇಕರಿಗೆ ತಿಳಿದಿದೆ. 'ರಣ ವಿಕ್ರಮ್' ಮತ್ತು 'ದಿ ಕೇರಳ ಸ್ಟೋರಿ' ಚಿತ್ರಗಳ ಮೂಲಕ ಖ್ಯಾತಿ ಪಡೆದರು. ತಮ್ಮ ಸಾಂಪ್ರದಾಯಿಕ ಹೆಸರಿನ ಬದಲು 'ಅದಾ ಶರ್ಮಾ' ಎಂಬ ಹೆಸರಿನಲ್ಲಿ ಚಿತ್ರರಂಗದಲ್ಲಿ ಪ್ರವೇಶಿಸಿದರು. ಸುಶಾಂತ್ ಸಿಂಗ್ ರಜಪೂತ್ ಅವರ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಕಾರಣ ಅವರು ಸುದ್ದಿಯಲ್ಲಿದ್ದರು.

ಅದಾ ಶರ್ಮಾ (Adah Sharma) ಅವರು ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ‘ರಣ ವಿಕ್ರಮ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಮೆಚ್ಚುಗೆ ಪಡೆಯಿತು. ಇದರಲ್ಲಿ ಪೊಲೀಸ್ ಆಗಬೇಕು ಎಂದು ಕನಸು ಕಾಣುವ ವ್ಯಕ್ತಿಯ ಬಗ್ಗೆ ಕಥೆ ಇತ್ತು. ಈ ಸಿನಿಮಾ ಮೂಲಕ ಅದಾ ಅವರು ಕನ್ನಡಕ್ಕೆ ಪರಿಚಯ ಆದರು. ಅಂದಹಾಗೆ ಅದಾ ಅವರ ನಿಜವಾದ ಹೆಸರು ಅದಾ ಅಲ್ಲವೇ ಅಲ್ಲ. ಅವರ ನಿಜವಾದ ಹೆಸರು ತುಂಬಾನೇ ಟ್ರೆಡಿಷನಲ್ ಆಗಿತ್ತು. ಆ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದರು.
‘ದಿ ಕೇರಳ ಸ್ಟೋರಿ’ ಚಿತ್ರದ ಮೂಲಕ ಅದಾ ಮತ್ತಷ್ಟು ಜನಪ್ರಿಯತೆ ಪಡೆದರು. ಹಿಂದೂ ಸಂಪ್ರದಾಯದ ಕುಟುಂಬದಿಂದ ಬಂದ ಹೆಣ್ಣು ಮಗು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಐಸಿಸ್ ಸೇರುವ ಕಥೆಯನ್ನು ಈ ಚಿತ್ರ ಹೊಂದಿತ್ತು. ಈ ಚಿತ್ರ ವಿವಾದ ಕೂಡ ಸೃಷ್ಟಿಸಿತ್ತು. ಈ ಚಿತ್ರದ ಬಳಿಕ ಅವರಿಗೆ ಹಲವು ಆಫರ್ಗಳು ಬಂದವು. ಈಗ ಅವರ ನಿಜವಾದ ಹೆಸರ ಬಗ್ಗೆ ಈಗ ಮತ್ತೊಮ್ಮೆ ಚರ್ಚೆ ಆಗಿದೆ.
‘ನನ್ನ ನಿಜವಾದ ಹೆಸರು ಚಾಮುಂಡೇಶ್ವರಿ ಐಯರ್’ ಎಂದು ಅದಾ ಹೇಳಿದ್ದಾರೆ. ಈ ರೀತಿಯ ಹೆಸರು ಇಟ್ಟುಕೊಂಡು ಚಿತ್ರರಂಗಕ್ಕೆ ಸೆಟ್ ಆಗೋದಿಲ್ಲ. ಅನೇಕರು ಈ ಹೆಸರನ್ನು ಸರಿಯಾಗ ಉಚ್ಚರಿಸಲು ಸಾಧ್ಯವಾಗದೇ ಇರಬಹುದು. ಈ ಕಾರಣಕ್ಕೆ ಅದಾ ಎಂದು ಹೆಸರು ಬದಲಿಸಿಕೊಂಡರು. ಇದು ಸಖತ್ ಟ್ರೆಂಡಿ ಆಗಿದೆ.
ಅದಾ ಶರ್ಮಾ ಅವರಿಗೆ ಹೆಸರು ತಂದುಕೊಟ್ಟಿದ್ದು 2008ರ ‘1920’ ಸಿನಿಮಾ. ರಾಜ್ನೀಶ್ ದುಗ್ಗಲ್ ಈ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ‘ಕಮಾಂಡೋ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದರು. ಅವರು ‘ಹಸೀ ತೋ ಪಸೀ’ ಮೊದಲಾದ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: ಹೊಳೆಯುವ ತ್ವಚೆ ಬೇಕೆ? ನಟಿ ಅದಾ ಶರ್ಮಾ ಸಲಹೆ ಫಾಲೋ ಮಾಡಿ
ಅದಾ ಶರ್ಮಾ ಅವರು ಸುದ್ದಿ ಆಗೋದಕ್ಕೆ ಮತ್ತೊಂದು ಕಾರಣ ಇದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡರು. ಅದೇ ಫ್ಲಾಟ್ನಲ್ಲಿ ಅದಾ ಶರ್ಮಾ ವಾಸಿಸುತ್ತಿದ್ದಾರೆ. ಈ ವಿಚಾರಕ್ಕೆ ಅವರು ಸಾಕಷ್ಟು ಸುದ್ದಿ ಆಗಿದ್ದರು. ತುಂಬಾನೇ ಇಷ್ಟಪಟ್ಟು ಅವರು ಫ್ಲಾಟ್ನಲ್ಲಿ ವಾಸವಾಗಿದ್ದಾರೆ. ಈ ಫ್ಲಾಟ್ನ ಯಾರೂ ಬಾಡಿಗೆ ಪಡೆಯಲು ಮುಂದೆ ಬಂದಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







