ಹಣ ಪಡೆದು ಕೈಕೊಟ್ಟರೇ ತೃಪ್ತಿ ದಿಮ್ರಿ, ಸ್ಪಷ್ಟನೆ ಕೊಟ್ಟ ತಂಡ

‘ಅನಿಮಲ್’ ಸಿನಿಮಾದ ಬಳಿಕ ತೃಪ್ತಿ ದಿಮ್ರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ತೃಪ್ತಿಗೆ ಈ ಅಚಾನಕ್ ಜನಪ್ರಿಯತೆ ತಲೆಗೇರಿದೆಯೇ ಎಂಬ ಅನುಮಾನ ಮೂಡಿದೆ. ಹಣ ಪಡೆದು ಸಹ ತಮ್ಮದೇ ಸಿನಿಮಾದ ಪ್ರಚಾರಕ್ಕೆ ಗೈರಾಗಿದ್ದಾರಂತೆ ನಟಿ.

ಹಣ ಪಡೆದು ಕೈಕೊಟ್ಟರೇ ತೃಪ್ತಿ ದಿಮ್ರಿ, ಸ್ಪಷ್ಟನೆ ಕೊಟ್ಟ ತಂಡ
ತೃಪ್ತಿ ದಿಮ್ರಿ
Follow us
|

Updated on: Oct 02, 2024 | 5:11 PM

‘ಅಮಿಮಲ್’ ಸಿನಿಮಾದಲ್ಲಿ ಮಾಡಿದ ಸಣ್ಣ ಪಾತ್ರ ತೃಪ್ತಿ ದಿಮ್ರಿಗೆ ಸಖತ್ ಜನಪ್ರಿಯತೆ ಮತ್ತು ಅವಕಾಶಗಳನ್ನು ತಂದುಕೊಟ್ಟಿದೆ. ‘ಅನಿಮಲ್’ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ತೃಪ್ತಿ ದಿಮ್ರಿ ಕಾಣಿಸಿಕೊಂಡಿದ್ದರು. ಆ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣರನ್ನು ಸಹ ಮೀರಿಸಿ ಜನಪ್ರಿಯಗೊಂಡರು ತೃಪ್ತಿ. ‘ಅನಿಮಲ್’ ಬಳಿಕ ಸಾಲು-ಸಾಲು ಸಿನಿಮಾ ಅವಕಾಶಗಳು ತೃಪ್ತಿಯನ್ನು ಅರಸಿ ಬಂದಿವೆ. ಆದರೆ ಇದೀಗ ತೃಪ್ತಿಗೆ ಆಗಲೆ ಯಶಸ್ಸು ನೆತ್ತಿಗೇರಿತೆ ಎಂದು ಅಭಿಮಾನಿಗಳೇ ಮಾತನಾಡಿಕೊಳ್ಳುವಂಥಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ನಟಿ ತೃಪ್ತಿ, ಇತ್ತೀಚೆಗಷ್ಟೆ ‘ವಿಕ್ಕಿ ವಿದ್ಯಾ ಕಾ ವೋ ವಾಲ ವೀಡಿಯೋ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ರಾಜ್​ಕುಮಾರ್ ರಾವ್ ನಾಯಕ. ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೃಪ್ತಿ ಮತ್ತು ರಾಜ್​ಕುಮಾರ್ ರಾವ್ ನಿರತರಾಗಿದ್ದಾರೆ. ಆದರೆ ಇತ್ತೀಚೆಗೆ ಹಠಾತ್ತನೇ ಪ್ರಚಾರ ಕಾರ್ಯಕ್ರಮದಿಂದ ತೃಪ್ತಿ ದಿಮ್ರಿ ಮರೆಯಾದರು. ಇದೇ ಕಾರಣಕ್ಕೆ ಸಿಟ್ಟಾಗಿದ್ದ ಚಿತ್ರತಂಡ ಜೈಪುರದಲ್ಲಿ ನಡೆದ ಸಿನಿಮಾ ಇವೆಂಟ್​ನಲ್ಲಿ ತೃಪ್ತಿಯ ಯಾವ ಚಿತ್ರಗಳನ್ನೂ ಸಹ ಪ್ರದರ್ಶಿಸಿರಲಿಲ್ಲ, ಸಿನಿಮಾದ ಪೋಸ್ಟರ್​ಗಳನ್ನೇ ಬದಲಾಯಿಸಿ ಕೇವಲ ರಾಜ್​ಕುಮಾರ್ ರಾವ್ ಚಿತ್ರಗಳನ್ನಷ್ಟೆ ಪ್ರದರ್ಶಿಸಿತ್ತು.

ಅಲ್ಲದೆ, ಚಿತ್ರತಂಡ ಹೇಳಿಕೊಂಡಿರುವಂತೆ ಸಿನಿಮಾದ ಪ್ರಚಾರಕ್ಕಾಗಿ 5.50 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಗಿಯೂ ಸಹ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲವಂತೆ. ಚಿತ್ರತಂಡ ಮನವಿ ಮಾಡಿಕೊಂಡಿದ್ದರೂ ಸಹ ತೃಪ್ತಿ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲವಂತೆ. ಇದೇ ಕಾರಣಕ್ಕೆ ಸಿಟ್ಟಾಗಿರುವ ಚಿತ್ರತಂಡ, ಸಿನಿಮಾದ ಪೋಸ್ಟರ್​ಗಳಿಂದ ತೃಪ್ತಿ ದಿಮ್ರಿಯ ಹೆಸರು ಮತ್ತು ಚಿತ್ರವನ್ನು ತೆಗೆದು ಹಾಕಿದೆ.

ಇದನ್ನೂ ಓದಿ:ಮುಜುಗರ ಆಗುವಂತಹ ಡ್ಯಾನ್ಸ್ ಕಂಡು ತೃಪ್ತಿ ದಿಮ್ರಿ ಅಭಿಮಾನಿಗಳು ಗರಂ

ಆದರೆ ತೃಪ್ತಿ ದಿಮ್ರಿಯ ತಂಡ ಇದಕ್ಕೆ ಸ್ಪಷ್ಟನೆ ನೀಡಿದ್ದು, ‘ವಿಕ್ಕಿ, ವಿದ್ಯಾಕ ವೋ ವಾಲಾ ವಿಡಿಯೋ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ತೃಪ್ತಿ ಹಾಜರಾಗಿದ್ದಾರೆ. ಅವರು ವೃತ್ತಿಪರಪತೆಯಿಂದಲೇ ನಡೆದುಕೊಂಡಿದ್ದಾರೆ. ಈ ವರೆಗೂ ನಡೆದಿರುವ ಎಲ್ಲ ಪ್ರಚಾರ ಕಾರ್ಯಕ್ರಮಗಳಿಗೂ ಅವರು ಹಾಜರಾಗಿದ್ದಾರೆ. ಆದರೆ ತೃಪ್ತಿ, ಪ್ರಚಾರ ಕಾರ್ಯಕ್ರಮದ ಹೊರತಾಗಿ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಅಥವಾ ಪ್ರಚಾರದ ಹೊರತಾಗಿ ಮಾಡಲಾಗುವ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಒಪ್ಪಿಕೊಂಡಿರಲಿಲ್ಲ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಾವುದೇ ಹೆಚ್ಚುವರಿ ಶುಲ್ಕವನ್ನು ಸಹ ತೃಪ್ತಿ ತೆಗೆದುಕೊಂಡಿರಲಿಲ್ಲ’ ಎಂದಿದ್ದಾರೆ.

ತೃಪ್ತಿ ದಿಮ್ರಿ ಪ್ರಸ್ತುತ, ‘ವಿಕ್ಕಿ, ವಿದ್ಯಾಕ ವೋ ವಾಲಾ ವಿಡಿಯೋ’ ಸಿನಿಮಾದ ಹೊರತಾಗಿ ‘ಭೂಲ್ ಭುಲಯ್ಯ 3’ ಹಾಗೂ ‘ದಡಕ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ದಕ್ಷಿಣದ ಒಂದು ಸಿನಿಮಾವನ್ನು ಸಹ ತೃಪ್ತಿ ದಿಮ್ರಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ಪುಷ್ಪ 2’ ಸಿನಿಮಾನಲ್ಲಿ ಐಟಂ ಹಾಡಿನಲ್ಲಿಯೂ ಸಹ ತೃಪ್ತಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು