ನಟ ಗೋವಿಂದ ಮೊಣಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಟೋಬರ್ 1ರ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗೋವಿಂದ ಕೋಲ್ಕತ್ತಾಗೆ ಹೋಗಲು ತಯಾರಿ ನಡೆಸಿದ್ದರು. ಇದೇ ವೇಳೆ ನಟ ತಮ್ಮ ಪರವಾನಗಿ ಹೊಂದಿರುವ ರಿವಾಲ್ವರ್ ಅನ್ನು ಹೊತ್ತೊಯ್ಯುತ್ತಿದ್ದಾಗ ರಿವಾಲ್ವರ್ ಕೈಯಿಂದ ಜಾರಿ ಬಿದ್ದು ಗುಂಡು ಅವರ ಕಾಲಿಗೆ ತಗುಲಿದೆ. ಗುಂಡು ತಗುಲಿದ ತಕ್ಷಣ ನಟನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಗೋವಿಂದ ಅವರ ಕಾಲಿನಿಂದ ಗುಂಡನ್ನು ಹೊರತೆಗೆದಿದ್ದು, ಗೋವಿಂದ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಗೋವಿಂದ ಅವರ ಅಭಿಮಾನಿ ಬಳಗ ದೊಡ್ಡದಿದೆ. ಇದರಿಂದಾಗಿ ಅಭಿಮಾನಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಗೋವಿಂದ ಮಾತ್ರ ತಮ್ಮ ರಕ್ಷಣೆಗಾಗಿ ಗನ್ ಹೊಂದಿರುವ ಸ್ಟಾರ್ ಅಲ್ಲ. ಅನೇಕ ಸೆಲೆಬ್ರಿಟಿಗಳು ಸಹ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಅಂತಹ ಸೆಲೆಬ್ರಿಟಿಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.
ನಟ ಸನ್ನಿ ಡಿಯೋಲ್ – ವರದಿಯ ಪ್ರಕಾರ ನಟ ಸನ್ನಿ ಡಿಯೋಲ್ ರಿವಾಲ್ವರ್ ಹೊಂದಿದ್ದಾರೆ. ‘ಸಿಂಗ್ ಸಾಹಬ್’ ಸಿನಿಮಾದ ಶೂಟಿಂಗ್ ವೇಳೆಯೂ ಈ ನಟ ರಿವಾಲ್ವರ್ ಬಳಸಿದ್ದರು. ಸನ್ನಿ ಯಾವಾಗಲೂ ಸ್ವಯಂ ರಕ್ಷಣೆಗಾಗಿ ರಿವಾಲ್ವರ್ ಅನ್ನು ಒಯ್ಯುತ್ತಾರೆ.
ಇದನ್ನೂ ಓದಿ:58ನೇ ವಯಸ್ಸಿನಲ್ಲೂ ಹೇಗಿದೆ ನೋಡಿ ಸಲ್ಮಾನ್ ಖಾನ್ ಫಿಟ್ನೆಸ್; ಇಲ್ಲಿದೆ ಫೋಟೋ
ನಟ ಸಲ್ಮಾನ್ ಖಾನ್‌ಗೂ ನಿರಂತರ ಕೊಲೆ ಬೆದರಿಕೆಗಳು ಬರುತ್ತಿವೆ. ಹಾಗಾಗಿ ನಟ ರಿವಾಲ್ವರ್ ಒಯ್ಯಲು ಲೈಸನ್ಸ್ ಕೂಡ ಪಡೆದಿದ್ದಾರೆ. ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಹಲವು ಬೆದರಿಕೆಗಳು ಬಂದಿದ್ದವು. ನಟನ ಕುಟುಂಬಕ್ಕೂ ಬೆದರಿಕೆಗಳು ಬರುತ್ತವೆ.
ನಟಿ ಪೂನಂ ಧಿಲ್ಲೋನ್ ಕೂಡ ತಮ್ಮ ರಕ್ಷಣೆಗೆ ಅಸ್ತ್ರ ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾಜಿ ಫೆಮಿನಾ ಮಿಸ್ ಇಂಡಿಯಾ ಮತ್ತು ನಟಿ ಪೂನಂ ಧಿಲ್ಲೋನ್ ಅವರು ಭದ್ರತೆಗಾಗಿ ತಮ್ಮೊಂದಿಗೆ ಬಂದೂಕನ್ನು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಇದನ್ನು ಬಹಿರಂಗಪಡಿಸಿದ್ದರು.
ಅಮಿತಾಭ್ ಬಚ್ಚನ್ ಕೂಡ ರಿವಾಲ್ವರ್ ಹೊಂದಿದ್ದಾರೆ. ನಿಜ ಜೀವನದಲ್ಲೂ ಅವರ ಬಳಿ ಲೈಸೆನ್ಸ್ ಇರುವ ಆಯುಧವಿದೆ. ವರದಿಗಳ ಪ್ರಕಾರ, ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯ ನಂತರ ಅಮಿತಾಭ್ ಈ ಗನ್ ಖರೀದಿಸಿದರು. ಅವರ ಬಳಿ ರಿವಾಲ್ವರ್ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ