‘ಬಾಲಿವುಡ್​ನಲ್ಲಿ ಇನ್ನು ಹೆಚ್ಚು ವರ್ಷ ಇರಲ್ಲ, ನಾಳೆಯೇ ಸಾಯಬಹುದು’; ಆಮಿರ್ ಖಾನ್ ಆತಂಕ

ಆಮೀರ್ ಖಾನ್ ಅವರು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಅವರು ಮುಂದಿನ 10 ವರ್ಷಗಳಲ್ಲಿ ಹೆಚ್ಚು ಉತ್ತಮವಾಗಿ ಕೆಲಸ ಮಾಡಲು ಬಯಸಿದ್ದಾರೆ. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ನಿರ್ಮಾಣದತ್ತ ಒಲವು ತೋರಿದ್ದಾರೆ. ಅವರ ನಿವೃತ್ತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

‘ಬಾಲಿವುಡ್​ನಲ್ಲಿ ಇನ್ನು ಹೆಚ್ಚು ವರ್ಷ ಇರಲ್ಲ, ನಾಳೆಯೇ ಸಾಯಬಹುದು’; ಆಮಿರ್ ಖಾನ್ ಆತಂಕ
ಆಮಿರ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 15, 2024 | 2:44 PM

ಬಾಲಿವುಡ್ ನಟ ಆಮಿರ್ ಖಾನ್ ಅವರು ಮಿಸ್ಟರ್ ಪರ್ಫೆಕ್ಟ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಸತತ ಸೋಲು ಕಂಡಿರುವುದರಿಂದ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರ ನಿರ್ಮಾಣದ ‘ಲಾಪತಾ ಲೇಡಿಸ್’ ಆಸ್ಕರ್​ ರೇಸ್​ಗೆ ಭಾರತದಿಂದ ನಾಮಿನೇಟ್ ಆಗಿದೆ. ಈ ಬಗ್ಗೆ ಮಾತನಾಡುವಾಗ ಬಾಲಿವುಡ್​ನ ಮುಂದಿನ ಪ್ಲ್ಯಾನ್​ಗಳ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ಸಾವಿನ ಬಗ್ಗೆ ಆತಂಕ ಕೂಡ ಹೊರಹಾಕಿದ್ದಾರೆ.  ಅಲ್ಲದೆ, ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದೇಕೆ ಎಂಬುದನ್ನು ವಿವರಿಸಿದ್ದಾರೆ.

‘ನಾನು ಆರು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಿಲ್ಲ. ಅದಕ್ಕೆ ನನ್ನದೇ ಆದ ಕಾರಣಗಳಿವೆ. ನಾನು ಸಿನಿಮಾಗಳನ್ನು ಬಿಡಬಾರದು ಎಂದು ನಿರ್ಧರಿಸಿದೆ. ಬಹುಶಃ ನಾನು ಇನ್ನು 10 ವರ್ಷ ಕೆಲಸ ಮಾಡಬಹುದು’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಆಮಿರ್ ಖಾನ್​ಗೆ ಮಹಾಭಾರತ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ, ಇದನ್ನು ಅವರು ಬದಿಗಿಟ್ಟಿದ್ದಾರೆ.

‘ಜೀವನವನ್ನು ನಂಬೋಕೆ ಆಗಲ್ಲ. ನಾಳೆ ನಾವು ಸಾಯಬಹುದು. ಈಗ ನನಗೆ 59 ವರ್ಷ. 70 ವರ್ಷಗಳವರೆಗೆ ನಾನು ಕೆಲಸ ಮಾಡಬಹುದು. ಮುಂದಿನ 10 ವರ್ಷ ಹೆಚ್ಚು ಉತ್ತಮವಾಗಿರಲು ಬಿಡಿ. ನನಗೆ ವಯಸ್ಸಾಗುತ್ತಿದೆ. ನಾನು ಟ್ಯಾಲೆಂಟ್​ಗಳನ್ನು ಬೆಳೆಸಬೇಕಿದೆ. ನಾನು 70 ವರ್ಷಕ್ಕೆ ನಿವೃತ್ತಿ ಪಡೆಯುವ ಮೊದಲು ಟ್ಯಾಲೆಂಟ್​ಗಳಿಗೆ ವೇದಿಕೆ ಆಗಬೇಕು. ಹೀಗಾಗಿ ಹೆಚ್ಚೆಚ್ಚು ಸಿನಿಮಾ ನಿರ್ಮಾಣ ಮಾಡುತ್ತೇನೆ’ ಎಂದಿದ್ದಾರೆ ಅವರು.

‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಶೂಟ್ ಮಾಡುವಾಗ ನಿವೃತ್ತಿ ಪಡೆಯುವ ಆಲೋಚನೆ ಆಮಿರ್ ಖಾನ್​ಗೆ ಬಂದಿತ್ತು. ಆದರೆ, ಆಮಿರ್ ಖಾನ್ ಮಕ್ಕಳಾದ ಜುನೈದ್ ಖಾನ್ ಹಾಗೂ ಇರಾ ಖಾನ್ ಅವರು ಆಮಿರ್ ಖಾನ್ ಅವರನ್ನು ಮನ ಒಲಿಸಿದರು. ಅತಿ ಕಷ್ಟದ ಹೆಜ್ಜೆಗಳನ್ನು ಹಾಕುವ ಬದಲು ನಿಧಾನವಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಸೂಚನೆ ಕೊಟ್ಟರು. ಇದನ್ನು ಆಮಿರ್ ಒಪ್ಪಿದ್ದಾರೆ.

ಇದನ್ನೂ ಓದಿ: ‘ಚಿರಂಜೀವಿ ಡ್ಯಾನ್ಸ್ ಮಾಡುತ್ತಿದ್ದರೆ ನಮ್ಮ ಕಣ್ಣು ಬೇರೆಲ್ಲೂ ಹೋಗಲ್ಲ’; ಹೊಗಳಿದ ಆಮಿರ್ ಖಾನ್

ಆಮಿರ್ ಖಾನ್ ಅವರು ‘ಸಿತಾರೆ ಜಮೀನ್​ ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ‘ತಾರೇ ಜಮೀನ್ ಪರ್’ ಚಿತ್ರದ ಸೀಕ್ವೆಲ್ ಆಗಿದೆ. ಈ ಕಥೆ ಸಾಕಷ್ಟು ಇಷ್ಟ ಆಗಿ ಅವರು ಮಾಡುತ್ತಿದ್ದಾರೆ. ಇದೊಂದು ಭಾವನಾತ್ಮಕ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:20 pm, Fri, 15 November 24

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?