ಸಿನಿಮಾದಲ್ಲಿ ತೃತೀಯಲಿಂಗಿಗೆ ಮುಖ್ಯ ಪಾತ್ರ ನೀಡಿದ ನಿರ್ಮಾಪಕಿ ಏಕ್ತಾ ಕಪೂರ್​

‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಚಿತ್ರದಲ್ಲಿ ತೃತೀಯಲಿಂಗಿ ಬೋನಿತಾ ರಾಜ್​ಪುರೋಹಿತ್​ ಅವರು ಕುಲು ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಬಾಲಿವುಡ್​ ಇತಿಹಾಸದಲ್ಲಿ ಇದು ಮಹತ್ವದ ಸಂಗತಿ. ಬೋನಿತಾ ಅವರಿಗೆ ಈ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ವಿವರಿಸುವಂತಹ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಸಿನಿಮಾದಲ್ಲಿ ತೃತೀಯಲಿಂಗಿಗೆ ಮುಖ್ಯ ಪಾತ್ರ ನೀಡಿದ ನಿರ್ಮಾಪಕಿ ಏಕ್ತಾ ಕಪೂರ್​
ಬೋನಿತಾ ರಾಜ್​ಪುರೋಹಿತ್​

Updated on: Apr 07, 2024 | 3:34 PM

ನಿರ್ಮಾಪಕಿ ಏಕ್ತಾ ಕಪೂರ್​ (Ekta Kapoor) ಅವರು ‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಏಪ್ರಿಲ್​ 19ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಕಿಂಗ್​ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಶೇಷ ಏನೆಂದರೆ, ‘ಲವ್​ ಸೆ*ಕ್ಸ್​ ಔರ್​ ದೋಖಾ 2’ (Love Sex Aur Dhokha 2) ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿರುವುದು ಓರ್ವ ತೃತೀಯಲಿಂಗಿ! ಹೌದು, ಬೋನಿತಾ ರಾಜ್​​​ಪುರೋಹಿತ್​ (Bonita Rajpurohit) ಎನ್ನುವ ತೃತೀಯಲಿಂಗಿಗೆ ಅವಕಾಶ ನೀಡಲಾಗಿದೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇದು ಮಹತ್ವದ ಸಂಗತಿ ಎನಿಸಿಕೊಂಡಿದೆ.

2010ರಲ್ಲಿ ಬಿಡುಗಡೆ ಆಗಿದ್ದ ‘ಲವ್​ ಸೆ*ಕ್ಸ್​ ಔರ್​ ದೋಖಾ’ ಸಿನಿಮಾದಲ್ಲೂ ನಿರ್ಮಾಪಕಿ ಏಕ್ತಾ ಕಪೂರ್​ ಅವರು ಅನೇಕ ಹೊಸಬರಿಗೆ ಅವಕಾಶ ನೀಡಿದ್ದರು. ಈಗ ಆ ಸಿನಿಮಾದ ಪಾರ್ಟ್​ 2 ಬರುತ್ತದೆ. ಇದರಲ್ಲಿ ಬೋನಿತಾ ರಾಜ್​ಪುರೋಹಿತ್​ ಅವರಿಗೆ ಅವಕಾಶ ಸಿಕ್ಕಿದೆ. ತೃತೀಯಲಿಂಗಿಯನ್ನು ಮುಖ್ಯ ಪಾತ್ರದಲ್ಲಿ ಲಾಂಚ್​ ಮಾಡುತ್ತಿರುವ ಮೊದಲ ನಿರ್ಮಾಪಕಿ ಎಂಬ ಖ್ಯಾತಿಗೆ ಏಕ್ತಾ ಕಪೂರ್​ ಪಾತ್ರರಾಗುತ್ತಿದ್ದಾರೆ.

‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಸಿನಿಮಾದಲ್ಲಿ ಬೋನಿತಾ ರಾಜ್​ಪುರೋಹಿತ್​ ಅವರು ಕುಲು ಎಂಬ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ವಿವರಿಸುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ನಿರ್ದೇಶಕ ದಿಬಾಕರ್​ ಬ್ಯಾನರ್ಜಿ ಅವರು ಬೋನಿತಾಗೆ ತರಬೇತಿ ನೀಡಿದ್ದಾರೆ. ಈವರೆಗೂ ಸಿನಿಮಾ ಮತ್ತು ಕಿರುತೆರೆ ಮೂಲಕ 250ಕ್ಕೂ ಅಧಿಕ ಹೊಸ ಕಲಾವಿದರನ್ನು ಏಕ್ತಾ ಕಪೂರ್​ ಲಾಂಚ್​ ಮಾಡಿದ್ದಾರೆ. ಈಗ ತೃತೀಯಲಿಂಗಿಗೆ ಅವಕಾಶ ನೀಡಿ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಲಿಂಗಪರಿವರ್ತನೆಗೆಂದು ಆಸ್ಪತ್ರೆಗೆ ಹೋದಾಗ ಗೊತ್ತಾಯ್ತು ತೃತೀಯಲಿಂಗಿ 5 ತಿಂಗಳ ಗರ್ಭಿಣಿ

‘ನನ್ನ ಬಗ್ಗೆ ನಾನು ತಿಳಿದುಕೊಂಡಿದ್ದೇ ಸಿನಿಮಾಗಳ ಮೂಲಕ. ನನ್ನ ರೀತಿಯ ವ್ಯಕ್ತಿಗಳನ್ನು ಸಿನಿಮಾದಲ್ಲಿ ನೋಡಿದಾಗ ನನ್ನ ಕಥೆ ಕೂಡ ಮುಖ್ಯ ಎನಿಸಿತು. ನನ್ನ ರೀತಿಯ ಮಹಿಳೆಯನ್ನು ತೆರೆಮೇಲೆ ನೋಡಿ ನನಗೆ ಸ್ಫೂರ್ತಿ ಬಂತು. ಚಿಕ್ಕ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ನನ್ನ ಸಂಬಳ 10ರಿಂದ 15 ಸಾವಿರ ರೂಪಾಯಿ ಇತ್ತು. ಜೀವನ ಸಾಗಿಸುವುದು ಕಷ್ಟ ಆಗಿತ್ತು. ನಟನೆಯ ಅವಕಾಶ ಸಿಗುತ್ತದೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ಈಗ ನನಗೆ ಬಾಲಿವುಡ್​ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುವ ಅವಕಾಶ ಸಿಕ್ಕಿದೆ’ ಎಂದು ‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಸಿನಿಮಾದ ಕಲಾವಿದೆ ಬೋನಿತಾ ರಾಜ್​ಪುರೋಹಿತ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us