ಹೊಂಬಾಳೆಯ ಹೊಸ ಸಿನಿಮಾ ‘ನರಸಿಂಹ’, ಟೀಸರ್ ನೋಡಿ

Hombale Films: ಇತ್ತೀಚೆಗಷ್ಟೆ ಪ್ರಭಾಸ್ ಜೊತೆಗೆ ಮೂರು ಭಾರಿ ಬಜೆಟ್ ಸಿನಿಮಾ ಘೋಷಣೆ ಮಾಡಿರುವ ಹೊಂಬಾಳೆ, ಇದೀಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದೆ. ಸಿನಿಮಾದ ಪೋಸ್ಟರ್ ಟೀಸರ್ ಇಂದು ಬಿಡುಗಡೆ ಆಗಿದೆ.

ಹೊಂಬಾಳೆಯ ಹೊಸ ಸಿನಿಮಾ ‘ನರಸಿಂಹ’, ಟೀಸರ್ ನೋಡಿ
Follow us
ಮಂಜುನಾಥ ಸಿ.
|

Updated on: Nov 16, 2024 | 4:51 PM

ಈಗಾಗಲೇ ಕೆಲವು ನೂರಾರು ಕೋಟಿ ಪ್ರಾಜೆಕ್ಟ್​ಗಳನ್ನು ಘೋಷಿಸಿರುವ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ ಇದೀಗ ಹೊಸದೊಂದು ಸಿನಿಮಾ ಘೋಷಣೆ ಮಾಡಿದೆ. ಭಾರತದ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರೊಡನೆ ಕೆಲಸ ಮಾಡಿರುವ ಹೊಂಬಾಳೆ ಇದೀಗ ಅನಿಮೇಷನ್ ಸಿನಿಮಾ ಮಾಡಲು ಮುಂದಾದಂತಿದೆ. ಮಾತ್ರವಲ್ಲದೆ ಮೊದಲ ಬಾರಿಗೆ ಹೊಂಬಾಳೆ ಫಿಲಮ್ಸ್ ಪೌರಾಣಿಕ ಕತೆಯ ಸಿನಿಮಾದ ಮೇಲೆ ಬಂಡವಾಳ ಹೂಡುತ್ತಿದೆ. ಹೊಂಬಾಳೆ ‘ನರಸಿಂಹ’ ಸಿನಿಮಾವನ್ನು ತನ್ನ ಮುಂದಿನ ಸಿನಿಮಾವನ್ನಾಗಿ ಘೋಷಣೆ ಮಾಡಿದೆ.

ಸಿನಿಮಾಕ್ಕೆ ‘ಮಹಾವತಾರ್ ನರಸಿಂಹ’ ಎಂದು ಹೆಸರಿಟ್ಟಿದ್ದು ಇದೊಂದು 3ಡಿ ಸಿನಿಮಾ ಆಗಿರಲಿದೆ. ಇದು ನಿಜ ನಟರಿಲ್ಲದ ಅನಿಮೇಷನ್ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ಭಾರತದ ಜನಪ್ರಿಯ ಅನಿಮೇಷನ್ ಸಿನಿಮಾ ಸ್ಟುಡಿಯೋ ಕ್ಲೀಮ್ ಸಹ ನಿರ್ಮಾಣ ಮಾಡುತ್ತಿದೆ. ಕ್ಲೀಮ್​ನ ಅಶ್ವಿನ್ ಕುಮಾರ್ ಅವರು ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಭಾರಿ ಗಾತ್ರದ ನರಸಿಂಹ ಹಾಗೂ ನರಸಿಂಹನ ಎದುರು ನಿಂತಿರುವ ಹಿರಣ್ಯಕಶಪುವಿನ ಪೋಸ್ಟರ್ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಜೊತೆಗೆ ಸಣ್ಣ ಟೀಸರ್ ಅನ್ನೂ ಬಿಡುಗಡೆ ಮಾಡಲಾಗಿದೆ.

‘ನರಸಿಂಹ’ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಇದು ಮೂಲತಃ ಹಿಂದಿಯಲ್ಲಿ ನಿರ್ಮಾಣ ಆಗಲಿರುವ ಸಿನಿಮಾ ಆಗಿದೆ. ಸಿನಿಮಾಕ್ಕೆ ಸ್ಯಾಮ್ ಸಿಎಸ್ ಮತ್ತು ಶ್ಲೋಕ ಅರುಗಳು ಸಂಗೀತ ನೀಡುತ್ತಿದ್ದಾರೆ. ಸಿನಿಮಾದಲ್ಲಿ ಹಿರಣ್ಯಕಶಪು ಹಾಗೂ ನರಸಿಂಹನ ಕತೆಯನ್ನು ಅದ್ಧೂರಿಯಾಗಿ, ರೋಚಕವಾಗಿ ತೆರೆಯ ಮೇಲೆ ತರಲಾಗುತ್ತಿದೆ.

ಇದನ್ನೂ ಓದಿ:ಹೊಸ ಚಿತ್ರ ಘೋಷಿಸಿದ ಹೊಂಬಾಳೆ, ಪೋಸ್ಟರ್​ ಮೂಡಿಸಿದೆ ಹಲವು ಪ್ರಶ್ನೆ

ವಿಷ್ಣುವಿನ ಮಹಾಅವರತಾರಗಳ ಸರಣಿಯನ್ನು ಹೊಂಬಾಳೆ ಹೊರತರುವ ಯೋಜನೆ ಹಾಕಿಕೊಂಡಿದ್ದು, ಆ ಯೋಜನೆಯ ಮೊದಲ ಪ್ರಾಜೆಕ್ಟ್ ಆಗಿ ಇದೀಗ ‘ನರಸಿಂಹ’ ಅನ್ನು ನಿರ್ಮಾಣ ಮಾಡುತ್ತಿದೆ. ಸಿನಿಮಾಕ್ಕೆ ಕ್ಲೀಮ್ ಸಹ ಸಾಥ್ ನೀಡಿದೆ. ಕ್ಲೀಮ್ ಈಗಾಗಲೇ ಭಾರತದಲ್ಲಿ ಕೆಲವು ಅನಿಮೇಷನ್ ಸಿನಿಮಾಗಳನ್ನು ನಿರ್ಮಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು