‘ಒನ್ ನೈಟ್ ಸ್ಟ್ಯಾಂಡ್​ಗೆ ಸಿಕ್ಕವನ ಮದುವೆ ಆಗಬೇಕಾಯಿತು’: ಸ್ಟಾರ್ ನಟನ ಪತ್ನಿಯ ಹೇಳಿಕೆ

Mahip Kapoor: ಬಾಲಿವುಡ್​ನ ಖ್ಯಾತ ನಟಿಯಾಗಿದ್ದ ಮಹೀಪ್ ಕಪೂರ್, ತಾವು ಸಂಜಯ್ ಕಪೂರ್ ಅನ್ನು ಮದುವೆ ಆಗಿದ್ದು ಹೇಗೆ ಎಂದು ವಿವರಿಸಿದ್ದಾರೆ. ಒನ್​ ನೈಟ್ ಸ್ಟ್ಯಾಂಡ್​ಗೆ ಸಿಕ್ಕ ಸಂಜಯ್ ಜೊತೆಗೆ ಮದುವೆ ಆಗಬೇಕಾಯ್ತಂತೆ ಮಹೀಪ್.

‘ಒನ್ ನೈಟ್ ಸ್ಟ್ಯಾಂಡ್​ಗೆ ಸಿಕ್ಕವನ ಮದುವೆ ಆಗಬೇಕಾಯಿತು’: ಸ್ಟಾರ್ ನಟನ ಪತ್ನಿಯ ಹೇಳಿಕೆ
Edited By:

Updated on: Nov 16, 2024 | 11:39 PM

ನಟಿ ಮಹೀಪ್ ಕಪೂರ್ ಅವರು 1997ರಲ್ಲಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಅವರ ಮಕ್ಕಳ ಹೆಸರು ಶನಯಾ ಕಪೂರ್ ಮತ್ತು ಜಹಾನ್ ಕಪೂರ್. ನಟಿ ಮಹೀಪ್ ಕಪೂರ್ ಅವರು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್​ನಲ್ಲಿ ಪ್ರಸಾರ ಆಗುತ್ತಿರುವ ‘ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್’ನೊಂದಿಗೆ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು ಹಾಸ್ಯನಟ ರೋನಕ್ ರಜಾನಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ಅವರು ಸಂಜಯ್ ಕಪೂರ್ ಅವರ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದಾರೆ.

ನಟಿ ಮಹೀಪ್ ಕಪೂರ್ ಅವರು ಸಂಜಯ್ ಕಪೂರ್ ಮತ್ತು ಅವರ ಲವ್ ಸ್ಟೋರಿ ಬಗ್ಗೆ ಮಾತನಾಡುತ್ತಾ ನಮ್ಮ ಲವ್ ಸ್ಟೋರಿ ಸರಳವಾಗಿದೆ ಎಂದು ಹೇಳಿದ್ದಾರೆ. ‘ನಾನು ಸಂಜಯ್​ ಅನ್ನು ಭೇಟಿ ಮಾಡಿದ್ದು ಒನ್ ನೈಟ್ ಸ್ಟ್ಯಾಂಡ್​ಗೆ (ಒಂದು ರಾತ್ರಿ ಮಲಗಲು). ಅವರನ್ನು ಮದುವೆಯಾಗುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಒಂದು ದಿನ ನಾನು ಆಹ್ವಾನಿಸದೆ ಅವರ ಪಾರ್ಟಿಗೆ ಬಂದೆ. ಆ ಪಾರ್ಟಿಯಲ್ಲಿ ನಾನು ಅವರನ್ನು ಭೇಟಿಯಾದೆ. ನಾನು ವಿಪರೀತ ಕುಡಿದಿದ್ದೆ. ನಾನು ಮದ್ಯದ ಅಮಲಿನಲ್ಲಿ ಮೂರ್ಛೆ ಹೋದೆ. ಆ ಪಾರ್ಟಿಯಲ್ಲಿ ನಾನು ಸಾಕಷ್ಟು ಮದ್ಯ ಸೇವಿಸಿದ್ದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:‘ಬಾಲಿವುಡ್​ನಲ್ಲಿ ಇನ್ನು ಹೆಚ್ಚು ವರ್ಷ ಇರಲ್ಲ, ನಾಳೆಯೇ ಸಾಯಬಹುದು’; ಆಮಿರ್ ಖಾನ್ ಆತಂಕ

‘ಕುಡಿದ ಅಮಲಿನಲ್ಲಿ ನಾನು ಸಂಜಯ್ ಕಪೂರ್ ಜೊತೆ ಮದುವೆಯಾಗಲು ಒಪ್ಪಿಕೊಂಡೆ. ನಾನು ಸಂಪೂರ್ಣವಾಗಿ ಕುಡಿದಿದ್ದೆ. ಆದರೆ ಅಂತಹ ಸ್ಥಿತಿಯಲ್ಲಿಯೂ, ನನ್ನ ಅತ್ತೆ ನನ್ನನ್ನು ಒಪ್ಪಿಕೊಂಡರು. ನಮ್ಮ ನಡುವೆ ಯಾವುದೇ ಪ್ರಸ್ತಾಪ ಇರಲಿಲ್ಲ. ನಾವು ಮದುವೆಯಾಗಲು ಬಯಸುತ್ತೀರಾ ಎಂದು ಅವರು ನನ್ನನ್ನು ಕೇಳಿದರು ಮತ್ತು ನಾನು ಹೌದು ಎಂದು ಹೇಳಿದೆ’ ಎಂದಿದ್ದಾರೆ ಮಹೀಪ್.

ನಟ ಮೋಸ ಮಾಡಿದ

ಇಂಗ್ಲಿಷ್ ವೆಬ್‌ಸೈಟ್‌ನ ಪ್ರಕಾರ, ಮಹೀಪ್ ಕಪೂರ್ ಮದುವೆಗೆ ಮೊದಲು ಐದು ವರ್ಷಗಳ ಕಾಲ ಸಂಜಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ‘ಸಂಜಯ್ ನನಗೆ ಮೋಸ ಮಾಡಿ ಬೆದರಿಕೆ ಹಾಕಿದ್ದರು’ ಎಂದು ಅವರು ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ