ಹೊಂಬಾಳೆ ಫಿಲ್ಮ್ಸ್ನವರು ಈವರೆಗೆ ಹಲವು ರೀತಿಯ ಚಿತ್ರಗಳನ್ನು ನೀಡಿದ್ದಾರೆ. ಕಮರ್ಷಿಯಲ್ ಆ್ಯಕ್ಷನ್ ಚಿತ್ರಗಳನ್ನು ಅವರು ಹೆಚ್ಚಾಗಿ ನೀಡಿದ್ದಾರೆ. ಆದರೆ, ಅವರು ಎಂದಿಗೂ ಅನಿಮೇಟೆಡ್ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಈಗ ಅಂಥದ್ದೊಂದು ಚಿತ್ರವನ್ನು ಪ್ರಸ್ತುತಪಡಿಸಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ‘ಮಹಾವತಾರ ನರಸಿಂಹ’ ಎಂದು ಹೆಸರಿಡಲಾಗಿದ್ದು, ಸಂಕ್ರಾಂತಿ ಪ್ರಯುಕ್ತ ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಚಿತ್ರದ ರಿಲೀಸ್ ದಿನಾಂಕ ಕೂಡ ರಿವೀಲ್ ಆಗಿದೆ.
ನರಸಿಂಹನ ಕಥೆ ಬಹುತೇಕರಿಗೆ ಗೊತ್ತಿದೆ. ವಿಷ್ಣುವಿನ ಅವತಾರದಲ್ಲಿ ನರಸಿಂಹನ ರೂಪವೂ ಒಂದು. ನರಸಿಂಹನು ಹಿರಣ್ಯ ಕಶಿಪುನ ಸಾಯಿಸುತ್ತಾನೆ. ಇದೇ ಕಥೆಯನ್ನು ಇಟ್ಟುಕೊಂಡು ಹೊಂಬಾಳೆ ಸಿನಿಮಾದವರು ಅನಿಮೇಟೆಡ್ ಸಿನಿಮಾ ಮಾಡಿದ್ದಾರೆ. ಈ ಟೀಸರ್ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಬಿಡುಗಡೆ ಕಂಡಿದೆ.
When Faith is Challenged, He Appears.
In a World torn apart by Darkness and Chaos…Unleash the Fury!
Witness the Roar of #MahavatarNarsimhaTeaser: https://t.co/rvGS9YKU20Witness the Appearance of the most Ferocious, The Half-Man, Half-Lion Avatar-Lord Vishnu’s Most Powerful… pic.twitter.com/PdeGZThD9w
— Hombale Films (@hombalefilms) January 14, 2025
ಹಿರಣ್ಯ ಕಶಿಪು ಮಗ ಪ್ರಹ್ಲಾದ ಸದಾ ಹರಿಯ ಭಜನೆ ಮಾಡುತ್ತಾ ಇರುತ್ತಾನೆ. ಇದರಿಂದ ಸಿಟ್ಟಾಗುವ ಹಿರಣ್ಯ ಕಶಿಪು ‘ನಿನ್ನ ಹರಿ ಈ ಕಂಬದಲ್ಲಿ ಇದ್ದಾನೆಯೇ.. ಈ ಕಂಬದಲ್ಲಿ ಇದ್ದಾನೆಯೇ’ ಎಂದು ಕೇಳುತ್ತಾನೆ. ಆಗ ಕಂಬ ಒಡೆದುಕೊಂಡು ನರಸಿಂಹ ಬರುತ್ತಾನೆ. ಇದನ್ನು ಟೀಸರ್ನಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ಹೊಂಬಾಳೆಯ ಹೊಸ ಸಿನಿಮಾ ‘ನರಸಿಂಹ’, ಟೀಸರ್ ನೋಡಿ
‘ಮಹಾವತಾರ ನರಸಿಂಹ’ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಇದು 3ಡಿ ವರ್ಷನ್ನಲ್ಲೂ ಲಭ್ಯವಿದೆ. ಮೂಲತಃ ಹಿಂದಿಯಲ್ಲಿ ನಿರ್ಮಾಣ ಆಗಲಿರುವ ಸಿನಿಮಾ ಇದಾಗಿದೆ. ಹೊಂಬಾಳೆಯವರ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದೆ. ಅಶ್ವಿನ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿರುವ ಈ ಚಿತ್ರ ಏಪ್ರಿಲ್ 3ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.