‘ಪುಷ್ಪ ನಾನು ಮಾಡಬೇಕಿತ್ತು, ಅಲ್ಲು ಅರ್ಜುನ್ ಸರ್ ಗ್ರೇಟ್ ಬಿಡಿ’: ಶಾರುಖ್ ಖಾನ್

Shah Rukh Khan: ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಬಗ್ಗೆ ನಟ ಶಾರುಖ್ ಖಾನ್ ಮಾತನಾಡಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು, ಆದರೆ ಅಲ್ಲು ಅರ್ಜುನ್ ಸ್ವಾಗ್ ಅನ್ನು ನಾನು ಮ್ಯಾಚ್ ಮಾಡಲಾಗುತ್ತಿರಲಿಲ್ಲ ಎಂದಿದ್ದಾರೆ.

‘ಪುಷ್ಪ ನಾನು ಮಾಡಬೇಕಿತ್ತು, ಅಲ್ಲು ಅರ್ಜುನ್ ಸರ್ ಗ್ರೇಟ್ ಬಿಡಿ’: ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 03, 2024 | 7:11 PM

ಶಾರುಖ್ ಖಾನ್ ಅವರು ಯಾವುದೇ ಸಿನಿಮಾ ಮಾಡಿದರೂ ಫ್ಯಾನ್ಸ್ ಗಮನ ಸೆಳೆಯುತ್ತದೆ. ಆ ಚಿತ್ರ ಹಿಟ್ ಆಗುತ್ತದೆಯೋ ಅಥವಾ ಬಿಡುತ್ತದೆಯೋ ಅದು ಎರಡನೇ ಮಾತು. ಆದರೆ, ಆ ಬಗ್ಗೆ ಚರ್ಚೆ ಮಾತ್ರ ಆಗುತ್ತದೆ. ಅವರು ಇತ್ತೀಚೆಗೆ ಐಫಾ ಅವಾರ್ಡ್ ಕಾರ್ಯಕ್ರಮನ ವಿಕ್ಕಿ ಕೌಶಲ್ ಜೊತೆ ಸೇರಿ ಹೋಸ್ಟ್ ಮಾಡಿದ್ದಾರೆ. ಈ ವೇಳೆ ಫನ್ನಿ ಟಾಕ್ ನಡೆದಿದೆ.

‘ಬೇರೆ ಸ್ಟಾರ್​ಗಳಿಗೆ ಆಫರ್ ಕೊಡದೇ ನನ್ನ ಬಳಿ ಮೊದಲು ಕಥೆ ತೆಗೆದುಕೊಂಡು ಬಂದ ಸಿನಿಮಾಗಳಲ್ಲಿ ಬಹುತೇಕವನ್ನು ನಾನು ಮಾಡಿದ್ದೇನೆ’ ಎಂದರು ಶಾರುಖ್ ಖಾನ್. ಆಗ ವಿಕ್ಕಿ ಕೌಶಲ್ ಅವರು ಶಾರುಖ್ ಖಾನ್ ಅವರು ರಿಜೆಕ್ಟ್ ಮಾಡಿದ ಹಲವು ಆಫರ್​ಗಳನ್ನು ಹೇಳಿದ್ದರು. ಈ ವೇಳೆ ಆಮಿರ್ ಖಾನ್ ಮಾಡಿದ ‘ಲಾಲ್ ಸಿಂಗ್ ಚಡ್ಡಾ’ ಬಗ್ಗೆ ಮಾತನಾಡಲಾಯಿತು.

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಹೀನಾಯವಾಗಿ ಸೋತಿದೆ. ಈ ಚಿತ್ರದಲ್ಲಿ ಆಮಿರ್ ಖಾನ್, ಕರೀನಾ ಕಪೂರ್ ನಟಿಸಿದ್ದರು. ಅದ್ವೈತ್ ಚಂದನ್ ಈ ಚಿತ್ರ ನಿರ್ದೇಶನ ಮಾಡಿದ್ದರು. ‘ಲಾಲ್ ಸಿಂಗ್ ಛಡ್ಡಾ ಸಿನಿಮಾ ನಿಮ್ಮ ಬಳಿ ಬರಬೇಕಿತ್ತಾ’ ಎಂದು ಕೇಳಿದ್ದರು. ಇದಕ್ಕೆ ಶಾರುಖ್ ಫನ್ನಿ ಆಗಿ ಉತ್ತರಿಸಿದ್ದಾರೆ. ‘ಆ ಚಿತ್ರವನ್ನು ಆಮಿರ್ ಖಾನ್ ಕೂಡ ಮಾಡಬಾರದಿತ್ತು’ ಎಂದರು. ‘ಐ ಲವ್ ಯೂ ಆಮಿರ್’ ಎಂದ ಶಾರುಖ್ ಲಾಲ್ ಸಿಂಗ್ ಚಡ್ಡಾ ಬಗ್ಗೆ ಹೇಳಿದ್ದು ಹಾಸ್ಯಕ್ಕಾಗಿ ಎಂದರು.

ಇದನ್ನೂ ಓದಿ:ಐಫಾನಲ್ಲಿ ಮಿಂಚು ಹರಿಸಿದ ನಟ ಶಾರುಖ್ ಖಾನ್, ಕಿಂಗ್ ಖಾನ್ ನೋಡಲು ಅಭಿಮಾನಿ ಸಾಗರ

‘ಲಾಲ್ ಸಿಂಗ್ ಚಡ್ಡಾ’ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾದ ಬಜೆಟ್ 180 ಕೋಟಿ ರೂಪಾಯಿ. ಆದರೆ, ಸಿನಿಮಾ ಗಳಿಸಿದ್ದು ಕೇವಲ 130 ಕೋಟಿ ರೂಪಾಯಿ. ಇದಾದ ಬಳಿಕ ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆಯಬೇಕಾಯಿತು.

‘ಪುಷ್ಪ’ ಸಿನಿಮಾ ಬಗ್ಗೆ ಚರ್ಚೆ ಬಂತು. ಈ ಟೈಟಲ್ ಕೇಳಿ ಶಾರುಖ್ ಖಾನ್ ಥ್ರಿಲ್ ಆದರು. ‘ಈಗಲೂ ನೋವು ಕೊಡುವ ವಿಚಾರದ ಬಗ್ಗೆ ನೀವು ಮಾತನಾಡಿದ್ದೀರಿ. ನಾನು ಪುಷ್ಪ ಸಿನಿಮಾ ಮಾಡಬೇಕಿತ್ತು. ಆದರೆ, ಅಲ್ಲು ಅರ್ಜುನ್ ಸರ್ ಸ್ವ್ಯಾಗ್​ನ ಮ್ಯಾಚ್ ಮಾಡೋಕೆ ನನಗೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಒಪ್ಪಿಕೊಂಡರು.

ಅಲ್ಲು ಅರ್ಜುನ್ ಅವರು ‘ಪುಷ್ಪ’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದರು. ಶಾರುಖ್ ಖಾನ್ ಅವರಿಗೆ ಈವರೆಗೆ ಯಾವುದೇ ರಾಷ್ಟ್ರ ಪ್ರಶಸ್ತಿ ಬಂದಿಲ್ಲ. ‘ಪುಷ್ಪ’ ಸಿನಿಮಾ ಮಾಡಿದ್ದರೂ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿರಲಿಲ್ಲವೇನೋ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ