ಬಾಲಿವುಡ್ ಥಳುಕು-ಬಳುಕಿನ ಹಿಂದಿನ ಕರಾಳತೆ ಬಿಚ್ಚಿಡುವ ಸಿನಿಮಾ

|

Updated on: Oct 17, 2024 | 4:41 PM

ಬಾಲಿವುಡ್​ನ ರಿಯಲಿಸ್ಟಿಕ್ ಸಿನಿಮಾ ನಿರ್ದೇಶಕ ಮಧುರ್ ಬಂಡಾರ್ಕರ್ ಈಗ ಬಾಲಿವುಡ್​ ಮೇಲೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹೊರಗಿನಿಂದ ಕಾಣುವ ಬಾಲಿವುಡ್ ಸ್ಟಾರ್ ನಟರ ಹಿಂದಿನ ಕರಾಳತೆಯನ್ನು ಬಿಚ್ಚಿಡಲಿದೆ ಈ ಸಿನಿಮಾ.

ಬಾಲಿವುಡ್ ಥಳುಕು-ಬಳುಕಿನ ಹಿಂದಿನ ಕರಾಳತೆ ಬಿಚ್ಚಿಡುವ ಸಿನಿಮಾ
Follow us on

ಬಾಲಿವುಡ್ ಎಂದರೆ ಥಳುಕು-ಬಳುಕು. ಪ್ರತಿ ದಿನ ನಡೆಯುವ ಹೈ ಎಂಡ್ ಪಾರ್ಟಿಗಳು, ಪದೇ ಪದೇ ಬದಲಾಗುವ ಜೋಡಿಗಳು, ಕೋಟಿಗಟ್ಟಲೆ ಹಣ. ಹಣಕ್ಕಾಗಿ, ಅವಕಾಶಕ್ಕಾಗಿ ಏನೇನೋ ಮಾಡುವ ನಟ-ನಟಿಯರು. ದೂರದಿಂದ ನೋಡಲು ಸುಂದರವಾಗಿ, ಹೊಳೆಯುವ ಬಾಲಿವುಡ್​ ಹತ್ತಿರದಿಂದ ನೋಡಿದರೆ ಅದರ ಕರಾಳ ಮುಖ ಗೋಚರಿಸುತ್ತದೆ. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಬಾಲಿವುಡ್​ನ ಒಂದು ಮುಖ ಈಗಾಗಲೇ ಬಹಿರಂಗವಾಗಿದೆ. ಇದೀಗ ಬಾಲಿವುಡ್​ನ ನಿಜ ಮುಖ ಬಹಿರಂಗಪಡಿಸುವ ಸಿನಿಮಾ ಒಂದು ಸೆಟ್ಟೇರಿದೆ.

ಮಧುರ್ ಬಂಡಾರ್ಕರ್, ಬಾಲಿವುಡ್ ನಿರ್ದೇಶಕರೇ ಆದರೂ ಬಾಲಿವುಡ್​ನ ಹಲವು ಮಂದಿ ಇವರನ್ನು ನೋಡಿದರೆ ಹೆದರುತ್ತಾರೆ. ದಶಕದ ಹಿಂದೆ ‘ಫ್ಯಾಷನ್’ ಹೆಸರಿನ ಸಿನಿಮಾ ನಿರ್ದೇಶಿಸಿ ಫ್ಯಾಷನ್ ಜಗತ್ತಿನ ಹುಳುಕುಗಳನ್ನು ಹೊರಗಿಟ್ಟಿದ್ದರು ಮಧುರ್ ಬಂಡಾರ್ಕರ್. ರಿಯಲಿಸ್ಟಿಕ್ ಸಂಗತಿಗಳನ್ನು ತಮ್ಮ ಸಿನಿಮಾಕ್ಕೆ ಕತೆಗಳನ್ನಾಗಿ ಆಯ್ಕೆ ಮಾಡಿಕೊಳ್ಳುವ ಮಧುರ್ ಬಂಡಾರ್ಕರ್ ಈಗ ನೇರವಾಗಿ ಬಾಲಿವುಡ್​ ಮೇಲೆ ಕಣ್ಣು ಹಾಕಿದ್ದಾರೆ. ಅದರಲ್ಲಿಯೂ ಬಾಲಿವುಡ್​ನಲ್ಲಿ ಸಂಬಂಧಗಳು ಹೇಗಿರುತ್ತವೆ, ಪಾಪರಾಟ್ಜಿಗಳ ಮುಂದೆ ಅಂಟಿಕೊಂಡು ಫೋಟೊ ತೆಗೆಸಿಕೊಳ್ಳುವ ಬಾಲಿವುಡ್​ನ ಸ್ಟಾರ್ ಜೋಡಿಗಳು ನಿಜವಾಗಿಯೂ ಹೇಗಿರುತ್ತಾರೆ ಎಂದು ತೋರಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಜೀವ ಬೆದರಿಕೆ ನಡುವೆಯೂ ಚಿತ್ರೀಕರಣಕ್ಕೆ ಮರಳಲಿರುವ ಸಲ್ಮಾನ್ ಖಾನ್​

ಮಧುರ್ ಬಂಡಾರ್ಕರ್ ‘ವೈವ್ಸ್ ಆಫ್ ಬಾಲಿವುಡ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ನ ಸ್ಟಾರ್ ನಟರುಗಳು ಪತ್ನಿಯರ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಲೋಕಕ್ಕೆ ಆದರ್ಶಪ್ರಾಯರಾಗಿದ್ದ ಬಾಲಿವುಡ್​ ಸ್ಟಾರ್ ನಟರುಗಳು ತಮ್ಮ ಪತ್ನಿಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು. ತಮ್ಮ ಯಶಸ್ಸಿಗೆ ಪತ್ನಿಯರನ್ನು ಹೇಗೆ ಬಳಸಿಕೊಂಡರು. ಸ್ಟಾರ್ ನಟರ ಪತ್ನಿಯರು ಹೇಗೆ ಚಿನ್ನದ ಪಂಜರದಲ್ಲಿ ಜೀವನ ಸವೆಸಿದರು ಎಂಬುದನ್ನು ಈ ಸಿನಿಮಾ ತೋರಿಸಲಿದೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು ಪೋಸ್ಟರ್​ನಲ್ಲಿ ಸುಚಿತ್ರಾ ಸೇನ್​ರ ಚಿತ್ರವನ್ನು ಬಳಸಿಕೊಳ್ಳಲಾಗಿದೆ.

ಮಧುರ್ ಬಂಡಾರ್ಕರ್ ಈ ಹಿಂದೆಯೂ ಈ ರೀತಿಯ ವಿಷಯಗಳ ಬಗ್ಗೆ ಸಿನಿಮಾ ಮಾಡಿದ್ದಾರೆ. ‘ಪೇಜ್ 3’, ‘ಹೀರೋಯಿನ್’, ‘ಫ್ಯಾಷನ್’ ಸಿನಿಮಾಗಳು ಇದೇ ಮಾದರಿಯ ಕತೆಗಳನ್ನು ಹೊಂದಿವೆ. ಇವುಗಳ ಹೊರತಾಗಿ ‘ಚಾಂದಿನಿ ಬಾರ್’, ‘ಟ್ರ್ಯಾಫಿಕ್ ಸಿಗ್ನಲ್’, ‘ಜೈಲ್’ ಕೆಲ ಬೆಂಗಾಲಿ ಸಿನಿಮಾಗಳನ್ನೂ ಸಹ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ