‘ಭೈರತಿ’, ‘ಅಮರನ್’ ಹೊಡೆತಕ್ಕೆ ತತ್ತರಿಸಿದ ‘ಕಂಗುವ’; ಒಂದಂಕಿಗೆ ಬಂದ ಕಲೆಕ್ಷನ್

ಕಂಗುವ ಚಿತ್ರವು ಬಿಡುಗಡೆಯಾದ ನಂತರ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ವಿಫಲವಾಗಿದೆ. ಮೊದಲ ದಿನ 24 ಕೋಟಿ ರೂಪಾಯಿಗಳನ್ನು ಗಳಿಸಿದ್ದ ಚಿತ್ರ, ಎರಡನೇ ದಿನ ಕೆಲವೇ 9 ಕೋಟಿ ರೂಪಾಯಿ ಗಳಿಸಿದೆ. ಕಡಿಮೆ ರೇಟಿಂಗ್ ಮತ್ತು ಟೀಕೆಗಳಿಂದಾಗಿ ಚಿತ್ರದ ಗಳಿಕೆ ಕುಸಿದಿದೆ.

‘ಭೈರತಿ’, ‘ಅಮರನ್’ ಹೊಡೆತಕ್ಕೆ ತತ್ತರಿಸಿದ ‘ಕಂಗುವ’; ಒಂದಂಕಿಗೆ ಬಂದ ಕಲೆಕ್ಷನ್
Follow us
ರಾಜೇಶ್ ದುಗ್ಗುಮನೆ
|

Updated on: Nov 16, 2024 | 7:25 AM

‘ಕಂಗುವ’ ಸಿನಿಮಾ ನವೆಂಬರ್ 14ರಂದು ರಿಲೀಸ್ ಆಯಿತು. ಎರಡು ಕಾಲ ಘಟ್ಟದಲ್ಲಿ ಸಿನಿಮಾದ ಕಥೆ ಸಾಗಲಿದೆ. ಈ ಚಿತ್ರವನ್ನು ನೋಡಿದ ಎಲ್ಲರೂ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ಈ ಚಿತ್ರಕ್ಕೆ ರೇಟಿಂಗ್ ಕೂಡ ಕಡಿಮೆ ಸಿಕ್ಕಿದೆ. ಈಗ ಚಿತ್ರದ ಗಳಿಕೆ ದಿನ ಕಳೆದಂತೆ ಮತ್ತಷ್ಟು ತಗ್ಗಿದೆ. ಮೊದಲ ದಿನ ಎರಂಡಕಿ ಇದ್ದ ಗಳಿಕೆ ಈಗ ಒಂದಂಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಹೀಗೆ ಮುಂದುವರಿದರೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಡಿಸಾಸ್ಟರ್ ಆಗಲಿದೆ.

‘ಕಂಗುವ’ ಸಿನಿಮಾದ ಮೊದಲ ದಿನದ ಗಳಿಕೆ 24 ಕೋಟಿ ರೂಪಾಯಿ ಆಗಿತ್ತು. ಎರಡನೇ ದಿನ ಈ ಚಿತ್ರ ಗಳಿಕೆ ಮಾಡಿದ್ದು ಕೇವಲ 9 ಕೋಟಿ ರೂಪಾಯಿ! ಹೌದು, ಆರಂಭಿಕ ಲೆಕ್ಕಾಚಾರಗಳ ಪ್ರಕಾರ ಈ ಸಿನಿಮಾ ಎರಡನೇ ದಿನ ಕಲೆಕ್ಷನ್ ಮಾಡಿದ್ದು ಕೆಲವೇ ಕೋಟಿಗಳು. ಇದು ತಂಡಕ್ಕೆ ಶಾಕ್ ಆಗಿದೆ. ನಿರ್ಮಾಪಕರು ಈ ಸಿನಿಮಾದಿಂದ ದೊಡ್ಡ ನಷ್ಟ ಅನುಭವಿಸಿದ್ದಾರೆ.

ಸದ್ಯ ಚಿತ್ರದ ಒಟ್ಟಾರೆ ಗಳಿಕೆ 30 ಕೋಟಿ ರೂಪಾಯಿ. ಈ ಚಿತ್ರದ ಬಜೆಟ್ 350 ಕೋಟಿ ರೂಪಾಯಿ. ಅಂದರೆ, ಸಿನಿಮಾ ಒಟ್ಟೂ ಬಜೆಟ್​ನ ಶೇ.10ರಷ್ಟು ಗಳಿಕೆ ಮಾಡಲು ಸಿನಿಮಾ ವಿಫಲವಾಗಿದೆ. ಹೀಗೆ ಮುಂದುವರಿದರೆ ಸಿನಿಮಾ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: ಮೊದಲ ದಿನ ಭರ್ಜರಿ ಗಳಿಕೆ ಮಾಡಿದ ‘ಭೈರತಿ ರಣಗಲ್’; ರೇಟಿಂಗ್​ನಲ್ಲೂ ಫುಲ್ ಮಾರ್ಕ್ಸ್

ತಮಿಳಿನಲ್ಲಿ ‘ಅಮರನ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆ ಕಂಡಿದೆ. ಹೀಗಾಗಿ, ತಮಿಳುನಾಡಿನಲ್ಲಿ ‘ಕಂಗುವ’ ಬದಲಿಗೆ ‘ಅಮರನ್’ ಚಿತ್ರ ಪ್ರದರ್ಶನ ಆರಂಭಿಸಲಾಗಿದೆ. ಕರ್ನಾಟಕದಲ್ಲಿ ‘ಕಂಗುವ’ ಜಾಗಕ್ಕೆ ‘ಭೈರತಿ’ಯ ಎಂಟ್ರಿ ಆಗಿದೆ. ಶನಿವಾರ ಹಾಗೂ ಭಾನುವಾರ ‘ಕಂಗುವ’ ಒಳ್ಳೆಯ ಪ್ರದರ್ಶನ ಕಂಡರೆ ನಿರ್ಮಾಪಕರ ಮೊಗದಲ್ಲಿ ನಗು ಮೂಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ