ಗಾಡ್ ಫಾದರ್ ಇಲ್ಲ, ಆದರೆ ಒಟಿಟಿ ಮೂಲಕ ಬದಲಾಯಿತು ಈ ಕಲಾವಿದರ ಬದುಕು

| Updated By: ರಾಜೇಶ್ ದುಗ್ಗುಮನೆ

Updated on: Mar 22, 2024 | 9:20 AM

‘ಫ್ಯಾಮಿಲಿ ಮ್ಯಾನ್’ ಸೀರಿಸ್ ಮೂಲಕ ಗಮನ ಸೆಳೆದವರು ಮನೋಜ್ ಬಾಜ್​ಪಾಯಿ. ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಅವರಿಗೆ ಇಷ್ಟು ವರ್ಷ ಚಿತ್ರರಂಗ ತಂದುಕೊಟ್ಟ ಖ್ಯಾತಿಗಿಂತ ಹೆಚ್ಚಿನ ಖ್ಯಾತಿಯನ್ನು ‘ಫ್ಯಾಮಿಲಿ ಮ್ಯಾನ್’ ನೀಡಿತ್ತು. ಅವರ ನಟನೆ ಸಾಕಷ್ಟು ಗಮನ ಸೆಳೆದಿತ್ತು. ಅವರ ಮ್ಯಾನರಿಸಂ ಸಖತ್ ಇಷ್ಟ ಆಗಿತ್ತು.

ಗಾಡ್ ಫಾದರ್ ಇಲ್ಲ, ಆದರೆ ಒಟಿಟಿ ಮೂಲಕ ಬದಲಾಯಿತು ಈ ಕಲಾವಿದರ ಬದುಕು
ಮನೋಜ್ ಹಾಗೂ ಇತರರು
Follow us on

ಬಾಲಿವುಡ್​ನಲ್ಲಿ ಮಿಂಚಬೇಕು ಎಂದರೆ ಗಾಡ್ ಫಾದರ್ ಬೇಕು ಅಥವಾ ದೊಡ್ಡ ನಿರ್ಮಾಪಕರ ಬೆಂಬಲ ಬೇಕು ಎಂಬುದು ಅನೇಕರ ನಂಬಿಕೆ. ಒಂದೊಮ್ಮೆ ಗಾಡ್ ಫಾದರೆ ಇಲ್ಲದೆ ಬಾಲಿವುಡ್​ನಲ್ಲಿ ನುಗ್ಗಲು ಪ್ರಯತ್ನಿಸಿ ವಿಫಲವಾದವರು ಅನೇಕರು ಇದ್ದಾರೆ. ಆದರೆ, ಕೆಲವು ಕಲಾವಿದರು ಯಾವುದೇ ಹಿನ್ನೆಲೆ ಇಲ್ಲದೆ ಒಟಿಟಿ ಮೂಲಕ ಬಣ್ಣದ ಲೋಕದಲ್ಲಿ ಮಿಂಚಿದರು. ಈ ಸಾಲಿನಲ್ಲಿ ಮನೋಜ್ ಬಾಜ್​ಪಾಯಿ (Manoj Bajpayee), ಜಿತೇಂದ್ರ ಕುಮಾರ್ ಸೇರಿ ಅನೇಕ ಸ್ಟಾರ್​ಗಳಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.

ಪಂಕಜ್ ತ್ರಿಪಾಠಿ

ಪಂಕಜ್ ತ್ರಿಪಾಠಿ ಅವರು ‘ಮಿರ್ಜಾಪುರ್’ ಸರಣಿ ಮೂಲಕ ದೊಡ್ಡ ಮೊತ್ತದ ಖ್ಯಾತಿ ಪಡೆದರು. ಅವರಿಗೆ ಯಾವುದೇ ಹಿನ್ನೆಲೆ ಇಲ್ಲ. ಅವರು ಬಾಲಿವುಡ್​ ಸಿನಿಮಾಗಳ ಮೂಲಕವೂ ಗುರುತಿಸಿಕೊಳ್ಳುತ್ತಿದ್ದಾರೆ.  ‘ಮಿರ್ಜಾಪುರ್ 3’ ಸೀರಿಸ್​ನಲ್ಲಿ ಅವರು ನಟಿಸಿದ್ದಾರೆ.

ಅಲಿ ಫಜಲ್

ಅಲಿ ಫಜಲ್​ ಅವರಿಗೂ ‘ಮಿರ್ಜಾಪುರ್’ ಸೀರಿಸ್ ಮೂಲಕ ಸಖತ್ ಫೇಮಸ್ ಆದರು. ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳೋಕೆ ಸಾಕಷ್ಟು ಕಷ್ಟಪಟ್ಟರು. ಈಗ ಅವರಿಗೆ ವೆಬ್ ಸೀರಿಸ್ ಖ್ಯಾತಿ ತಂದುಕೊಟ್ಟಿದೆ. ಅವರು ಗುಡ್ಡು ಪಂಡಿತ್ ಆಗಿ ಗುರುತಿಸಿಕೊಂಡಿದ್ದಾರೆ.

ಮನೋಜ್ ಬಾಜ್​ಪಾಯಿ

‘ಫ್ಯಾಮಿಲಿ ಮ್ಯಾನ್’ ಸೀರಿಸ್ ಮೂಲಕ ಗಮನ ಸೆಳೆದವರು ಮನೋಜ್ ಬಾಜ್​ಪಾಯಿ. ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಅವರಿಗೆ ಇಷ್ಟು ವರ್ಷ ಚಿತ್ರರಂಗ ತಂದುಕೊಟ್ಟ ಖ್ಯಾತಿಗಿಂತ ಹೆಚ್ಚಿನ ಖ್ಯಾತಿಯನ್ನು ‘ಫ್ಯಾಮಿಲಿ ಮ್ಯಾನ್’ ನೀಡಿತ್ತು. ಅವರ ನಟನೆ ಸಾಕಷ್ಟು ಗಮನ ಸೆಳೆದಿತ್ತು. ಅವರ ಮ್ಯಾನರಿಸಂ ಸಖತ್ ಇಷ್ಟ ಆಗಿತ್ತು. ಅವರು ‘ದಿ ಫ್ಯಾಮಿಲಿ ಮ್ಯಾನ್ 3’ ಸೀರಿಸ್​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಶೂಟಿಂಗ್ ಇನ್ನೂ ಆರಂಭ ಆಗಿಲ್ಲ ಎನ್ನಲಾಗಿದೆ.

ವಿಕ್ರಾಂತ್ ಮಾಸ್ಸಿ

ವಿಕ್ರಾಂತ್ ಮಾಸ್ಸಿ ಅವರು ಸಿನಿಮಾಗಿಂತ ಒಟಿಟಿ ಸೀರೀಸ್​ಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಅವರಿಗೆ ಯಾವುದೇ ಇಂಡಸ್ಟ್ರಿ ಕನೆಕ್ಷನ್ ಇಲ್ಲ. ಅವರ ಸಕಸ್ಸ್ ಅನೇಕರಿಗೆ ಮಾದರಿ. ಅವರ ನಟನೆಯ ‘12th ಫೇಲ್’ ಸಿನಿಮಾ ಸೂಪರ್ ಹಿಟ್ ಆಯಿತು.

ಜಿತೇಂದ್ರ ಕುಮಾರ್

‘ಪಂಚಾಯತ್’ ಸೀರಿಸ್ ಮೂಲಕ ಜಿತೇಂದ್ರ ಕುಮಾರ್ ಭರ್ಜರಿ ಗಮನ ಸೆಳೆದರು. ಅವರು ಪಂಚಾಯತ್ ಕಾರ್ಯದರ್ಶಿ ಆಗಿ ಭರ್ಜರಿ ಫೇಮಸ್ ಆಗಿದ್ದಾರೆ. ಅವರಿಗೆ ಬಾಲಿವುಡ್​ನಲ್ಲಿ ಯಾವುದೇ ಗಾಡ್ ಫಾದರ್ ಇಲ್ಲ.  ಅವರ ನಟನೆಯ ‘ಪಂಚಾಯತ್ 3’ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಾಣಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಅಮಿತ್ ಸಾಧ್

ಅಮಿತ್ ಸಾಧ್ ಅವರಿಗೆ ಒಟಿಟಿ ಜಗತ್ತಲ್ಲಿ ಸಖತ್ ಬೇಡಿಕೆ ಇದೆ. ಹಲವು ಸೂಪರ್ ಹಿಟ್ ಸೀರಿಸ್​ಗಳಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಇಂಡಸ್ಟ್ರಿಯಲ್ಲಿ ಯಾವುದೇ ಗಾಡ್ ಫಾದರ್ ಇಲ್ಲ. ಅವರು ದೊಡ್ಡ ಮಟ್ಟದಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಜೈದೀಪ್ ಅಹ್ಲಾವತ್

‘ಪಾತಾಳ್ ಲೋಕ್’ ಸೀರಿಸ್ ಮೂಲಕ ಜೈದೀಪ್ ಅಹ್ಲಾವತ್ ಅವರ ಖ್ಯಾತಿ ಸಖತ್ ಹೆಚ್ಚಿದೆ. ಈ ಸೀರಿಸ್​ನಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ರಿಲೀಸ್ ಆದ ‘ಹಡ್ಡಿ’ ಚಿತ್ರ; ಮಂಗಳಮುಖಿ ಪಾತ್ರದಲ್ಲಿ ಪವರ್​ಫುಲ್ ನಟನೆ ತೋರಿದ ನವಾಜುದ್ದೀನ್ ಸಿದ್ಧಿಕಿ

ನವಾಜುದ್ದೀನ್ ಸಿದ್ದಿಕಿ

‘ಸೇಕ್ರೆಡ್ ಗೇಮ್ಸ್’ ಮೂಲಕ ನವಾಜುದ್ದೀನ್ ಸಿದ್ದಿಕಿ ಅವರ ಖ್ಯಾತಿ ಸಾಕಷ್ಟು ಹೆಚ್ಚಾಯಿತು. ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಂಡ ಈ ಸೀರಿಸ್ ಮೂಲಕ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಭಿನ್ನ ನಟನೆಯ ಮೂಲಕ ಅವರು ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ