‘ದೊಡ್ಡ ಕುಟುಂಬ ಸೇರಿದ್ದಾರೆ’; ಐಶ್ವರ್ಯಾ ಮದುವೆ ಬಗ್ಗೆ ಸಲ್ಲು ಮಾತನಾಡಿದ್ದ ವಿಡಿಯೋ ವೈರಲ್

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳು ಬಾಲಿವುಡ್‌ನಲ್ಲಿ ಹರಡುತ್ತಿವೆ. ಈ ಮಧ್ಯೆ ಸಲ್ಮಾನ್ ಖಾನ್ ಅವರ ಹಿಂದಿನ ಸಂಬಂಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಒಂದು ಸಂದರ್ಶನದಲ್ಲಿ ಸಲ್ಮಾನ್ ಐಶ್ವರ್ಯಾ ಮತ್ತು ಅಭಿಷೇಕ್ ಅವರ ಸಂಸಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು.

‘ದೊಡ್ಡ ಕುಟುಂಬ ಸೇರಿದ್ದಾರೆ’; ಐಶ್ವರ್ಯಾ ಮದುವೆ ಬಗ್ಗೆ ಸಲ್ಲು ಮಾತನಾಡಿದ್ದ ವಿಡಿಯೋ ವೈರಲ್
ಸಲ್ಮಾನ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 16, 2024 | 8:32 AM

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಈಗ ಬಾಲಿವುಡ್​ನಲ್ಲಿ ಹಾಟ್ ಟಾಪಿಕ್ ಆಗಿದೆ. ಇವರು ವಿಚ್ಛೇದನ ಪಡೆಯುತ್ತಾರೋ ಅಥವಾ ಇಲ್ಲವೋ ಎಂಬುದು ನಂತರದ ಮಾತು. ಆದರೆ, ಅದಕ್ಕೆ ಸಂಬಂಧಿಸಿದ ಹಲವು ಸುದ್ದಿಗಳು ಹರಿದಾಡುತ್ತಲೇ ಇವೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇವುಗಳ ಮಧ್ಯೆ ಸಲ್ಮಾನ್ ಖಾನ್ ಅವರನ್ನು ಕೆಲವರು ಎಳೆದು ತಂದಿದ್ದಾರೆ. ಸಲ್ಮಾನ್ ಖಾನ್ ಜೊತೆ ಇದ್ದಿದ್ದರೆ ಐಶ್ವರ್ಯಾ ಹಾಯಾಗಿ ಇರುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಇದಕ್ಕೆ ಸಲ್ಮಾನ್ ಖಾನ್ ಅವರು ಆಡಿದ್ದ ಮಾತುಗಳೇ ಕಾರಣ.

ಇಂಡಿಯಾ ಟಿವಿ ನಡೆಸಿಕೊಡೋ ‘ಆಪ್​ ಕಿ ಅದಾಲತ್’ ಶೋಗೆ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ವೇಳೆ ಸಲ್ಮಾನ್​ಗೆ ಪ್ರಶ್ನೆ ಒಂದು ಎದುರಾಗಿತ್ತು. ‘ನೀವು ಐಶ್ವರ್ಯಾ ಅವರ ಮನೆಗೆ ತೆರಳಿ ಕಿಟಕಿ ಒಡೆದಿದ್ದರಂತೆ ಹೌದೇ’ ಎಂದು ಕೇಳಲಾಯಿತು. ಇದು ಐಶ್ವರ್ಯಾ ವಿವಾಹದ ಬಳಿಕ ನಡೆದ ಸಂದರ್ಶನ ಆಗಿತ್ತು. ಈ ಕಾರಣಕ್ಕೆ ಸಲ್ಮಾನ್ ಖಾನ್ ಈ ಬಗ್ಗೆ ಉತ್ತರಿಸಲು ನಿರಾಕರಿಸಿದ್ದರು ಮತ್ತು ಐಶ್ವರ್ಯಾ ಬಗ್ಗೆ ಅವರು ಯಾವುದೇ ಕೆಟ್ಟ ಮಾತನ್ನು ಆಡಿರಲಿಲ್ಲ.

‘ನಿಮ್ಮ ವೈಯಕ್ತಿಕ ನಿಮ್ಮದು. ಆ ಘಟನೆ ನಡೆದು ಹಲವು ವರ್ಷ ಕಳೆದುಹೋಗಿದೆ. ಐಶ್ವರ್ಯಾ ಬೇರೆಯವರ ಪತ್ನಿ. ಅವರು ಅಭಿಷೇಕ್​ನ ಮದುವೆ ಆಗಿದ್ದಾರೆ ಎಂಬ ಬಗ್ಗೆ ಖುಷಿ ಇದೆ. ಅವರು ದೊಡ್ಡ ಕುಟುಂಬ ಸೇರಿದ್ದಾರೆ’ ಎಂದು ಸಲ್ಮಾನ್ ಖಾನ್ ಅವರು ಸಂತೋಷ ವ್ಯಕ್ತಪಡಿಸಿದ್ದರು.

View this post on Instagram

A post shared by Jarp Media (@jarpmedia)

ಇದನ್ನೂ ಓದಿ: ಐಶ್ವರ್ಯಾ ಜೊತೆ ಜಗಳ ಮಾಡಿದ್ದನ್ನು ಸಲ್ಮಾನ್ ಖಾನ್ ಒಪ್ಪಿಕೊಂಡಾಗ

‘ಅವರು ಒಟ್ಟಾಗಿ ಖುಷಿಯಾಗಿದ್ದಾರೆ. ಎಕ್ಸ್ ಬಾಯ್​ಫ್ರೆಂಡ್ ಆಗಿ ಇದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿಕೊಂಡಿದ್ದರು. ಈ ಮೂಲಕ ಐಶ್ವರ್ಯಾ ಬಗ್ಗೆ ಖುಷಿ ಇದೆ ಎಂದು ಹೇಳಿದ್ದರು. ಇದೇ ಐಶ್ವರ್ಯಾ ರೈ ಅವರು ವಿವೇಕ್ ಒಬೆರಾಯ್ ಜೊತೆ ಸಂಬಂಧ ಹೊಂದಿದ್ದಕ್ಕೆ ಸಲ್ಲು ಸಿಟ್ಟಾಗಿದ್ದರು ಮತ್ತು ಸಾಕಷ್ಟು ವಿವೇಕ್​ಗೆ ಸಾಕಷ್ಟು ಹಿಂಸೆ ನೀಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ಬ್ರೇಕಪ್ ಬಳಿಕ ಒಂದೇ ವೇದಿಕೆ ಮೇಲೆ ಇವರು ಕಾಣಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!