‘ನಾನು ಮದುವೆಗೆ ರೆಡಿ’; ರಿಯಾಲಿಟಿ ಶೋನಲ್ಲಿ ಗುಡ್ ನ್ಯೂಸ್ ಕೊಟ್ಟ ಮಲೈಕಾ ಅರೋರಾ

| Updated By: ರಾಜೇಶ್ ದುಗ್ಗುಮನೆ

Updated on: Dec 29, 2023 | 11:56 AM

ನಟ ಅರ್ಬಾಜ್ ಖಾನ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಮಲೈಕಾ ಅವರು 2017ರಲ್ಲಿ ವಿಚ್ಛೇದನ ಪಡೆದರು. ಆ ಬಳಿಕ ಮಲೈಕಾ ಜೀವನದಲ್ಲಿ ಅರ್ಜುನ್ ಕಪೂರ್ ಪ್ರವೇಶಿಸಿದರು. ಅರ್ಜುನ್ ಮತ್ತು ಮಲೈಕಾ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.

‘ನಾನು ಮದುವೆಗೆ ರೆಡಿ’; ರಿಯಾಲಿಟಿ ಶೋನಲ್ಲಿ ಗುಡ್ ನ್ಯೂಸ್ ಕೊಟ್ಟ ಮಲೈಕಾ ಅರೋರಾ
ಮಲೈಕಾ
Follow us on

ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಅರೋರಾ (Malaika Arora) ಮದುವೆ ಆಗಿ ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆ ಬಳಿಕ ಇಬ್ಬರೂ ಬೇರೆ ಆದರು. ಈಗ ಅರ್ಬಾಜ್ ಖಾನ್ ಅವರು ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ. ಈ ಮೂಲಕ ಅವರು ಚರ್ಚೆಗೆ ಒಳಗಾಗಿದ್ದಾರೆ. ಅರ್ಬಾಜ್ ಖಾನ್ ಮರು ಮದುವೆಯ ನಂತರ ಮಲೈಕಾ ಎರಡನೇ ಬಾರಿ ವಿವಾಹ ಆಗುವ ಬಗ್ಗೆಯೂ ಚರ್ಚೆ ನಡೆದಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಲೈಕಾ ತಮ್ಮ ಎರಡನೇ ಮದುವೆಯ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮಲೈಕಾ ಎರಡನೇ ಮದುವೆಗೆ ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಲೈಕಾ ಅವರು ಸದ್ಯ ‘ಝಲಕ್ ದಿಖ್ಲಾ ಜಾ ಸೀಸನ್ 11’ರಲ್ಲಿ ತೀರ್ಪುಗಾರ್ತಿ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಫರಾ ಖಾನ್ ಮಲೈಕಾಗೆ ಮದುವೆಯ ಬಗ್ಗೆ ಕೇಳಿದ್ದಾರೆ. ‘ನೀವು ಸಿಂಗಲ್ ಪೇರೆಂಟ್​ನಿಂದ ಡಬಲ್ ಪೇರೆಂಟ್ ಆಗುತ್ತೀರಾ?’ ಎಂದು ಮಲೈಕಾಗೆ ಕೇಳಲಾಗಿದೆ. ‘ನಾನು ಯಾರನ್ನಾದರೂ ದತ್ತು ತೆಗೆದುಕೊಳ್ಳಬೇಕು’ ಎಂದಿದ್ದಾರೆ ಮಲೈಕಾ.

ಈ ಪ್ರಶ್ನೆ ಮಲೈಕಾಗೆ ಸರಿಯಾಗಿ ಅರ್ಥವಾಗಿಲ್ಲ ಎಂಬುದು ಅಲ್ಲಿದ್ದವರಿಗೆ ತಿಳಿಯಿತು. ‘ನೀವು ಮತ್ತೆ ಮದುವೆ ಆಗುತ್ತೀರಾ. ಇದು ಪ್ರಶ್ನೆಯ ಅರ್ಥ’ ಎಂದು ಅವರನ್ನು ಕೇಳಿದರು. ಇದಕ್ಕೆ ಮಲೈಕಾ ಅವರು ನೇರ ಉತ್ತರ ನೀಡಿದ್ದಾರೆ. ‘ಯಾರಾದರೂ ಮದುವೆ ಆಗಲು ಸಿದ್ಧರಿದ್ದರೆ ನಾನು ರೆಡಿ. ಯಾರಾದರೂ ನನ್ನ ಬಳಿ ಬಂದು ಮದುವೆ ಬಗ್ಗೆ ಪ್ರಸ್ತಾಪ ಮಾಡಬೇಕು’ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ನಟ ಅರ್ಬಾಜ್ ಖಾನ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಮಲೈಕಾ ಅವರು 2017ರಲ್ಲಿ ವಿಚ್ಛೇದನ ಪಡೆದರು. ಆ ಬಳಿಕ ಮಲೈಕಾ ಜೀವನದಲ್ಲಿ ಅರ್ಜುನ್ ಕಪೂರ್ ಪ್ರವೇಶಿಸಿದರು. ಅರ್ಜುನ್ ಮತ್ತು ಮಲೈಕಾ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ತಮ್ಮ ಸಂಬಂಧವನ್ನು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಮಲೈಕಾ ಮತ್ತು ಅರ್ಜುನ್ ವಯಸ್ಸಿನ ಅಂತರದಿಂದಾಗಿ ಟ್ರೋಲ್ ಆಗಿದ್ದರು.

ಇದನ್ನೂ ಓದಿ: ಎರಡನೇ ಮದುವೆ ಆದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್; ಹಾರೈಸಿದ ಮಲೈಕಾ ಪುತ್ರ

ಮಲೈಕಾ ಎರಡನೇ ಮದುವೆಯ ಮಾತು..

ಒಂದಲ್ಲ ಒಂದು ಕಾರಣಕ್ಕೆ ಮಲೈಕಾ ಸದಾ ಸುದ್ದಿ ಆಗುತ್ತಲೇ ಇರುತ್ತಾರೆ. ಮಲೈಕಾ ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಮಲೈಕಾ ಹಾಗೂ ಅರ್ಜುನ್ ಕಪೂರ್ ಅವರಿಗೆ ಮೊದಲಿನಿಂದಲೂ ಮದುವೆಯ ಬಗ್ಗೆ ಪ್ರಶ್ನೆ ಕೇಳುತ್ತಲೇ ಬರಲಾಗುತ್ತಿತ್ತು. ಈಗ ಅವರು ಮದುವೆ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಈಗ ಮದುವೆಗೆ ಸಿದ್ಧ ಎಂದು ಹೇಳುವ ಮೂಲಕ ಎರಡನೇ ಮದುವೆ ಆಗಲು ಅವರು ರೆಡಿ ಆದರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:56 am, Fri, 29 December 23