ಜೀ5ನಲ್ಲಿ ರಿಲೀಸ್ ಆದ ‘ಹಡ್ಡಿ’ ಚಿತ್ರ; ಮಂಗಳಮುಖಿ ಪಾತ್ರದಲ್ಲಿ ಪವರ್​ಫುಲ್ ನಟನೆ ತೋರಿದ ನವಾಜುದ್ದೀನ್ ಸಿದ್ಧಿಕಿ

‘ಹಡ್ಡಿ’ ಚಿತ್ರವನ್ನು ಅಕ್ಷತ್ ಅಜಯ್ ಶರ್ಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 7ರಂದು ನೇರವಾಗಿ ಜೀ5 ಒಟಿಟಿ ಮೂಲಕ ರಿಲೀಸ್ ಆಗಿದೆ. ನವಾಜುದ್ದೀನ್ ಸಿದ್ಧಿಕಿ, ಅನುರಾಗ್ ಕಶ್ಯಪ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಜೀ5ನಲ್ಲಿ ರಿಲೀಸ್ ಆದ ‘ಹಡ್ಡಿ’ ಚಿತ್ರ; ಮಂಗಳಮುಖಿ ಪಾತ್ರದಲ್ಲಿ ಪವರ್​ಫುಲ್ ನಟನೆ ತೋರಿದ ನವಾಜುದ್ದೀನ್ ಸಿದ್ಧಿಕಿ
ನವಾಜುದ್ದೀನ್ ಸಿದ್ಧಿಕಿ
Follow us
ರಾಜೇಶ್ ದುಗ್ಗುಮನೆ
|

Updated on: Sep 08, 2023 | 1:02 PM

ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರು ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳ ಮೇಲಾಗಿದೆ. ಅವರು ಹಲವು ರೀತಿಯ ಭಿನ್ನ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ತಾವು ಹೀರೋ ಎಂದು ಅವರು ಎಂದಿಗೂ ಬೀಗಿಲ್ಲ. ಯಾವ ಪಾತ್ರವಾದರೂ ಸೈ ಎಂದು ನಟಿಸಿ ತೋರಿಸಿದ್ದಾರೆ. ಪ್ರಯೋಗಾತ್ಮಕ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆಯ ‘ಹಡ್ಡಿ’ (Haddi Movie) ಸಿನಿಮಾ ಜೀ5 ಒಟಿಟಿ ಮೂಲಕ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಮಂಗಳಮುಖಿಯ ಸೇಡಿನ ಕಥೆಯನ್ನು ಈ ಚಿತ್ರ ಹೊಂದಿದೆ.

‘ಹಡ್ಡಿ’ ಚಿತ್ರವನ್ನು ಅಕ್ಷತ್ ಅಜಯ್ ಶರ್ಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 7ರಂದು ನೇರವಾಗಿ ಜೀ5 ಒಟಿಟಿ ಮೂಲಕ ರಿಲೀಸ್ ಆಗಿದೆ. ನವಾಜುದ್ದೀನ್ ಸಿದ್ಧಿಕಿ, ಅನುರಾಗ್ ಕಶ್ಯಪ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನವಾಜುದ್ದೀನ್ ಅವರ ಪಾತ್ರದ ಹೆಸರು ಹಡ್ಡಿ ಎಂಬುದಾಗಿದೆ. ಈ ಸಿನಿಮಾ ರಿವೇಂಜ್ ಡ್ರಾಮಾ ಕಥೆ ಹೊಂದಿದೆ. ಜೀ ಸ್ಟುಡಿಯೋಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

ಒಟಿಟಿ ವ್ಯಾಪ್ತಿ ದಿನ ಕಳೆದಂತೆ ಹೆಚ್ಚುತ್ತಿದೆ. ಕೆಲವು ಚಿತ್ರಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡಿದರೆ ಹೆಚ್ಚು ಜನರನ್ನು ತಲುಪುತ್ತದೆ. ಈ ಕಾರಣದಿಂದಲೇ ‘ಹಡ್ಡಿ’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ‘ಹಡ್ಡಿ’ ಸಿನಿಮಾದ ಪೋಸ್ಟರ್ ರಿಲೀಸ್ ಆದಾಗಿನಿಂದಲೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿತ್ತು. ಆ ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ನವಾಜುದ್ದೀನ್ ಸಿದ್ಧಿಕಿ ಮಾಜಿ ಪತ್ನಿ ರೆಡಿ; ಬಾಯ್​ಫ್ರೆಂಡ್ ವಿಚಾರದಲ್ಲಿ ಸಿಗಲಿದೆ ಸ್ಪಷ್ಟನೆ?

ನವಾಜುದ್ದೀನ್ ಅವರ ನಟನೆಯನ್ನು ಅನೇಕರು ಶ್ಲಾಘಿಸಿದ್ದಾರೆ. ‘ನವಾಜುದ್ದೀನ್​ ಅವರು ಓರ್ವ ಅದ್ಭುತ ನಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರಿಗೆ ಒಳ್ಳೆಯ ಸ್ಕ್ರಿಪ್ಟ್ ಕೊಟ್ಟರೆ ತಾವು ಏನು ಎಂಬುದನ್ನು ಸಾಬೀತು ಮಾಡುತ್ತಾರೆ’ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ