ಮೂಢನಂಬಿಕೆಯಿಂದ ಬಾಲಿವುಡ್​ನಲ್ಲಿ ಬೇಡಿಕೆ ಕಳೆದುಕೊಂಡ ನಟ ಗೋವಿಂದ?

ಗೋವಿಂದ ಅವರು ತಮ್ಮ ವೃತ್ತಿಜೀವನವನ್ನು ‘ಇಲ್ಜಾಮ್' ಚಿತ್ರದೊಂದಿಗೆ ಪ್ರಾರಂಭಿಸಿದರು. ಅದು ಬಾಕ್ಸ್​ ಆಫೀಸ್​ನಲ್ಲಿ ಸೂಪರ್​ ಹಿಟ್ ಆಯಿತು. ಆ ನಂತರ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. 90ರ ದಶಕವು ಗೋವಿಂದ್​ಗೆ ಗೋಲ್ಡನ್ ಎರಾ. ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.

ಮೂಢನಂಬಿಕೆಯಿಂದ ಬಾಲಿವುಡ್​ನಲ್ಲಿ ಬೇಡಿಕೆ ಕಳೆದುಕೊಂಡ ನಟ ಗೋವಿಂದ?
ಗೋವಿಂದ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 03, 2024 | 7:58 AM

ಬಾಲಿವುಡ್‌ನ ಹೀರೋ ಗೋವಿಂದ ವೃತ್ತಿ ಜೀವನದಲ್ಲಿ ಅನೇಕ ಹಿಟ್‌ಗಳನ್ನು ನೀಡಿದ್ದಾರೆ. ಅವರ ಹೆಸರು ಹಿಂದಿ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಈ ಮೊದಲು ನಟನೆಯಿಂದಲೇ ಜನರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದರು. ಅವರ ಡ್ಯಾನ್ಸ್ ಇತರರಿಗಿಂತ ಭಿನ್ನವಾಗಿತ್ತು. ಇಂದಿಗೂ ಜನರು ಗೋವಿಂದನ ಹಾಡುಗಳು ಮತ್ತು ಅವರ ಡ್ಯಾನ್ಸ್​ನ ಇಷ್ಟಪಡುತ್ತಾರೆ. ಅವರು ಚಿತ್ರರಂಗದಿಂದ ದೂರವಾಗಲು ಕಾರಣವಾದ ವಿಚಾರ ಏನು? ಇಲ್ಲಿದೆ ನೋಡಿ ಮಾಹಿತಿ.

ಗೋವಿಂದ ಮುಂಬೈನಲ್ಲಿ ಜನಿಸಿದರು. ಅವರು ಪಂಜಾಬಿ ಕುಟುಂಬದಿಂದ ಬಂದವರು. ಇವರ ತಂದೆಯ ಹೆಸರು ಅರುಣ್ ಕುಮಾರ್ ಅಹುಜಾ ಮತ್ತು ತಾಯಿಯ ಹೆಸರು ನಿರ್ಮಲಾ ದೇವಿ. ಅವರು ಮುಂಬೈನಲ್ಲೇ ಓದಿದರು. ನಂತರ ಅವರು ವಾಣಿಜ್ಯ ಪದವಿಯನ್ನು ಪಡೆದರು. ಸುನೀತಾ ಅಹುಜಾ ಅವರನ್ನು ಗೋವಿಂದ ವಿವಾಹವಾದರು. ಈ ದಂಪತಿಗೆ ನರ್ಮದಾ ಅಹುಜಾ ಮತ್ತು ಯಶವರ್ಧನ್ ಅಹುಜಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಗೋವಿಂದ ಅವರು ತಮ್ಮ ವೃತ್ತಿಜೀವನವನ್ನು ‘ಇಲ್ಜಾಮ್’ ಚಿತ್ರದೊಂದಿಗೆ ಪ್ರಾರಂಭಿಸಿದರು. ಅದು ಬಾಕ್ಸ್​ ಆಫೀಸ್​ನಲ್ಲಿ ಸೂಪರ್​ ಹಿಟ್ ಆಯಿತು. ಆ ನಂತರ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. 90ರ ದಶಕವು ಗೋವಿಂದ್​ಗೆ ಗೋಲ್ಡನ್ ಎರಾ. ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಅವರ ನಟನೆಯ ‘ಹೀರೋ ನಂಬರ್ ಒನ್’, ‘ಕೂಲಿ ನಂಬರ್ ಒನ್’, ‘ದುಲ್ಹೆ ರಾಜ’, ‘ಬಡೇ ಮಿಯಾ ಛೋಟೆ ಮಿಯಾ, ‘ಸ್ವರ್ಗ’, ‘ನಸೀಬ್’ ಮುಂತಾದ ಅನೇಕ ಸೂಪರ್‌ಹಿಟ್ ಆದವು. ಗೋವಿಂದ ಕೊನೆಯದಾಗಿ 2019ರಲ್ಲಿ ‘ರಂಗಿಲಾ ರಾಜ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಗೋವಿಂದ ಅವರಿಗೆ ಎಷ್ಟು ಬೇಡಿಕೆಯಿತ್ತು ಎಂದರೆ ಅವರು ಒಂದೇ ಬಾರಿಗೆ 5-6 ಚಿತ್ರಗಳಿಗೆ ಸಹಿ ಹಾಕುತ್ತಿದ್ದರು. ಹಾಗೆ ಮಾಡಿದ ಮೊದಲ ಸ್ಟಾರ್ ಗೋವಿಂದ. ನಟನಿಗೆ ತುಂಬಾ ಕೆಲಸ ಇತ್ತು, ಅವರು ದಿನಕ್ಕೆ ಹಲವು ಪಾಳಿಗಳಲ್ಲಿ ಶೂಟಿಂಗ್ ಮಾಡುತ್ತಿದ್ದರು. ಗೋವಿಂದ 14 ವರ್ಷಗಳ ಕಾಲ ಬಾಲಿವುಡ್​ಅನ್ನು ಆಳಿದರು. ಹಿಂದಿ ಚಿತ್ರರಂಗಕ್ಕೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಒಟ್ಟಿಗೆ ಹಲವಾರು ಚಿತ್ರಗಳಿಗೆ ಸಹಿ ಮಾಡಿದ ನಂತರ, ಅವರು ಸೆಟ್‌ಗಳಿಗೆ ಗಂಟೆಗಟ್ಟಲೆ ತಡವಾಗಿ ಬರಲು ಪ್ರಾರಂಭಿಸಿದರು. ಇಷ್ಟೇ ಅಲ್ಲ, ಗೋವಿಂದ ಅವರು ಚಿತ್ರದಲ್ಲಿ ನಾಯಕನಾಗಿ ಮಾತ್ರ ನಟಿಸುವುದಾಗಿ ನಿರ್ಮಾಪಕರಿಂದ ಬೇಡಿಕೆಯಿಡಲು ಪ್ರಾರಂಭಿಸಿದರು.

ಈ ಬಗ್ಗೆ ನಿರ್ಮಾಪಕ ಪಹ್ಲಾಜ್ ನಿಹಲಾನಿ ಅವರು ಮಾತನಾಡಿದ್ದರು. ‘ಗೋವಿಂದ ಅವರ ಜೊತೆ ಕೆಲಸ ಮಾಡುವುದು ಯಾವಾಗಲೂ ಅನಿಶ್ಚಿತವಾಗಿತ್ತು. ಎರಡನೆ ಯೋಚನೆಯಿಲ್ಲದೆ ಹತ್ತಾರು ಬಿ-ಸಿ ದರ್ಜೆಯ ಚಿತ್ರಗಳಿಗೆ ಸಹಿ ಹಾಕಿದ್ದರು. ಅವರು ಏಕಕಾಲದಲ್ಲಿ 5-6 ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ದಿನ ಸೆಟ್​ಗೆ ತಡವಾಗಿ ಬರುತ್ತಿದ್ದರು ಮತ್ತು ಸುಳ್ಳು ಹೇಳುತ್ತಿದ್ದರು. ಗೋವಿಂದನು ಹಣಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದಾಗಿ ಹೇಳುತ್ತಿದ್ದರು. ಇದು ಅಪಾಯಕಾರಿ ಎಂದು ಹೇಳಿದ್ದೆ’ ಎಂದಿದ್ದರು ಅವರು.

ಇದನ್ನೂ ಓದಿ: ಗೋವಿಂದ ಹೇಳಿದ ಕಥೆ ನಂಬುತ್ತಿಲ್ಲ ಮುಂಬೈ ಪೊಲೀಸರು; ಗುಂಡೇಟು ಪ್ರಕರಣಕ್ಕೆ ಟ್ವಿಸ್ಟ್​

‘ಗೋವಿಂದ ಕ್ರಮೇಣ ಮೂಢನಂಬಿಕೆ ಕಡೆ ಜಾರಿದರು. ಯಾರನ್ನು ಬೇಕಾದರೂ ಸುಲಭವಾಗಿ ನಂಬುತ್ತಿದ್ದರು. ಮೂಢನಂಬಿಕೆಯ ಆಧಾರದ ಮೇಲೆ ಬಟ್ಟೆ ಬದಲಾಯಿಸಲು ಜನರನ್ನು ಕೇಳುತ್ತಿದ್ದರು. ಇವೆಲ್ಲವೂ ಗೋವಿಂದನ ವೃತ್ತಿಜೀವನವನ್ನು ಕ್ರಮೇಣ ಹಾಳುಮಾಡಿತು’ ಎಂದಿದ್ದರು ಪಹ್ಲಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ