ಮಹಾಕುಂಭ ಹುಡುಗಿ ಮೋನಾಲಿಸಾಗೆ ಸಿನಿಮಾ ಆಫರ್: ದಕ್ಷಿಣ ಭಾರತಕ್ಕೆ ನಟಿ

Mahakumbha Monalisa: ಮಹಾಕುಂಭದ ವೇಳೆ ರುದ್ರಾಕ್ಷಿ ಮಾರುತ್ತಿದ್ದ ಸೆಳೆವ ಕಂಗಳ, ಸುಂದರ ಯುವತಿಯ ಚಿತ್ರವೊಂದು ವೈರಲ್ ಆಗಿತ್ತು. ಆ ಯುವತಿಯನ್ನು ಜನ ಮಹಾಕುಂಭ ಮೋನಲಿಸ ಎಂದು ಕರೆದರು. ಆ ಜನಪ್ರಿಯತೆಯನ್ನು ಬಳಸಿಕೊಂಡ ಯುವತಿ ಈಗ ಇನ್​ಸ್ಟಾಗ್ರಾಂ ಇನ್​ಫ್ಲಯುಯೆನ್ಸರ್ ಆಗಿದ್ದಾಳೆ. ಸಿನಿಮಾಗಳಿಗೂ ಎಂಟ್ರಿ ಕೊಟ್ಟಿದ್ದು, ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

ಮಹಾಕುಂಭ ಹುಡುಗಿ ಮೋನಾಲಿಸಾಗೆ ಸಿನಿಮಾ ಆಫರ್: ದಕ್ಷಿಣ ಭಾರತಕ್ಕೆ ನಟಿ
Mahakumbh Monalisa
Edited By:

Updated on: Aug 28, 2025 | 6:44 PM

ಮಹಾಕುಂಭದಲ್ಲಿ ಮಿಂಚಿ ಗಮನ ಸೆಳೆದ ಮೋನಾಲಿಸಾ ಭೋಸ್ಲೆ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಪ್ರಯಾಗ್ ರಾಜ್​ನ ಮಹಾಕುಂಭ ಮೇಳದಲ್ಲಿ  ಅವರ ಫೋಟೋ ವೈರಲ್ ಆಗಿತ್ತು ಮತ್ತು ಆ ಬಳಿಕ ಎಲ್ಲರ ಗಮನ ಸೆಳೆದರು. ಈಗ ಅವರು ಮಲಯಾಳಂ ಚಿತ್ರರಂಗಕ್ಕೆ ಕಾಲಿಡಲು ರೆಡಿ ಆಗಿದ್ದಾರೆ. ಅವರಿಗೆ ಸಿನಿಮಾ ಆಫರ್ ಸಿಕ್ಕಿದೆ.

ಮಧ್ಯ ಪ್ರದೇಶದ ಇಂದೋರ್​​ನವರು ಈ ಮೋನಾಲಿಸಾ. ಮಹಾಕುಂಭದಲ್ಲಿ ಅವರ ಫೋಟೋ ವೈರಲ್ ಆಯಿತು. ಅವರ ಫೋಟೋಗಳು ಗಮನ ಸೆಳೆದವು. ಆ ಬಳಿಕ ಅನೇಕ ಬ್ರ್ಯಾಂಡ್​ಗಳು ಅವರನ್ನು ಹಿಡಿದು ಪ್ರಚಾರಕ್ಕೆ ಬಳಸಿಕೊಂಡರು. ಅವರು ವಿಡಿಯೋ ಸಾಂಗ್​​ನಲ್ಲೂ ಬಳಕೆ ಆದರು. ಈಗ ಅವರಿಗೆ ಮಲಯಾಳಂ ಸಿನಿಮಾದಲ್ಲಿ ಕೆಲಸ ಮಾಡೋ ಅವಕಾಶ ಸಿಕ್ಕಿದೆ.

‘ನಾಗಮ್ಮ’ ಹೆಸರಿನ ಸಿನಿಮಾದಲ್ಲಿ ಮೋನಾಲಿಸಾ ನಟಿಸುತ್ತಿದ್ದಾರೆ. ಪಿ. ಬಿನು ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೈಲಾಶ್ ಈ ಚಿತ್ರದ ಹೀರೋ. ಈ ಸಿನಿಮಾಗೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ.

‘ನಾಗಮ್ಮ’ ಸಿನಿಮಾದ ಪೂಜಾ ಕಾರ್ಯ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಿನಿಮಾದ ಮುಹೂರ್ತಕ್ಕೆ ನಿರ್ದೇಶಕ ಸಿಬಿ ಮಲಾಯಿಲ್ ಭಾಗಿ ಆಗಿದ್ದರು. ಮೋನಾಲಿಸಾ ಅವರು ಕೋಳಿಕೋಡ್​ನಲ್ಲಿ ಜ್ಯುವೆಲರಿ ಶಾಪ್ ಉದ್ಘಾಟನೆ ಮಾಡಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೇರಳದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದನ್ನು ಇದು ಸಾಬೀತು ಮಾಡಿತ್ತು.

ಇದನ್ನೂ ಓದಿ:ಮತ್ತೊಂದು ಬಾಲಿವುಡ್ ಬಿಗ್ ಬಜೆಟ್ ಸಿನಿಮಾಕ್ಕೆ ಶ್ರೀಲೀಲಾ ಆಯ್ಕೆ

ಮೋನಾಲಿಸಾ ಅವರಿಗೆ ಈಗಿನ್ನು 16 ವರ್ಷ. ಅವರು ಮಹಾಕುಂಭದಲ್ಲಿ ಹೂಮಾಲೆ ಮಾರುತ್ತಿದ್ದರು. ಅವರ ಕಣ್ಣುಗಳು ಗಮನ ಸೆಳೆಯುವ ರೀತಿಯಲ್ಲಿ ಇದ್ದವು. ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋ ಸಾಕಷ್ಟು ವೈರಲ್ ಆಯಿತು. ಈಗ ಇವರು ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಮಾಡುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ವಿಡಿಯೋ ಸಾಂಗ್ ಒಂದರಲ್ಲೂ ಕೂಡ ಕಾಣಿಸಿಕೊಂಡರು ಅನ್ನೋದು ವಿಶೇಷ. ಅವರು ನಟನೆಯಲ್ಲಿ ಯಾವ ರೀತಿಯಲ್ಲಿ ಕಮಾಲ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ