‘ನಿಮ್ಮ ಕ್ಷಮೆ ಯಾರಿಗೆ ಬೇಕು?’; ಕ್ಷಮೆಗೆ ಸ್ಪಂದಿಸದ ಚೈತ್ರಾಗೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಹೇಳಿದ ಸುದೀಪ್

ಸುದೀಪ್ ಅವರು ಪ್ರತಿ ಶನಿವಾರ ಒಂದಷ್ಟು ಜನರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಲಿಮಿಟ್ ದಾಟಿ ಹೋಗಿದ್ದು ಕಡಿಮೆ. ಆದರೆ, ಈ ವಾರ ಮಾತ್ರ ಅವರು ಮಿತಿ ಮೀರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಚೈತ್ರಾ ಶಾಕ್ ಆಗಿದ್ದಾರೆ. ಅವರಿಗೆ ಏನು ಹೇಳಬೇಕು ಎಂದೇ ಗೊತ್ತಾಗಲೇ ಇಲ್ಲ.

‘ನಿಮ್ಮ ಕ್ಷಮೆ ಯಾರಿಗೆ ಬೇಕು?’; ಕ್ಷಮೆಗೆ ಸ್ಪಂದಿಸದ ಚೈತ್ರಾಗೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಹೇಳಿದ ಸುದೀಪ್
ಬಿಗ್ ಬಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 28, 2024 | 1:33 PM

ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಇತ್ತೀಚೆಗೆ ಅವರಿಗೆ ಅನಾರೋಗ್ಯ ಆಗಿದ್ದರಿಂದ ಅವರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಹೊರಹೋಗಿ ಬಂದ ಅವರು ಎಲ್ಲಾ ಸ್ಪರ್ಧಿಗಳಿಗೆ ಯಾವ ರೀತಿಯಲ್ಲಿ ಆಡಬೇಕು ಎಂಬುದರ ಹಿಂಟ್ ಕೊಟ್ಟಿದ್ದರು. ಇದು ಹೊರಗಿನ ಅಭಿಪ್ರಾಯ ಎಂದು ಕೂಡ ಹೇಳಿದ್ದರು. ಇದರಿಂದ ಸುದೀಪ್ ಸಖತ್ ಸಿಟ್ಟಾಗಿದ್ದಾರೆ. ಅಲ್ಲದೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಚೈತ್ರಾ ಕ್ಷಮೆ ಕೇಳಿದರು. ಈ ಕ್ಷಮೆಯನ್ನು ಸುದೀಪ್ ಅವರು ಒಪ್ಪಿಲ್ಲ. ‘ನಾನು ತಲೆಕೆಟ್​ ನನ್​ಮಗ’ ಎಂದಿದ್ದಾರೆ ಸುದೀಪ್.

ಸುದೀಪ್ ಅವರು ಪ್ರತಿ ಶನಿವಾರ ಒಂದಷ್ಟು ಜನರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಲಿಮಿಟ್ ದಾಟಿ ಹೋಗಿದ್ದು ಕಡಿಮೆ. ಆದರೆ, ಈ ವಾರ ಮಾತ್ರ ಅವರು ಮಿತಿ ಮೀರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಚೈತ್ರಾ ಶಾಕ್ ಆಗಿದ್ದಾರೆ. ಅವರಿಗೆ ಏನು ಹೇಳಬೇಕು ಎಂದೇ ಗೊತ್ತಾಗಲೇ ಇಲ್ಲ. ಕಣ್ಣಿನ ತುಂಬ ನೀರು ತುಂಬಿಕೊಂಡು ಮಾತನಾಡಲು ತಡಬಡಿಸಿದ್ದಾರೆ.

ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಸುದೀಪ್ ಅವರಿಗೇ ಬೇಸರ ಆಯಿತು. ಈ ಕಾರಣಕ್ಕೆ ಅವರು ಚೈತ್ರಾ ಬಳಿ ಕ್ಷಮೆ ಕೇಳಿದರು. ಆದರೆ, ಈ ಕ್ಷಮೆಗೆ ಚೈತ್ರಾ ಅವರು ಸ್ವಲ್ಪವೂ ಗಮನ ಕೊಡಲೇ ಇಲ್ಲ. ಇದಕ್ಕೆ ಸುದೀಪ್ ಬೇಸರ ಮಾಡಿಕೊಂಡರು. ಈ ಬಗ್ಗೆ ನೇರವಾಗಿ ಹೇಳಿದರು.

ತಪ್ಪಿನ ಅರಿವಾದ ಬಳಿಕ ಚೈತ್ರಾ ಅವರ ಕಡೆಯಿಂದಲೇ ಕ್ಷಮೆ ಬಂತು. ‘ನಾನು ಕ್ಷಮೆ ಕೇಳಿದಾಗ ನೀವು ಸ್ಪಂದಿಸಿಲ್ಲ. ಹೀಗಿರುವಾಗ ನಿಮ್ಮ ಕ್ಷಮೆಗೆ ನಾನೇಕೆ ಸ್ಪಂದಿಸಲಿ? ಅಯ್ಯೋ ನಾನು ತಲೆ ಕೆಟ್ ನನ್ನ ಮಗ. ಹುಚ್ಚ ಇಂದ ಕರಿಯರ್ ಶುರು ಮಾಡಿದವನು ನಾನು. 28 ವರ್ಷ ಅದರಲ್ಲೇ ಬದುಕಿದೀನಿ. ನಾನು ಕ್ಷಮೆ ಕೇಳಿದಾಗ ಸ್ಪಂದಿಸಿದರೆ ಒಳ್ಳೆ ಮನುಷ್ಯ. ಇಲ್ಲ ಎಂದರೆ ನನ್ನಂತ ತಲೆಕೆಟ್ಟವರು ಯಾರೂ ಇಲ್ಲ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ:  ಸುದೀಪ್ ‘ಬಿಗ್ ಬಾಸ್’ ಕಂಬ್ಯಾಕ್​ಗೆ ಸಿಕ್ತು ಭರ್ಜರಿ ಟಿಆರ್​ಪಿ; ಎರಡಂಕಿ ದಾಟಿದ ‘ಪುಟ್ಟಕ್ಕನ ಮಕ್ಕಳು’ ಟಿವಿಆರ್

ನಂತರ ಚೈತ್ರಾ ಅವರು ಕ್ಯಾಮೆರಾ ಬಳಿ ಹೋಗಿ ‘ವಾತಾವರಣ ಉಸಿರುಗಟ್ಟಿಸುತ್ತಿದೆ. ನಾನು ಮನೆಯಿಂದ ಹೊರ ಹೋಗಬೇಕು. ನನ್ನ ಕಳುಹಿಸಿ’ ಎಂದು ಅವರು ಹೇಳಿದರು. ಇದಕ್ಕೆ ಬಿಗ್ ಬಾಸ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:01 pm, Sat, 16 November 24

ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ಮೈಸೂರು: 188 ವರ್ಷಗಳ ಹಳೆಯದಾದ ಗರಡಿ ಮನೆ ಗೋಡೆ ಕುಸಿತ
ಮೈಸೂರು: 188 ವರ್ಷಗಳ ಹಳೆಯದಾದ ಗರಡಿ ಮನೆ ಗೋಡೆ ಕುಸಿತ
ಎಸ್ ಟಿ ಸೋಮಶೇಖರ್ ವಿರುದ್ಧ ಶಿಸ್ತುಕ್ರಮ, ಸುಳಿವು ನೀಡಿದ ಬಿವೈ ವಿಜಯೇಂದ್ರ
ಎಸ್ ಟಿ ಸೋಮಶೇಖರ್ ವಿರುದ್ಧ ಶಿಸ್ತುಕ್ರಮ, ಸುಳಿವು ನೀಡಿದ ಬಿವೈ ವಿಜಯೇಂದ್ರ
ಒಂದಿಬ್ಬರ ನಡುವಿನ ಜಗಳ ಪಕ್ಷದ ಕಲಹ ಆಗಲಾರದು: ರಾಧಾ ಮೋಹನ್ ದಾಸ್ ಅಗರವಾಲ್
ಒಂದಿಬ್ಬರ ನಡುವಿನ ಜಗಳ ಪಕ್ಷದ ಕಲಹ ಆಗಲಾರದು: ರಾಧಾ ಮೋಹನ್ ದಾಸ್ ಅಗರವಾಲ್